ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಯೊಂದು ಅನೇಕರ ಮೇಲೆ ದಾಳಿ ಮಾಡಿದೆ.
ವೀರನಹೊಸಹಳ್ಳಿ ವ್ಯಾಪ್ತಿಯ ಅರಣ್ಯ ಗಡಿಯಿಂದ ಸುಮಾರು 1 ಕಿಮೀ ದೂರದಲ್ಲಿರುವ ಹುಣಸೂರು ತಾಲೂಕಿನ ಕೊಳವಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರಣ್ಯದ ಗಡಿಯಿಂದ ಹೊರಗೆ ಆಹಾರ ಹುಡುಕುತ್ತಿದ್ದ ಕಾಡಾನೆಯೊಂದು ವೃದ್ಧೆ ಮೇಲೆ ಸಲಗ ದಾಳಿ, ದನ ಮೇಯಿಸುತ್ತಿದ್ದ ಲಕ್ಷ್ಮಮ್ಮ ಮೇಲೆ ದಾಳಿ ಮಾಡಿದೆ. ನಂತರ ಕಾಳೇಗೌಡ ಎಂಬವರ ಹಸುವನ್ನು ತಿವಿದು ಸಾಯಿಸಿದೆ. ಲಕ್ಷ್ಮಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕೂಡಲೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಲಗಾಲು ಮತ್ತು ಕೈ ಮೂಳೆ ಮುರಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ | ಮೈಸೂರಿನಲ್ಲಿ ಬೋರ್‌ವೆಲ್ ಲಾರಿ ಮಗುಚಿಬಿದ್ದು ಓರ್ವ ಸಾವು
ಘಟನಾ ಸ್ಥಳಕ್ಕೆ ವ್ಯಾಪ್ತಿಯ ಅರಣ್ಯಾಧಿಕಾರಿ ಸೇರಿ ಇನ್ನಿತರೆ ಅಧಿಕಾರಿಗಳು ಆಗಮಿಸಿ ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರುಪಡಿಸುವಂತೆ ಒತ್ತಾಯಿಸಿ ಸ್ಥಳೀಯರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದರಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ವೀರನ ಹೊಸಳ್ಳಿ ವಲಯ ಅರಣ್ಯಧಿಕಾರಿ ನಮನ್ ನಾರಾಯಣ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ | ನಲಪಾಡ್ ಅವರಿಗೆ ಸೇರಿದ್ದೆಂದು ಗೊತ್ತಿರಲಿಲ್ಲ ಎಂದ ಕೃತಿಕಾ: ಮೈಸೂರು ಹೋಟೆಲ್ ಗಲಾಟೆ