ಮೈಸೂರು: ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ನಾಮಕರಣ ಸಮಾರಂಭದಲ್ಲಿ (Mysore Balloon Blast) ಏರ್ ಬಲೂನು ಸಿಡಿದು ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಸಾಗರ್ ಹಾಗೂ ಮೋನಿಕಾ ದಂಪತಿ ತಮ್ಮ ಮಗುವಿನ ನಾಮಕರಣ ಸಮಾರಂಭವನ್ನು ಹುಣಸೂರಿನ ಯಶಸ್ವಿನಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದರು.
ನಾಮಕರಣ ಶಾಸ್ತ್ರ ನೆರವೇರಿಸಲು ಮಗುವನ್ನು ಎತ್ತಿಕೊಂಡು ಬರುವಾಗ ಸಮೀಪದಲ್ಲಿ ಬಲೂನ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಮಗು ಅಪಾಯದಿಂದ ಪಾರಾಗಿದ್ದರೆ, ಬಲೂನ್ ಸಮೀಪದಲ್ಲಿ ಕುಳಿತಿದ್ದ ಪ್ರಶಾಂತ್ ಎಂಬುವವರ ಕೈಗೆ ಬೆಂಕಿ ತಗುಲಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: Road Accident: ಕೊಪ್ಪಳದಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದು ತಾಯಿ-ಮಗ ಮೃತ್ಯು; ನೆಲಮಂಗಲದಲ್ಲಿ ಆಟೋ ಪಲ್ಟಿಯಾಗಿ ಯುವಕ ಸಾವು
ಬಲೂನ್ ಅವಘಡದಿಂದ ಕುಟುಂಬಸ್ಥರು, ಸಂಬಂಧಿಕರು ಕ್ಷಣಕಾಲ ಗಾಬರಿಗೊಂಡಿದರು. ಕೂಡಲೇ ಗಾಯಗೊಂಡಿದ್ದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.
ಇತ್ತೀಚೆಗೆ ಯಾವುದೇ ಶುಭ ಸಮಾರಂಭ ಇದ್ದರೂ ಗ್ಯಾಸ್ ತುಂಬಿರುವ ಬಲೂನನ್ನು ಬಳಸುವುದು ಹೆಚ್ಚಾಗುತ್ತಿದೆ. ದೀರ್ಘಕಾಲದವರೆಗೆ ಬಲೂನ್ ಇರಬೇಕೆಂಬ ಕಾರಣಕ್ಕೆ ಈ ರೀತಿಯ ಗ್ಯಾಸ್ ಬಲೂನ್ ಬಳಕೆ ಮಾಡಲಾಗುತ್ತಿದೆ. ಇದೊಂದು ಒಂದು ರೀತಿ ಟ್ರೆಂಡ್ ಹಾಗೂ ಪ್ರತಿಷ್ಠೆ ಆಗಿ ಬದಲಾಗಿದೆ.
ಕ್ರೀಡಾ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ