Site icon Vistara News

Road Accident: ಬೈಕ್‌ಗಳ ಮುಖಾಮುಖಿ ಡಿಕ್ಕಿ; ಹೆಲ್ಮೆಟ್‌ರಹಿತ ಸವಾರಿಗೆ ಇಬ್ಬರ ಬಲಿ

mysore road accident news

ಮೈಸೂರು: ಎರಡು ಬೈಕುಗಳ ನಡುವೆ (bike hit) ಮುಖಾಮುಖಿ ಡಿಕ್ಕಿ (Road Accident) ಸಂಭವಿಸಿದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ (two death) ಸಾವಿಗೀಡಾಗಿದ್ದಾರೆ. ಈ ದುರಂತ ತಿರುಮಕೂಡಲು ನರಸೀಪುರ ತಾಲೂಕಿನ (Mysore news) ಹೆಳವರಹುಂಡಿ ಬಳಿ ನಡೆದಿದೆ. ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ ಎಂದು ಗೊತ್ತಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಬಿಳಿಗಿರಿ (30‌) ಹಾಗೂ ತಿ.ನರಸೀಪುರ ತಾಲ್ಲೂಕಿನ ಆದಿಬೆಟ್ಟಳ್ಳಿ ಗ್ರಾಮದ ನಾಗರಾಜು (35) ಮೃತ ದುರ್ದೈವಿಗಳು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನ ಹಿಂಬದಿಯಲ್ಲಿಯೂ ಇಬ್ಬರು ಸವಾರರು ಕುಳಿತಿದ್ದು, ಅಪಘಾತದಲ್ಲಿ (road accident) ಅವರಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಮೃತರ ಕುಟುಂಬಸ್ಥರ ಆಕ್ರಂದನ ಕಂಡುಬಂತು. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್‌ ಅಪಘಾತ ನಡೆದ ಸ್ಥಳದಲ್ಲಿ ಯಾವುದೇ ತಿರುವು ಇಲ್ಲ. ಹಾಗಿದ್ದರೂ ಎರಡು ಬೈಕ್‌ಗಳು ಡಿಕ್ಕಿ ಹೊಡೆದುಕೊಂಡದ್ದು ಹೇಗೆ ಎಂಬುದು ಗೊತ್ತಾಗಿಲ್ಲ. ಬೈಕ್‌ಗಳಿಗೆ ಹೆಚ್ಚಿನ ಹಾನಿಯಾಗಿಲ್ಲ. ಇಬ್ಬರೂ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ.

ಮರಕ್ಕೆ ಬೈಕ್‌ ಡಿಕ್ಕಿಯಾಗಿ ಸವಾರ ಸಾವು

ಯಲಹಂಕ: ನಿಯಂತ್ರಣ ತಪ್ಪಿ ಮರಕ್ಕೆ ಬೈಕ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ (Bike Accident) ಬೆಂಗಳೂರು ಹೊರಹೊಲವಯದ ಯಲಹಂಕ ತಾಲೂಕಿನ ಚಲ್ಲಹಳ್ಳಿ ಸಮೀಪ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಮೂಲದ ಯೋಗೇಶ್ (19) ಮೃತ ದುರ್ದೈವಿ.

ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುವ ವೇಳೆ ಅಪಘಾತ ನಡೆದಿದೆ. ವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದಿದ್ದಿಂದ ಗಂಭೀರವಾಗಿ ಗಾಯಗೊಂಡ ಸವಾರ ಮೃತಪಟ್ಟಿದ್ದಾನೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ನಡುವಿನ ಜಾಹೀರಾತು ಫಲಕಕ್ಕೆ ಕಾರು ಡಿಕ್ಕಿ; ನಾಲ್ವರಿಗೆ ಗಂಭೀರ ಗಾಯ

ಯಲಹಂಕ: ರಸ್ತೆ ನಡುವಿನ ಜಾಹೀರಾತು ಫಲಕಕ್ಕೆ ಕಾರು ಡಿಕ್ಕಿಯಾಗಿ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯ ಪುಟ್ಟೇನಹಳ್ಳಿ ಬಳಿ ನಡೆದಿದೆ. ರಸ್ತೆ ವಿಭಜಕದಲ್ಲಿದ್ದ ನಾಮಫಲಕಕ್ಕೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ದೊಡ್ಡಬಳ್ಳಾಪುರ ಕಡೆಯಿಂದ ತೆರಳುತ್ತಿದ್ದ ಸ್ಕೋಡಾ ಕಾರು ಡಿವೈಡರ್‌ನಲ್ಲಿದ್ದ ಜಾಹೀರಾತು ಫಲಕಕ್ಕೆ ಡಿಕ್ಕಿಯಾಗಿದ್ದರಿಂದ ನಾಲ್ವರು ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು ದಾಖಲಿಸಿದ್ದಾರೆ. ಅಪಘಾತ ಹಿನ್ನೆಲೆಯಲ್ಲಿ ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಕ್ರೇನ್ ಮೂಲಕ ಕಾರನ್ನು ತೆರವು ಮಾಡಿದರು.

ಇದನ್ನೂ ಓದಿ: Money Guide: ಸೈಬರ್‌ ಅಪರಾಧದ ಹೊಸ ತಂತ್ರ ʼಮನಿ ಮ್ಯೂಲ್‌ʼ; ಈ ಮೋಸದ ಬಲೆಗೆ ಬೀಳದಿರಲು ಹೀಗೆ ಮಾಡಿ

Exit mobile version