Site icon Vistara News

Elephant Attack: ಕಾಡಾನೆ ತುಳಿತಕ್ಕೆ ಹಾಡಿ ನಿವಾಸಿ ಬಲಿ

Elephant attack

ಮೈಸೂರು: ಕಾಡಂಚಿನ ಭಾಗದಲ್ಲಿ ಕಾಡು ಪ್ರಾಣಿ‌ ಹಾಗೂ ಮಾನವ ಸಂಘರ್ಷ (human wildlife conflict) ಮುಂದುವರಿದಿದ್ದು, ಕಾಡಾನೆ ತುಳಿತಕ್ಕೆ (Elephant Attack) ಹಾಡಿ‌ ನಿವಾಸಿಯೊಬ್ಬರು ಬಲಿಯಾಗಿದ್ದಾರೆ.

ನಾಗರಹೊಳೆ ಅರಣ್ಯ (Nagarahole forest) ಪ್ರದೇಶದ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ಎಚ್.ಡಿ ಕೋಟೆ ತಾಲ್ಲೂಕು ಮಾಸ್ತಿ ಗುಡಿ ಪುನರ್ವಸತಿ ಕೇಂದ್ರದ ನಿವಾಸಿ ವಸಂತ (36) ಸಾವಿಗೀಡಾದ ವ್ಯಕ್ತಿ.

ಮುಂಜಾನೆ ಜೋಳದ ಹೊಲದಲ್ಲಿ ವಸಂತ ಬರ್ಹಿದೆಸೆಗೆ ತೆರಳಿದ ವೇಳೆ ಹೊಲದಲ್ಲಿದ್ದ ಕಾಡಾನೆ ದಾಳಿ ನಡೆಸಿದೆ. ಕತ್ತಲಲ್ಲಿ ಕಾಡಾನೆ ಇರುವುದು ಕಾಣಿಸದ ಪರಿಣಾಮ ವಸಂತ ಅದರ ಹತ್ತಿರಕ್ಕೆ ಹೋಗಿದ್ದು, ಕ್ಷಣಾರ್ಧದಲ್ಲಿ ಆನೆ ಇವರನ್ನು ಕಾಲಿನಡಿ ಹೊಸಕಿ ಹಾಕಿ ಹೋಗಿದೆ. ಸ್ಥಳಕ್ಕೆ ಹಿರಿಯ ಅರಣ್ಯ ಇಲಾಖೆ‌‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಊರಿಗೆ ಬಂದ ಕರಡಿ

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕು ಕೋಡಹಳ್ಳಿ ಗ್ರಾಮದಲ್ಲಿ ಕರಡಿ ಸಂಚಾರ ಕಂಡುಬಂದಿದೆ. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮದಲ್ಲಿ ಬೆಳಗ್ಗೆ 4.30ರ ಸುಮಾರಿಗೆ ಕರಡಿ ಪ್ರತ್ಯಕ್ಷವಾಗಿದೆ.

ಕೋಡಹಳ್ಳಿ ಗ್ರಾಮದಿಂದ 8 ಕಿ.ಮೀ. ದೂರದಲ್ಲಿರುವ ಚಿಕ್ಕಮ್ಮತಾಯಿ ಬೆಟ್ಟ ಕರಡಿಗಳ ವಾಸಸ್ಥಾನವಾಗಿದ್ದು, ಕಳೆದ 15 ದಿನಗಳಿಂದ ಕರಡಿ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇಂದು ನೇರವಾಗಿ ಊರಿಗೆ ಎಂಟ್ರಿ ನೀಡಿದೆ. ಒಂದು ರೌಂಡ್ ಊರು ಸುತ್ತಾಡಿ ವಾಪಸ್ ಬೆಟ್ಟದತ್ತ ಹೋಗಿದೆ. ಗ್ರಾಮದೊಳಗೆ ಕರಡಿ ಸಂಚಾರ ತಪ್ಪಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ಅನುಮಾನ ತಂದ ಚಿರತೆ ಸಾವು; ಕಾಡಾನೆಗಳ ಉಪಟಳ, ಶುರುವಾಗಿದೆ ಹುಲಿ ದಾಳಿ ಕಳವಳ

Exit mobile version