ಮೈಸೂರು: ನಗರದ ಭಾರತೀಯ ಜ್ಞಾನ ವಿಜ್ಞಾನ ಪರಿಷತ್ ವತಿಯಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ಕರ್ನಾಟಕ) ಹಾಗೂ ಸಾತ್ವಿಕ್ ಫೌಂಡೇಶನ್ ಕಾಗಾರಕೊಡ್ಲು ಸಹಯೋಗದಲ್ಲಿ ನಡೆಸಲಾಗಿದ್ದ ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ʼಭಾರತೀಯತೆಯ ಗರಿಮೆʼ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆಸಲಾಗಿತ್ತು. ಇದರಲ್ಲಿ ಉಡುಪಿಯ ಶೈಲೇಶ್ ವೈ. ಆಚಾರ್ಯ ಪ್ರಥಮ ಸ್ಥಾನ ಪಡೆದಿದ್ದು, ಬಂಕನಾಳ ಕುಪ್ಪಳ್ಳಿಯ ಟಿ.ಎಂ. ಜಗದೀಶ ದ್ವಿತೀಯ ಸ್ಥಾನ, ಸಾಗರದ ಜಯ ಪ್ರಕಾಶ ತಲವಾಟ ತೃತೀಯ ಸ್ಥಾನ ಪಡೆದಿದ್ದು ಹಾಗೂ ನಾಲ್ವರಿಗೆ ಪ್ರೋತ್ಸಾಹಕ ಬಹುಮಾನ ಘೋಷಿಸಲಾಗಿದೆ.
ಕಾರವಾರದ ಕೈಗಾದ ಪ್ರದೀಪ ಐ. ಹೆಗಡೆ, ಯಲ್ಲಾಪುರದ ಉಮ್ಮಚಗಿಯ ಭಾರತೀ ಹೆಗಡೆ, ಶಿರಸಿಯ ವನಿತಾ ಹೆಗಡೆ ಹಾಗೂ ಯಲ್ಲಾಪುರದ ಹಿತ್ಲಳ್ಳಿಯ ಮೇದಿನೀ ಸೋಹಮ್ ಪತ್ರೆಕರ್ ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ | NEP 2020: ಶಿಕ್ಷಣವು ಉದ್ಯೋಗ ಕೊಡುವ ಆಲೋಚನೆ ಬೆಳೆಸಬೇಕು: ಹರಿಪ್ರಕಾಶ್ ಕೋಣೆಮನೆ
ಪ್ರಬಂಧ ಸ್ಪರ್ಧೆಯ ನಿರ್ಣಾಯಕರಾಗಿ ನಿವೃತ್ತ ಪ್ರಾಧ್ಯಾಪಕ, ಪ್ರಸಿದ್ಧ ಕೃತಿಕಾರ, ಅರ್ಥದಾರಿ ಶ್ರೀಧರ ಡಿ.ಎಸ್, ನಿವೃತ್ತ ಪ್ರಾಚಾರ್ಯರಾದ ಡಾ.ಶೀಲಾ ಅರಕಲಗೂಡು ಹಾಗೂ ದಾಂಡೇಲಿ ಕಾಲೇಜಿನ ಕನ್ನಡ ಪ್ರಧ್ಯಾಪಕ ಡಾ.ಜಿ.ಎಸ್.ಹೆಗಡೆ ಅವರು ಸಹಕರಿಸಿದ್ದಾರೆ.