ಮೈಸೂರು: ಬೇಸಿಗೆಯಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತೆರವುಗೊಳಿಸಲು ಮೈಸೂರು-ಭುವನೇಶ್ವರ ನಿಲ್ದಾಣಗಳ ನಡುವೆ ಏಪ್ರಿಲ್ 9 ಮತ್ತು 10 ರಂದು ಒಂದು ಟ್ರಿಪ್ ವಿಶೇಷ ರೈಲು (Mysore to Bhubaneswar Trains) ಓಡಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಮೈಸೂರು-ಭುವನೇಶ್ವರ ಮಾರ್ಗದಲ್ಲಿ ಸಂಚರಿಸುವ ವಿಶೇಷ ರೈಲಿನ ವೇಳಾಪಟ್ಟಿ ಇಲ್ಲಿ ನೀಡಲಾಗಿದೆ.
- ಏಪ್ರಿಲ್ 9 ರಂದು ರೈಲು ಸಂಖ್ಯೆ 06215 ಮೈಸೂರು-ಭುವನೇಶ್ವರ ವಿಶೇಷ ಎಕ್ಸ್ ಪ್ರೆಸ್ ರೈಲು ಮೈಸೂರಿನಿಂದ ಬೆಳಗ್ಗೆ 4:15 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 10:40 ಗಂಟೆಗೆ ಭುವನೇಶ್ವರವನ್ನು ತಲುಪಲಿದೆ.
- ಏಪ್ರಿಲ್ 10 ರಂದು ರೈಲು ಸಂಖ್ಯೆ 06216 ಭುವನೇಶ್ವರ-ಮೈಸೂರು ವಿಶೇಷ ಎಕ್ಸ್ ಪ್ರೆಸ್ ರೈಲು ಭುವನೇಶ್ವರದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಸಂಜೆ 07:15 ಗಂಟೆಗೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.
ವಿಶೇಷ ರೈಲು ಮಂಡ್ಯ, ಕೆಎಸ್ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಕೃಷ್ಣರಾಜಪುರಂ, ವೈಟ್ ಫೀಲ್ಡ್, ಬಂಗಾರಪೇಟೆ, ಜೋಲಾರಪೆಟ್ಟೈ, ಕಟಪಾಡಿ, ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ತೆನಾಲಿ, ವಿಜಯವಾಡ, ಎಲೂರು, ರಾಜಮಂಡ್ರಿ, ಸಾಮಲಕೋಟೆ, ದುವ್ವಾಡ, ಕೊಟ್ಟವಲಸಾ, ವಿಜಯನಗರಂ, ಶ್ರೀಕಾಕುಳಂ ರೋಡ, ಪಾಲಸಾ, ಬ್ರಹ್ಮಪುರ ಮತ್ತು ಖುರ್ದಾ ರೋಡ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ವಿಶೇಷ ರೈಲು ಎಸಿ ಟು ಟಯರ್ ಬೋಗಿ-1, ಎಸಿ ತ್ರಿ ಟಯರ್-3, ಸ್ಲೀಪರ್ ಕ್ಲಾಸ್ ಬೋಗಿಗಳು-9, ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು-3 ಮತ್ತು ಎಸ್ಎಲ್ಆರ್ / ಡಿ -2 ಬೋಗಿಗಳು ಸೇರಿದಂತೆ ಒಟ್ಟು 18 ಬೋಗಿಗಳು ಇರಲಿವೆ.
ವಿಶೇಷ ಸೂಚನೆ: ಎಸಿ ಬೋಗಿಗಳಲ್ಲಿ ಬೆಡ್ ಶೀಟ್ ಮತ್ತು ಹೊದಿಕೆಯ ಸೌಲಭ್ಯ ಒದಗಿಸಲಾಗುವುದಿಲ್ಲ.
ಚೆನ್ನೈ-ಬೆಂಗಳೂರು-ಮೈಸೂರು: ಹೀಗಿದೆ ನೋಡಿ ವಂದೇ ಭಾರತ್ ರೈಲಿನ ವೇಳಾಪಟ್ಟಿ
ಬೆಂಗಳೂರು: ಮೈಸೂರು (mysore) ಮತ್ತು ಚೆನ್ನೈಗೆ (chennai) ಬೆಂಗಳೂರು (bengaluru) ಮೂಲಕ ತೆರಳುವ ಎರಡನೇ ವಂದೇ ಭಾರತ್ ಎಕ್ಸ್ ಪ್ರೆಸ್ (Vande Bharat Express) ರೈಲು ಸಂಚಾರ ಏಪ್ರಿಲ್ 5ರಂದು ಶುಕ್ರವಾರ ಚಾಲನೆಗೊಂಡಿದೆ. ಈ ಕುರಿತು ಮಾಹಿತಿ ನೀಡಿದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO), ಮಂಜುನಾಥ್ ಕನಮಡಿ, ನೈಋತ್ಯ ರೈಲ್ವೆ (SWR) ಮೈಸೂರಿನಲ್ಲಿ ಪ್ರೀಮಿಯಂ ರೈಲನ್ನು ನಿರ್ವಹಿಸಲು ಅಗತ್ಯ ಸೌಲಭ್ಯಗಳನ್ನು ಸಿದ್ಧಪಡಿಸಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ (PM) ನರೇಂದ್ರ ಮೋದಿ (Narendra modi) ಅವರು ಮಾರ್ಚ್ 12 ರಂದು ಈ ರೈಲಿಗೆ ಚಾಲನೆ ನೀಡಿದ್ದರು . ಆದರೆ ಮಾರ್ಚ್ 14 ಮತ್ತು ಏಪ್ರಿಲ್ 4 ರ ನಡುವೆ ಮೈಸೂರು ವಂದೇ ಭಾರತ್ ರೈಲುಗಳನ್ನು ನಿರ್ವಹಿಸುವ ಸೌಲಭ್ಯವನ್ನು ಹೊಂದಿಲ್ಲದ ಕಾರಣ ರೈಲು SMVT ಬೆಂಗಳೂರು ಮತ್ತು ಚೆನ್ನೈ ಸೆಂಟ್ರಲ್ ನಡುವೆ ಮಾತ್ರ ಓಡಾಟ ನಡೆಸಿತ್ತು.
ಇದನ್ನೂ ಓದಿ: Karnataka Weather : ನಾಳೆಯಿಂದ ಏ.11ರವರೆಗೆ ಅಬ್ಬರಿಸಲಿದ್ಯಾ ಮಳೆ; ಏನಂತಾರೆ ಹವಾಮಾನ ತಜ್ಞರು
ಮೈಸೂರಿನಿಂದ ಎಂಜಿಆರ್ ಚೆನ್ನೈ ನಿಲ್ದಾಣಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 6.20 ಗಂಟೆಗಳಿಗೆ ಕಡಿತಗೊಳಿಸುವ ಗುರಿಯನ್ನು ಹೊಂದಿದೆ. ಇಲ್ಲಿಯವರೆಗೆ, ಸೆಮಿ-ಹೈ ಸ್ಪೀಡ್ ರೈಲು SMVB ಮತ್ತು MGR ಚೆನ್ನೈ ಸೆಂಟ್ರಲ್ ನಡುವೆ ನಿಯಮಿತವಾಗಿ ಓಡುತ್ತಿತ್ತು. ಈಗ, ಕೆಳಗೆ ನೀಡಲಾದ ಸಮಯದ ಪ್ರಕಾರ ರೈಲು ಮೈಸೂರು ಮತ್ತು ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ನಿಯಮಿತವಾಗಿ ಸಂಚಾರ ನಡೆಸಲಿದೆ.
ಮೈಸೂರಿನಿಂದ ಎಂಜಿಆರ್ ಚೆನ್ನೈ (mysore-chennai)
ಮೈಸೂರು – ಎಂಜಿಆರ್ ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20663 ಮೈಸೂರಿನಿಂದ ಬೆಳಗ್ಗೆ 6 ಗಂಟೆಗೆ ಹೊರಟು ಬುಧವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ 12.20 ಗಂಟೆಗೆ ಎಂಜಿಆರ್ ಚೆನ್ನೈಗೆ ಆಗಮಿಸಲಿದೆ. ಈ ನಡುವೆ ರೈಲು ಮಂಡ್ಯ (06:28/06:30), SMVT ಬೆಂಗಳೂರು (07:45/07:50), ಕೃಷ್ಣರಾಜಪುರಂ (08:04/08:06) ಮತ್ತು ಕಟಪಾಡಿ (10: 33/10:35) ನಿಲುಗಡೆ ಮಾಡಲಿದೆ.
ಚೆನ್ನೈನಿಂದ ಮೈಸೂರು (chennai-mysore)
ಎಂಜಿಆರ್ ಚೆನ್ನೈ – ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20664 ಎಂಜಿಆರ್ ಚೆನ್ನೈನಿಂದ ೫ ಗಂಟೆಗೆ ಹೊರಟು ಬುಧವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ 11.20 ಕ್ಕೆ ಮೈಸೂರು ತಲುಪುತ್ತದೆ.
ಈ ರೈಲು ನಡುವೆ ರೈಲು ಕಟ್ಪಾಡಿ (18:23/18:25), ಕೃಷ್ಣರಾಜಪುರಂ (20:48/20:50), SMVT ಬೆಂಗಳೂರು (21:25/21:30), ಮತ್ತು ಮಂಡ್ಯ (22: 38/22:40) ರಲ್ಲಿ ನಿಲುಗಡೆ ಮಾಡಲಿದೆ.
ಇದನ್ನೂ ಓದಿ | Namma Metro : ಇಂದಿನಿಂದ 1 ವರ್ಷ ಬನ್ನೇರುಘಟ್ಟ ಮುಖ್ಯರಸ್ತೆಯ ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್ ರಸ್ತೆ ಬಂದ್
ಜುಲೈ ಅಂತ್ಯದಿಂದ ದಿನ ಬದಲಾವಣೆ
2024ರ ಜುಲೈ 30ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 20663/20664 ಮೈಸೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯು ನಿರ್ವಹಣೆಯ ಕಾರಣದಿಂದ ಬುಧವಾರದ ಬದಲು ಗುರುವಾರದಂದು ಓಡುವುದಿಲ್ಲ ಎಂದು ನೈಋತ್ಯ ರೈಲ್ವೆ (SWR) ಇತ್ತೀಚೆಗೆ ಪ್ರಯಾಣಿಕರಿಗೆ ಸೂಚನೆ ನೀಡಿದೆ.