Site icon Vistara News

ಮೈಸೂರು ರೈಲು ನಿಲ್ದಾಣ ವಿಸ್ತರಣೆಗೆ ನಾಳೆ ಮೋದಿ ಚಾಲನೆ

ಸಂಸದ ಪ್ರತಾಪ್ ಸಿಂಹ

ಮೈಸೂರು: ಜೂನ್‌ 21ರಂದು ವಿಶ್ವ ಯೋಗ ದಿನಾಚರಣೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ರೈಲು ನಿಲ್ದಾಣದ ವಿಸ್ತರಣೆ ಯೋಜನೆಗೂ ಚಾಲನೆ ನೀಡಲಿದ್ದಾರೆ.

ಮೈಸೂರಿನ ರೇಸ್‌ ಕೋರ್ಸ್‌ ಮೈದಾನದಲ್ಲಿ ಲಕ್ಷಾಂತರ ಯೋಗಪಟುಗಳ ಸಮ್ಮುಖದಲ್ಲಿ ಯೋಗ ದಿನಾಚರಣೆಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಮೈಸೂರು ರೈಲು ನಿಲ್ದಾಣ ವಿಸ್ತಾರಕ್ಕೂ ಚಾಲನೆ ನೀಡಲಿದ್ದಾರೆ.

ಸುಮಾರು ಮೂರು ಹೆಚ್ಚುವರಿ ಪ್ಲಾಟ್ ಫಾರ್ಮ್‌ಗಳನ್ನು 488 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆ ಸಿದ್ಧವಾಗುತ್ತಿದೆ. ರೈಲು ನಿಲ್ದಾಣದ ಸುತ್ತ 65 ಎಕರೆ ಜಾಗದಲ್ಲಿ ವಸತಿ ಗೃಹವಿದೆ. ಅದನ್ನು ನೆಲಸಮ ಮಾಡಿದರೆ ನಮಗೆ ಜಾಗ ಸಿಗಲಿದೆ. ವಸತಿ ಗೃಹಗಳು ಶಿಥಿಲಾವಸ್ಥೆ ತಲುಪಿವೆ. ವಸತಿ ಗೃಹದ ನಿವಾಸಿಗಳಿಗೆ ಪರ್ಯಾಯವಾಗಿ ಸುಸಜ್ಜಿತ ವಸತಿಗೃಹ ರಚಿಸುತ್ತೇವೆ. ಮೋದಿಯವರು ಮೈಸೂರಿಗೆ ಬಂದ ನಂತರ 500 ಕೋಟಿ ರೂ. ಅನುದಾನ ಪಡೆಯಬಹುದು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಇದನ್ನೂ ಓದಿ| ದೇಶದ ಮೊದಲ ಖಾಸಗಿ ರೈಲು ಸಂಚಾರ ಆರಂಭ: ಏನಿರಲಿದೆ ವಿಶೇಷತೆ?

Exit mobile version