ತೀರ್ಥಹಳ್ಳಿ: ರಾಜ್ಯದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ (Mysore VV) ನೂತನ ಉಪಕುಲಪತಿಗಳಾಗಿ ತೀರ್ಥಹಳ್ಳಿ ತಾಲೂಕಿನ ನೆರಟೂರು ಗ್ರಾಮದ ಪ್ರೊ. ಲೋಕನಾಥ್ ಅವರು ಆಯ್ಕೆಯಾಗಿದ್ದಾರೆ.
ಮೂಲತಃ ಭೌತಶಾಸ್ತ್ರದ ಪ್ರೊಫೆಸರ್ ಹಾಗೂ ವಿಜ್ಞಾನಿಯಾಗಿ 2014 ರಲ್ಲಿ ಕರ್ನಾಟಕ ಸರ್ಕಾರದ ಸರ್.ಸಿ.ವಿ. ರಾಮನ್ ಯುವ ವಿಜ್ಞಾನಿ ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಅಲ್ಲದೇ ದೇಶ ವಿದೇಶದಲ್ಲಿ ಹಲವು ವಿಚಾರ ಸಂಕಿರಣಗಳು ಹಾಗೂ ಉಪನ್ಯಾಸಗಳಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: Karnataka Election: ಹರಿಹರ ಶಾಸಕ ರಾಮಪ್ಪ ಬೆಂಬಲಿಗರಿಂದ ಸಿದ್ದರಾಮಯ್ಯ ಮನೆ ಮುಂದೆ ಗಲಾಟೆ; ಕೆನ್ನೆಗೆ ಬಾರಿಸಿದ ಸಿದ್ದು
ಈ ಮೊದಲು ತೀರ್ಥಹಳ್ಳಿಯವರೇ ಆದ ಮೇರು ಸಾಹಿತಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದರಲ್ಲದೇ ಕ್ಯಾಂಪಸ್ಸಿಗೆ ಮಾನಸ ಗಂಗೋತ್ರಿ ಎಂಬ ಹೆಸರು ಬರಲು ಕೂಡ ಕಾರಣರಾಗಿದ್ದರು. ಕುವೆಂಪು ಬಳಿಕ ತೀರ್ಥಹಳ್ಳಿ ತಾಲೂಕಿನವರಾಗಿ ಈ ಉನ್ನತ ಹುದ್ದೆಗೆ ಏರಿದ ಕೀರ್ತಿಗೆ ಪ್ರೊ. ಲೋಕನಾಥ್ ಭಾಜನರಾಗಿದ್ದಾರೆ. ಇವರು ನೆರಟೂರು ಗ್ರಾಮದ ಕೃಷ್ಣಪ್ಪ ಗೌಡ ದಂಪತಿಯ ಪುತ್ರ.
ಇದನ್ನೂ ಓದಿ: Pavitra-Naresh: ನರೇಶ್, ಪವಿತ್ರಾ ಲೋಕೇಶ್ ಜೋಡಿಯ ‘ಮತ್ತೆ ಮದುವೆ’ ಚಿತ್ರದ ಫಸ್ಟ್ ಲುಕ್ ರಿಲೀಸ್