ಮೈಸೂರು: ಕೆ.ಆರ್.ನಗರದ ಚುಂಚನಕಟ್ಟೆಯಲ್ಲಿ ಪ್ರತಿಷ್ಠಾಪನೆಯಾಗಲಿರುವ 31 ಅಡಿ ಎತ್ತರದ ಹನುಮಾನ್ ವಿಗ್ರಹ ಮೈಸೂರಿನಲ್ಲಿ ಸಿದ್ಧಗೊಂಡಿದೆ.
31 ಅಡಿ ಎತ್ತರ, 28- 30 ಟನ್ ತೂಕದ ಏಕ ಶಿಲಾ ಮೂರ್ತಿ ಇದಾಗಿದ್ದು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ತಂಡ ಇದನ್ನು ಕೆತ್ತನೆ ಮಾಡಿದೆ.
ಶಾಸಕ ಸಾ.ರಾ. ಮಹೇಶ್ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ಪ್ರವಾಸೋದ್ಯಮ ಇಲಾಖೆಯಿಂದ 40 ಲಕ್ಷ ರೂಪಾಯಿ ವೆಚ್ಚದ ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು.
ಸ್ಥಳಾಂತರ: ಮೈಸೂರಿನಲ್ಲಿ ಕೆತ್ತನೆ ಮಾಡಲಾದ ಈ ವಿಗ್ರಹವನ್ನು ಶುಕ್ರವಾರ ಸಂಜೆ ಕೆ.ಆರ್. ನಗರದ ಚುಂಚನಕಟ್ಟೆಗೆ ಸ್ಥಳಾಂತರ ಮಾಡಲಾಯಿತು. ಕ್ರೇನ್ ಮೂಲಕ ಎತ್ತಿ ತೆರೆದ ಲಾರಿಗೆ ಇಟ್ಟು ಸಾಗಿಸಲಾಯಿತು.’
ಅದಕ್ಕೂ ಮುನ್ನ ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೂರ್ತಿಯ ವೀಕ್ಷಣೆ ಮಾಡಿ ಶಿಲ್ಪಿಗಳ ಕೈಚಳಕವನ್ನು ಶ್ಲಾಘಿಸಿದರು. ಶಿಲ್ಪಿಯಾಗಿರುವ ಅರುಣ್ ಯೋಗರಾಜ್ ಅವರು ಈ ಹಿಂದೆ ಆದಿ ಶಂಕರಾಚಾರ್ಯರ 12 ಅಡಿಯ ಪ್ರತಿಮೆಯನ್ನು ಕೆತ್ತುವ ಮೂಲಕ ದೇಶಾದ್ಯಂತ ಮನೆ ಮಾತಾಗಿದ್ದರು. ಇದನ್ನು ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾಗಿತ್ತು.
ಇದನ್ನೂ ಓದಿ | ʼಮೈಸೂರು ಹುಲಿʼಯನ್ನು ಕೈಬಿಟ್ಟಿಲ್ಲ: ಟಿಪ್ಪು ಸುಲ್ತಾನ್ ಪಾಠ ಇರಲಿದೆ ಎಂದ ನಾಗೇಶ್