ಆನೇಕಲ್: ರಾಜ್ಯದೆಲ್ಲೆಡೆ ಸೋಮವಾರ ಸಂಭ್ರಮದಿಂದ ಗಣೇಶ ಹಬ್ಬ ಆಚರಣೆ ಮಾಡಲಾಗಿದೆ. ಈ ನಡುವೆ ರಾಜ್ಯದ ಗಡಿಭಾಗ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಮುಸ್ಲಿಮರು, ಹಿಂದುಗಳಿಗೆ ಗಣೇಶ ಮೂರ್ತಿ ವಿತರಣೆ ಮಾಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ಮುಸ್ಲಿಂ ಮುಖಂಡ ಅಸ್ಲಾಂ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಮುಸ್ಲಿಮರು ಗಣೇಶ ಮೂರ್ತಿ ವಿತರಣೆ ಮಾಡಿದ್ದಾರೆ. ಗಣೇಶ ಮೂರ್ತಿ ಜತೆಗೆ ಪೂಜಾ ಸಾಮಗ್ರಿಯನ್ನು ನೀಡಲಾಗಿದೆ. ಈ ಮೂಲಕ ಮುಸ್ಲಿಮರು ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾದರು.
ಇದನ್ನೂ ಓದಿ | Ganesha Chathurhti : ಮುಂಬಯಿಯ ಈ ಗಣೇಶ ಜಗತ್ತಿಗೇ ಶ್ರೀಮಂತ; ಮೈಮೇಲೆ ಇದೆ 69 ಕೆ.ಜಿ ಚಿನ್ನ, 336 ಕೆ. ಜಿ ಬೆಳ್ಳಿ
ಸ್ವಗ್ರಾಮದಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿದ ಡಿಕೆಶಿ
ರಾಮನಗರ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸ್ವಗ್ರಾಮ, ಕನಕಪುರ ತಾಲೂಕಿನ ದೊಡ್ಡಾಲಹಳ್ಳಿಯಲ್ಲಿ ಗಣೇಶನಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪೂಜೆ ಸಲ್ಲಿಸಿದರು. ಗ್ರಾಮದ ಬೀದಿಯಲ್ಲಿ ಕೂರಿಸಿದ್ದ ಗಣೇಶನ ಮೂರ್ತಿಗೆ ಯುವಕರ ಜತೆಗೂಡಿ ಡಿಕೆಶಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ | Ganesha Chaturthi : ಬಣ್ಣ ಬಳಸದೆ ಸಿರಿಧಾನ್ಯದಿಂದಲೇ ಕಲರ್‌ಫುಲ್ ಗಣಪನ ಕ್ರಿಯೇಟ್ ಮಾಡಿದ ಹಾವೇರಿಯ ಗಣೇಶ
ಗಣೇಶ ಪೂಜೆಯಲ್ಲಿ ಮುಸ್ಲಿಮರು ಭಾಗಿ
ಮೈಸೂರು: ನಗರದ ಅಗ್ರಹಾರದ ಕುಂದೂರು ಮಠದ ರಸ್ತೆಯಲ್ಲಿ ಗಣೇಶನ ಮೂರ್ತಿ ಪೂಜೆಯಲ್ಲಿ ಮುಸ್ಲಿಂ ಯುವಕರು ಭಾಗಿಯಾಗಿ ಭಾವೈಕ್ಯತೆಯ ಸಂದೇಶ ಸಾರಿದರು. ಪರಸ್ಪರ ಸಿಹಿ ತಿನಿಸಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ಯುವಕರು ವಿನಿಮಯ ಮಾಡಿಕೊಡಿದ್ದು ಗಮನ ಸೆಳೆಯಿತು. ಶ್ರೀ ಗಣಪತಿ ಯುವಕರ ಸಂಘದಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.