Site icon Vistara News

Mysore Bangalore expressway: ಅಂಡರ್‌ ಪಾಸ್‌ ನಿರ್ಮಾಣ ಆಗ್ರಹಿಸಿ ಮಂಡ್ಯ ಬಳಿ ಹೆದ್ದಾರಿ ತಡೆದು ಪ್ರತಿಭಟನೆ; 2 ಗಂಟೆ ಕಾಲ ಸಂಚಾರ ಬಂದ್‌

mysore bangalore expressway in Hanakere villagers protest for Construction of underpass

mysore bangalore expressway in Hanakere villagers protest for Construction of underpass

ಮಂಡ್ಯ: ಇಲ್ಲಿನ ಹನಕೆರೆ ಬಳಿ ಅಂಡರ್‌ ಪಾಸ್ ನಿರ್ಮಾಣ (Underpass) ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಬೀದಿಗಿಳಿದು ಪ್ರತಿಭಟಿಸಿದರು. ಪೊಲೀಸರ ಲಾಠಿ ಏಟಿಗೂ ಜಗ್ಗದೇ ಹೆದ್ದಾರಿ ಪ್ರಾಧಿಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಮೈಸೂರು-ಬೆಂಗಳೂರು ದಶಪಥ (Mysore Bangalore expressway) ಹೆದ್ದಾರಿಗೆ ಎತ್ತಿನಗಾಡಿಗಳು, ಕಾರು, ಬೈಕ್‌, ಆಟೋ ನುಗ್ಗಿಸಿದರು.

ಈ ಹಿಂದೆ ಹಲವು ಪ್ರತಿಭಟನೆ ಮಾಡಿದರೂ ಕ್ಯಾರೇ ಎನ್ನದ ಹೆದ್ದಾರಿ ಪ್ರಾಧಿಕಾರದ ನಡೆಗೆ ಕಿಡಿಕಾರಿದರು. ಗ್ರಾಮದಿಂದ ಹೊರಗೆ ಅಂಡರ್ ಪಾಸ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಗ್ರಾಮದ ಬಳಿಯೇ ಅಂಡರ್ ಪಾಸ್ ಮಾಡುವಂತೆ ಆಗ್ರಹಿಸಿದರು.

ಲಾಠಿ ಏಟು ಕೊಟ್ಟ ಪೊಲೀಸರು

2 ಗಂಟೆಗೂ ಹೆಚ್ಚು ಕಾಲ ಹೈವೇ ಬಂದ್‌

ಹನಕೆರೆ ಗ್ರಾಮಸ್ಥರು ಹೈವೇ ರಸ್ತೆ ತಡೆದು ಪ್ರತಿಭಟಿಸಿದ್ದರಿಂದ ಸುಮಾರು ಎರಡು ಗಂಟೆಗೂ ಹೆಚ್ಚು‌ ಕಾಲ ಮೈಸೂರು- ಬೆಂಗಳೂರು ಬಂದ್ ಆಗಿತ್ತು. ಇದರಿಂದಾಗಿ ವಾಹನ ಸವಾರರು ನಿಂತಲೇ ನಿಲ್ಲುವಂತಾಯಿತು. ಗ್ರಾಮಸ್ಥರನ್ನು ಮನವೊಲಿಸಲು ಪೊಲೀಸರು ಮುಂದಾದಾರು ಯಾವುದೇ ಪ್ರಯೋಜನವಾಗಲಿಲ್ಲ. ಪೊಲೀಸರ ಮನವಿಗೂ ಬಗ್ಗದೆ ಇದ್ದಾಗ, ಬಲವಂತವಾಗಿ ಪ್ರತಿಭಟನಕಾರರನ್ನು ಎಬ್ಬಿಸಿದರು.

ರೈತ ಸಂಘದ ಮುಖಂಡ ಮಧುಚಂದನ್‌ರನ್ನು ವಶಕ್ಕೆ ಪಡೆದ ಪೊಲೀಸರು ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಲಘು ಲಾಠಿ ಪ್ರಹಾರ ಮಾಡಿ ಪ್ರತಿಭಟನಾಕಾರರು ಚದುರಿಸಿದರು. ಲಾಠಿ ಚಾರ್ಜ್ ಬಳಿಕ ಹೈವೇ ಬಿಟ್ಟು ಸರ್ವೀಸ್ ರಸ್ತೆಯಲ್ಲಿ ಪ್ರತಿಭಟನೆಗೆ ಗ್ರಾಮದ ಜನರು ಮುಂದಾದರು. ಪ್ರತಿಭಟನೆ ಉದ್ವಿಗ್ನ ರೂಪ ಪಡೆದುಕೊಳ್ಳುತ್ತಿದ್ದಂತೆ ಅಧಿಕಾರಿಗಳು ಪ್ರತಿಭಟನಾಕರರೊಂದಿಗೆ ಸಂಧಾನ ಮಾಡಲು ಮುಂದಾದರು.

ಅಂಡರ್ ಪಾಸ್‌ಗೆ ಒತ್ತಾಯಿಸಿ ಹನಕೆರೆ ಗ್ರಾಮಸ್ಥರ ಪ್ರತಿಭಟನೆ ಬಿಸಿ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ದೆಹಲಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮಂಡ್ಯ ಎಸ್‌ಪಿಗೆ ಪತ್ರ ಬರೆದಿದ್ದಾರೆ. ಅಂಡರ್ ಪಾಸ್ ನಿರ್ಮಾಣ ಮಾಡಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಪಡೆದು ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟಿದ್ದಾರೆ.

ಇದನ್ನೂ ಓದಿ: Sindhuri Vs Roopa : ರೋಹಿಣಿ ಸಿಂಧೂರಿಗೆ ರೂಪವೇ ಶತ್ರು; ಅವರು ಮೂರು ಕಾಲೇಜು ಬದಲಾಯಿಸಿದ್ದೇಕೆ?

ಸಂಸದ ಪ್ರತಾಪ್‌ ಸಿಂಹ

ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್‌ ಸಿಂಹ, ಹನಕೆರೆ ಬಳಿ ಅಂಡರ್ ಪಾಸ್‌ ನಿರ್ಮಾಣ ಮಾಡಲು ಆ ರಸ್ತೆ ಪ್ಲಾಟ್ ಇರುವ ಕಾರಣ 200 ಮೀ. ದೂರದಲ್ಲಿ ಇದೆ. ಈಗಾಗಲೇ ನ್ಯಾಷನಲ್ ಹೈವೇ ಅವರ ಬಳಿ ಮಾಹಿತಿ ಕೇಳಲಾಗಿದೆ. ಇದಕ್ಕಾಗಿ ಬೇರೆ ದಾರಿ ಹುಡುಕಿದ್ದೇವೆ, ರಸ್ತೆ ಪೂರ್ಣವಾದ ಬಳಿಕವೇ ಸಣ್ಣಪುಟ್ಟ ಸಮಸ್ಯೆಯನ್ನು ಪರಿಹರಿಸುತ್ತೇವೆ. ಹನಕೆರೆ ಬಳಿ ಮತ್ತೊಂದು ಅಂಡರ್ ಪಾಸ್ ನಿರ್ಮಾಣ ಮಾಡಲು NHAI ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಹೆದ್ದಾರಿ ತಡೆದು ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಇನ್ನು ಕೆಲವೇ ನಿಮಿಷಗಳಲ್ಲಿ ರಸ್ತೆ ತೆರವು ಮಾಡಲಾಗುವುದೆಂದು ತಿಳಿಸಿದ್ದಾರೆ.

ರಾಜಧಾನಿ ಬೆಂಗಳೂರಿನ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version