ಗುಂಡ್ಲುಪೇಟೆ: ಗುಂಡ್ಲುಪೇಟೆ ಪಟ್ಟಣದ ಮಾರ್ಗವಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766ನ್ನು ನಂಜನಗೂಡಿನಿಂದ ಕೇರಳದ ಗಡಿವರೆಗೆ ಅಭಿವೃದ್ಧಿಗೊಳಿಸಿ ರಸ್ತೆ ವಿಭಜಕ ಅಳವಡಿಸಬೇಕು ಎಂದು ಗುಂಡ್ಲುಪೇಟೆ ಶಾಸಕ ಸಿ. ಎಸ್. ನಿರಂಜನಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕೇರಳ ಹಾಗು ತಮಿಳುನಾಡು ಗಡಿಯವರೆಗೂ ಡಬಲ್ ರೋಡ್ ಮಾಡಿ ರಸ್ತೆ ಅಭಿವೃದ್ಧಿ ಪಡಿಸಿ. ಕಾಡಿನಲ್ಲಿ ರಸ್ತೆ ಅಗಲೀಕರಣ ಹಾಗೂ ವಿಭಜಕ ಅಳವಡಿಸಬೇಕು. ನಂಜನಗೂಡಿವರೆಗೆ 4 ಪಥದ ರಸ್ತೆ ಇದ್ದು, ಮಧ್ಯದಲ್ಲಿ ವಿಭಜನಕವಿದೆ. ನಂಜನಗೂಡಿನಿಂದ ಗುಂಡ್ಲುಪೇಟೆಯ ಮೂಲಕ ಸಾಗಿ ಕೇರಳದ ಗಡಿವರೆಗೆ ದ್ವಿಪಥ ರಸ್ತೆ ಇದ್ದು, ವಿಭಜಕ ಇಲ್ಲ. ಈ ಭಾಗದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿ ಪ್ರಾಣ ಹಾನಿಯಾಗುತ್ತಿವೆ ಮತ್ತು ಕೃಷಿ ಉತ್ಪನ್ನ ಸಾಗಣೆಗೆ ರೈತರಿಗೂ ತೊಂದರೆಯಾಗುತ್ತಿದೆ. ಇದನ್ನು ತಡೆಯುದಕ್ಕಾಗಿ ರಸ್ತೆಯನ್ನು ವಿಸ್ತರಿಸಿ ವಿಭಜಕ ಅಳವಡಿಸಬೇಕು. ಇದರಿಂದ ಅಪಘಾತಗಳನ್ನು ತಡೆಯಬಹುದು ಎಂದು ನಿರಂಜನಕುಮಾರ್ ಅವರು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ| ಹೈವೇ ನಿರ್ಮಾಣದಲ್ಲಿ ಅದ್ಭುತ ಸಾಧನೆ; ಗಿನ್ನಿಸ್ ದಾಖಲೆ ಬರೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ