Site icon Vistara News

ಭಾರತೀ ಯೋಗಧಾಮದ ಅರ್ಧಮಂಡಲೋತ್ಸವ; ಅ. 29ರಂದು ವಾರ್ಷಿಕ ಕಾರ್ಯಕ್ರಮಗಳು ಪ್ರಾರಂಭ

Bharathi Yogadhama

ಮೈಸೂರು: ಭಾರತೀ ಯೋಗಧಾಮಕ್ಕೆ 24 ಸಂವತ್ಸರಗಳು ಸಂದ ಹಿನ್ನೆಲೆಯಲ್ಲಿ ಅರ್ಧಮಂಡಲೋತ್ಸವ ಆಯೋಜಿಸಲಾಗಿದೆ. ಇದರ ಭಾಗವಾಗಿ ವರ್ಷಪೂರ್ತಿ ನಡೆಯಲಿರುವ ಕಾರ್ಯಕ್ರಮಗಳ ಪ್ರಾರಂಭೋತ್ಸವವನ್ನು ಅಕ್ಟೋಬರ್‌ 29ರಂದು ನಗರದ ಉತ್ತನಹಳ್ಳಿ ವಿಜಯಗಿರಿಯ ಭಾರತೀ ಯೋಗಧಾಮದಲ್ಲಿ ಹಮ್ಮಿಕೊಳ್ಳಲಾಗಿದೆ.

ಅ.29ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 7ರವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮೈಸೂರಿನ ಅಷ್ಟಾಂಗಯೋಗ ವಿಜ್ಞಾನ ಮಂದಿರಮ್ ಅಧ್ಯಕ್ಷ ಡಾ. ಟಿ. ಶ್ರೀನಿವಾಸ್ ಅವರು ಉದ್ಘಾಟಿಸಲಿದ್ದು, ಅಭ್ಯಾಗತರಾಗಿ ಖ್ಯಾತ ಸಂಸ್ಕೃತಿ ಚಿಂತಕರಾದ ಡಾ. ವಿ. ಬಿ. ಆರತಿ, ಭಾರತೀ ಯೋಗಧಾಮದ ಸಂಸ್ಥಾಪಕ ಡಾ. ಕೆ. ಎಲ್. ಶಂಕರನಾರಾಯಣ ಜೋಯ್ಸ್‌ ಭಾಗವಹಿಸಲಿದ್ದಾರೆ.

‘ಸ್ವಾಸ್ಥ್ಯ’ ಸಂವಾದ

ಬೆಳಗ್ಗೆ 11.30ಕ್ಕೆ ‘ಸ್ವಾಸ್ಥ್ಯ’ – ಒಂದು ಬಹುಶಾಸ್ತ್ರೀಯ ಚಿಂತನ ಸಂವಾದ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಜ್ಯೋತಿಷ, ಆಯುರ್ವೇದ, ಧರ್ಮಶಾಸ್ತ್ರ, ಯೋಗವಿದ್ಯೆಗಳ ಹಿನ್ನೆಲೆಯಲ್ಲಿ ಸ್ವಾಸ್ಥ್ಯದ ಕುರಿತಾಗಿ ಆಪ್ತ ಸಂವಾದ ನಡೆಯಲಿದೆ. ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಕೆ. ಎಲ್. ಶಂಕರನಾರಾಯಣ ಜೋಯ್ಸ್‌ ವಹಿಸಲಿದ್ದಾರೆ. ವಿ.ಅನಂತ ಬಿ.ಜಿ- ಧರ್ಮಶಾಸ್ತ್ರ, ಡಾ.ಪ್ರಸನ್ನ ವೆಂಕಟೇಶ್-‌ ಆಯುರ್ವೇದ, ವಿ. ಗಣಪತಿ ಭಟ್ಟರು- ಜ್ಯೋತಿಷ, ಮಧುಕೇಶ್ವರ ಹೆಗ್ಗಡೆ- ಯೋಗಶಾಸ್ತ್ರದ ಬಗ್ಗೆ ಸಂವಾದ ನಡೆಸಲಿದ್ದಾರೆ.

ತ್ರಯೀಯೋಗ ಶಿಕ್ಷಣ ವಿಭಾಗದ ಲೋಕಾರ್ಪಣೆ

ಮಧ್ಯಾಹ್ನ 1.30ಕ್ಕೆ ಭೋಜನ ವಿರಾಮ ಇರಲಿದೆ. ನಂತರ 2.30ಕ್ಕೆ ಖ್ಯಾತ ಯುವಗಾಯಕಿ ಕು. ಸದ್ವಿನೀ ಕೊಪ್ಪ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮವಿರಲಿದೆ. ಸಂಜೆ 4 ಗಂಟೆಗೆ ತ್ರಯೀಯೋಗ ಶಿಕ್ಷಣ ವಿಭಾಗದ ಲೋಕಾರ್ಪಣೆ ಹಾಗೂ ಸಮಾರೋಪ ಸಮಾರಂಭವಿರಲಿದೆ.

ಅಭ್ಯಾಗತರಾಗಿ ಐಐಟಿ ಮದ್ರಾಸ್‌ನ ನಿವೃತ್ತ ಪೀಠಪ್ರಾಧ್ಯಾಪಕ ಪ್ರೊ. ಕೆ. ಎಸ್. ಕಣ್ಣನ್, ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಅಮೆರಿಕದ ಸದ್ವಿದ್ಯಾ ಫೌಂಡೇಶನ್ ಅಧ್ಯಕ್ಷ ಜೊನಾಥನ್ ಮಾರ್ಕ್ ಫಿಶರ್ ಉಪಸ್ಥಿತರಿರಲಿದ್ದಾರೆ. ಡಾ. ಕೆ. ಎಲ್. ಶಂಕರನಾರಾಯಣ ಜೋಯ್ಸ್‌ ಅವರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಸಂಸ್ಥಾನ ಗೋಕರ್ಣ, ಶ್ರೀ ರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಅವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.

ಯೋಗ ಪ್ರದರ್ಶಿನೀ

ಸಂಜೆ 6.15 ಗಂಟೆಗೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಹಿತ್ಯ ಸಂಗೀತದೊಂದಿಗೆ ಸಮ್ಮಿಲಿತವಾದ ವಿಶಿಷ್ಟ ಯೋಗಾಸನ ಪ್ರದರ್ಶನವಿರಲಿದೆ.

ಇದನ್ನು ಓದಿ | Kannada Pustaka Habba: ನ.1 ರಿಂದ ರಾಷ್ಟ್ರೋತ್ಥಾನ ಸಾಹಿತ್ಯದ ʼಕನ್ನಡ ಪುಸ್ತಕ ಹಬ್ಬʼ

ಅರ್ಧಮಂಡಲೋತ್ಸವದ ಅಂಗವಾಗಿ ವರ್ಷವಿಡೀ ನಡೆಯಲಿರುವ ಕಾರ್ಯಕ್ರಮಗಳು

Exit mobile version