ಮೈಸೂರು: ಡಿಸೆಂಬರ್ 25ರಂದು ಕ್ರಿಸ್ಮಸ್ ಮತ್ತು ಮುಂದೆ ಶಾಲೆಗಳಿಗೆ ರಜೆ ಇರುವುದರಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ (Mysore Zoo) ಹೆಚ್ಚಿನ ಪ್ರವಾಸಿಗರ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಡಿ.27ರ ಮಂಗಳವಾರ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಝೂಗೆ ಮಂಗಳವಾರ ರಜೆ ಇರುತ್ತದೆ.
ಈ ಸಂಬಂಧ ಮೃಗಾಲಯ ಪ್ರಾಧಿಕಾರವು ಪ್ರಕರಣೆ ಹೊರಡಿಸಿದ್ದು, ಕ್ರಿಸ್ಮಸ್ ಹಿನ್ನೆಲೆ ಹೊರ ರಾಜ್ಯ, ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುವ ಹಿನ್ನೆಲೆ ಮಂಗಳವಾರದ ವಾರದ ರಜೆಯನ್ನು ರದ್ದುಗೊಳಿಸಿದೆ. ಡಿಸೆಂಬರ್, ಜನವರಿ ತಿಂಗಳಲ್ಲಿ ಅಧಿಕ ಪ್ರಮಾಣದಲ್ಲಿ ಮೃಗಾಲಯಕ್ಕೆ ಪ್ರವಾಸಿಗರು ಭೇಟಿ ನೀಡಲಿದ್ದಾರೆ.
ಹೀಗಾಗಿ ಪ್ರವಾಸಿಗರ ಅನುಕೂಲಕ್ಕಾಗಿ ಡಿ.27ರ ಮಂಗಳವಾರದ ರಜೆ ರದ್ದುಗೊಳಿಸಲಾಗಿದೆ. ಮೃಗಾಲಯ ಜತೆಗೆ ಕಾರಂಜಿಕೆರೆ ಪ್ರಕೃತಿ ಉದ್ಯಾನವನವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುತ್ತಿದೆ.
ಇದನ್ನೂ ಓದಿ | ಸಂಪಾದಕೀಯ| ಒಗ್ಗಟ್ಟಿನಿಂದ ವೈರಸ್ ಎದುರಿಸೋಣ, ಬೇಡ ಕೊರೊನಾ ಪಾಲಿಟಿಕ್ಸ್