Site icon Vistara News

NAAC Review Team: ಮಂಗಳೂರು ಬೆಸೆಂಟ್ ಮಹಿಳಾ ಕಾಲೇಜಿಗೆ ನ್ಯಾಕ್ ಪರಿವೀಕ್ಷಣಾ ತಂಡ ಭೇಟಿ

besant

besant

ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಬೆಸೆಂಟ್ ಮಹಿಳಾ ಕಾಲೇಜಿಗೆ (Besant Women’s College) ನ್ಯಾಕ್ ಪರಿವೀಕ್ಷಣಾ ತಂಡ (NAAC Review Team) ನವೆಂಬರ್ 28 ಹಾಗೂ 29ರಂದು ಭೇಟಿ ನೀಡಿತು.

ನ್ಯಾಕ್ ಪರಿವೀಕ್ಷಣಾ ತಂಡದಲ್ಲಿ ಮಹಾತ್ಮಾಗಾಂಧಿ ಕಾಶಿ ವಿದ್ಯಾಪೀಠ, ವಾರಣಾಸಿಯ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಕೃಪಾ ಶಂಕರ್, ಪಂಜಾಬ್‌ ಗುರುನಾನಕ್ ದೇವ್ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ನಿಕಟಪೂರ್ವ ಮುಖ್ಯಸ್ಥ ಡಾ. ಪರಮ್ಜಿತ್ ಸಿಂಗ್ ಜಡ್ಜ್ ಹಾಗೂ ಮಹಾರಾಷ್ಟ್ರದ ಸತಾಯೆ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲೆ ಕವಿತಾ ರೇಗ್ ಉಪಸ್ಥಿತರಿದ್ದರು.

ಎರಡು ದಿನಗಳ‌ ಸುದೀರ್ಘ ಪರಿವೀಕ್ಷಣೆಯ ಬಳಿಕ ಮಾತನಾಡಿದ, ಡಾ. ಕೃಪಾ ಶಂಕರ್ ಮುಂಬರುವ ದಿನಗಳಲ್ಲಿ ಸಂಸ್ಥೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಿದರು ಹಾಗೂ ವಿದ್ಯಾರ್ಥಿಗಳ‌ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ಲಾಘಿಸಿದರು. ಬಳಿಕ ನ್ಯಾಕ್ ಪರಿವೀಕ್ಷಣಾ ತಂಡದ ಸದಸ್ಯರೊಂದಿಗೆ ಸಂಸ್ಥೆಯ ಪ್ರಾಂಶುಪಾಲ ಡಾ. ಪ್ರವೀಣ್ ಕುಮಾರ್ ಕೆ.ಸಿ. ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶದ ಸಂಚಾಲಕ ಪ್ರೊ.ಸಯ್ಯದ್ ಖಾದರ್ ಅವರಿಗೆ ನ್ಯಾಕ್ ವರದಿಯನ್ನು ಹಸ್ತಾಂತರಿಸಿದರು.

ಇದನ್ನೂ ಓದಿ: Exam Time Table: ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

ಡಬ್ಲ್ಯು.ಎನ್.ಇ.ಎಸ್.ನ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್, ಉಪಾಧ್ಯಕ್ಷೆ ಡಾ. ಮಂಜುಳಾ ಕೆ.ಟಿ., ನಿಕಟಪೂರ್ವ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ, ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ರಾಜಶೇಖರ್ ಹೆಬ್ಬಾರ್, ಕಾರ್ಯದರ್ಶಿ ಜೀವನ್ ದಾಸ್, ಸಹಾಯಕ ಕಾರ್ಯದರ್ಶಿ ಡಾ. ಅರ್ಜುನ್ ನಾಯಕ್, ಸಂಧ್ಯಾ ಕಾಲೇಜಿನ ಸಂಚಾಲಕರಾದ ಸತೀಶ್ ಭಟ್, ಶ್ಯಾಮ್ ಸುಂದರ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ಆಂಗ್ಲ ವಿಭಾಗದ ಸಹ ಪ್ರಾಧ್ಯಾಪಕಿ ಮೀರಾ ಎಡ್ನಾ ಕೊಯಲ್ಲೋ ಕಾರ್ಯಕ್ರಮವನ್ನು ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಸಯ್ಯದ್ ಖಾದರ್ ವಂದಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version