Site icon Vistara News

ಕನಸಿನ ಮನೆ ನಿರ್ಮಾಣಕ್ಕೆ ಮೋಸವಿಲ್ಲದ ಆಯ್ಕೆ ನೈರುತಿ; ಒಂದೇ ಸೂರಲ್ಲಿ ಶಿಕ್ಷಣ, ಕ್ರೀಡೆ, ಧ್ಯಾನಕೇಂದ್ರ, ಈಜುಕೊಳ ಲಭ್ಯ

ನೈರುತಿ ಡೆವಲಪರ್ಸ್‌

ಬಳ್ಳಾರಿ: ಇಲ್ಲಿದೆ ಬೆಂಗಳೂರು ಮಾದರಿ ಮನೆಗಳು, ವಿಲ್ಲಾಗಳು. ಈಗಿನ ಟ್ರೆಂಡ್‌ಗೆ ತಕ್ಕಂತೆ ವಿನ್ಯಾಸ, ವಿಶಾಲ ಸ್ಪೇಸ್‌ ಹೀಗೆ ಈ ಎಲ್ಲ ಅಂಶಗಳನ್ನು ಹೊಂದಿರುವ, ಕಳೆದ ಒಂದು ದಶಕದಿಂದಲೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅನುಭವ ಹೊಂದಿರುವ ನೈರುತಿ ಡೆವಲಪರ್ಸ್ ಆ್ಯಂಡ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ಜನರ ವಿಶ್ವಾಸಾರ್ಹತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಗಣಿನಾಡಿನಲ್ಲಿ ಸುಸಜ್ಜಿತ ಬಡಾವಣೆ ಅಭಿವೃದ್ಧಿ ಪಡಿಸುತ್ತಿರುವ ನೈರುತಿ ಡೆವಲಪರ್ಸ್ ಆ್ಯಂಡ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ 2015ರಿಂದ ಚಾಲ್ತಿಯಲ್ಲಿದೆ. ಸಿ. ಹರಿಪ್ರಸಾದ್ ರೆಡ್ಡಿ ಅವರು ಈ ಸಂಸ್ಥೆಯನ್ನು ಹುಟ್ಟಿಹಾಕಿದ್ದು, ವಿಶ್ವಾಸಾರ್ಹತೆ, ನಂಬಿಕೆಯ ತಳಹದಿ ಮೇಲೆ ಕಾರ್ಯಾರಂಭ ಮಾಡಿದರು. ಆ ನಿಟ್ಟಿನಲ್ಲಿ ಇಂದಿನವರೆಗೂ ಗಟ್ಟಿತನವನ್ನು ಉಳಿಸಿಕೊಂಡಿದೆ.

ಈ ಮೂಲಕ ಗಣಿನಾಡಿನಲ್ಲಿ ಉತ್ತಮ ಡೆವಲಪರ್ಸ್ ಎಂಬ ಹೆಸರು ಪಡೆದಿದೆ. ಜಿಲ್ಲಾದ್ಯಂತ ಸುಮಾರು 12ಕ್ಕೂ ಹೆಚ್ಚು ಬಡಾವಣೆಗಳನ್ನು ಅಭಿವೃದ್ಧಿಪಡಿಸಿ, ಇದೀಗ ಬೆಂಗಳೂರು ಮಾದರಿಯಲ್ಲಿಯೇ ಕಪ್ಪಗಲ್ ರಸ್ತೆಯಲ್ಲಿ ವಿಲ್ಲಾ ಪ್ರಾಜೆಕ್ಟ್ ವಿಥ್ ಗೇಟೆಡ್ ಕಮ್ಯುನಿಟಿ ಡ್ರೀಮ್ ಪ್ರಾಜೆಕ್ಟ್‌ಗೆ ಕೈ ಹಾಕಿ ಯಶಸ್ವಿಯಾಗುತ್ತಿದ್ದಾರೆ.

ಅಭಿವೃದ್ಧಿ ಪಡಿಸುತ್ತಿರುವಾಗಲೇ ಸೋಲ್ಡೌಡ್
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಾವಳಿಗಳನ್ನು ಚಾಚುತಪ್ಪದೇ ಪಾಲನೆ ಮಾಡುತ್ತಾ, ಕಳೆದ 8 ವರ್ಷಗಳಿಂದ ಹಲವಾರು ಬಡಾವಣೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಬಡಾವಣೆಗಳನ್ನು ಅಭಿವೃದ್ಧಿ ಪಡಿಸುತ್ತಿರುವ ಹಂತದಲ್ಲಿಯೇ ಮಾರಾಟವಾಗುತ್ತಿರುವುದು ಸಂಸ್ಥೆಯ ವಿಶ್ವಾಸಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಇದರಿಂದಾಗಿ ನೈರುತಿ ಡವಲಪರ್ಸ್‌ನೊಂದಿಗೆ ಬಡಾವಣೆಗೆ ಅಭಿವೃದ್ಧಿಗೆ ಇಲ್ಲಿನ ಇತರ ಉದ್ಯಮಿಗಳು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಕೇವಲ 8 ವರ್ಷಗಳ ಅವಧಿಯಲ್ಲಿ ಸುಮಾರು 12ಕ್ಕೂ ಹೆಚ್ಚು ಬಡಾವಣೆ ಅಭಿವೃದ್ಧಿ ಪಡಿಸಿದೆ.

ಸಾವಿರಾರು ನಿವೇಶನಗಳ ಮಾರಾಟ
ಬಳ್ಳಾರಿ ಜಿಲ್ಲೆಯ ಪ್ರಮುಖ ಬಡಾವಣೆಗಳ ಅಭಿವೃದ್ಧಿಯಲ್ಲಿ ನೈರುತಿ ಡೆವಲಪರ್ಸ್‌ ಪಾತ್ರ ಪ್ರಮುಖ. ಬಳ್ಳಾರಿ ಸಂಗನಕಲ್ ರಸ್ತೆ, ಕಪ್ಪಗಲ್, ತಾಳೂರು, ಸಿರುಗುಪ್ಪ, ಹೊಸಪೇಟೆ ಸೇರಿ ಅನಂತಪುರ ರಸ್ತೆಯಲ್ಲಿ ವಿವಿಧ ಬಡಾವಣೆ ಅಭಿವೃದ್ಧಿ ಪಡಿಸುವ ಜತೆಗೆ ಜಿಲ್ಲೆಯ ಕುರುಗೋಡು, ಎಮ್ಮಿಗನೂರು ಮತ್ತು ಕುಡಿತಿನಿಯಲ್ಲಿ ಅಭಿವೃದ್ಧಿ ಪಡಿಸಿ, ಆ ಭಾಗದಲ್ಲಿ ಜನಜನಿತವಾಗಿದೆ.

ಬಡಾವಣೆಯಲ್ಲಿ ವಿದ್ಯುತ್ತಿನ ಅಂಡರ್‌ಗ್ರೌಂಡ್‌ ಕೇಬಲ್ ಅಳವಡಿಕೆ, ಸುಸಜ್ಜಿತವಾದ ಡಾಂಬರ್ ರಸ್ತೆ, ಬಡಾವಣೆಯ ರಸ್ತೆಯ ಬದಿಗಳಲ್ಲಿ ಮತ್ತು ನಿವೇಶನಗಳ ಮುಂದುಗಡೆ ಪ್ಲಾಂಟೇಷನ್, ನಿರೀಕ್ಷೆಗಿಂತ ಉತ್ತಮವಾಗಿ ಉದ್ಯಾನವನಗಳ ಅಭಿವೃದ್ಧಿ, ಅದರಲ್ಲೂ ಬಡಾವಣೆಗಳ ನಿವೇಶನಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸೂಕ್ತ ನಿರ್ವಹಣೆಯೇ ನೈರುತಿ ಡೆವಲಪರ್ಸ್‌ ವಿಶ್ವಾಸಾರ್ಹತೆಯನ್ನು ಹೊಂದಲು ಸಾಧ್ಯವಾಗಿದೆ.

ಬೆಂಗಳೂರು ಮಾದರಿಯ ಡ್ರೀಮ್ ಪ್ರಾಜೆಕ್ಟ್
ಕಪ್ಪಗಲ್ ರಸ್ತೆಯಲ್ಲಿ 13.64 ಎಕರೆ ಪ್ರದೇಶದಲ್ಲಿ ಸಿಎಲ್ಆರ್ ಸ್ಮಾಟಿ ಸಿಟಿ ಹೆಸರಿನಲ್ಲಿ ವಿಲ್ಲಾ ಪ್ರಾಜೆಕ್ಟ್ ವಿಥ್ ಗೇಟೆಡ್ ಕಮ್ಯುನಿಟಿ ಯೋಜನೆಯನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿರುವ ಅತ್ಯಂತ ಉತ್ಕೃಷ್ಟವಾಗಿ ಅಭಿವೃದ್ಧಿ ಪಡಿಸಿರುವ ಬಡಾವಣೆಗಳ ಮಾದರಿಯನ್ನು ನೋಡಿರುವ ಹರಿಪ್ರಸಾದ್ ರೆಡ್ಡಿಯವರು ಬಳ್ಳಾರಿಯಲ್ಲೂ ಅಂತಹದ್ದೊಂದು ಪ್ರಾಜೆಕ್ಟ್ ಅಭಿವೃದ್ಧಿ ಪಡಿಸಬೇಕೆಂಬ ಮಹಾದಾಸೆಯಿಂದ ಮುನ್ನುಗಿ, ಈಗಾಗಲೇ ಯಶಸ್ಸು ಕಂಡಿದ್ದಾರೆ.

ಇಲ್ಲಿ ಕ್ಲಬ್ ಹೌಸ್, ಒಳಾಂಗಣ-ಹೊರಾಂಗಣ ಮೈದಾನ, ಓಪನ್ ಥಿಯೇಟರ್, ಮೆಡಿಟೇಷನ್ ಹಟ್ಸ್, ಈಜುಕೋಳ (ಸ್ವಿಮ್ಮಿಂಗ್ ಪೂಲ್), ಮಕ್ಕಳ ಆಟದ ಮೈದಾನ, ಉದ್ಯಾನವನ, ಹಿರಿಯ ನಾಗರಿಕರಿಗೆ ಧ್ಯಾನಕೇಂದ್ರ, ಕೊಕೊನೆಟ್ ಗ್ರೂ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಯೇ ಇಂಟರ್ ನ್ಯಾಷನಲ್ ದೆಹಲಿ ಪಬ್ಲಿಕ್ ಸ್ಕೂಲ್ ಕೂಡ ಆರಂಭವಾಗಿದೆ. ಇಲ್ಲಿ ಮನೆಗಳನ್ನು ಕಟ್ಟಿಕೊಡಲಾಗುತ್ತಿದೆ, ಆದರೆ ನಿವೇಶನ ಮಾರಾಟಕ್ಕೆ ಅವಕಾಶವಿಲ್ಲ. 30×40, 30×50 ಮತ್ತು 40×50 ಅಳತೆಯ ನಿವೇಶನದಲ್ಲಿ ಡುಪ್ಲೆಕ್ಸ್ ಮನೆಗಳನ್ನು ಸುಸಜ್ಜಿತವಾಗಿ ನಿರ್ಮಿಸಿ ಕೊಡಲಾಗುತ್ತದೆ. ಇಲ್ಲಿ ಮನೆಗಳ ಸುತ್ತಲೂ ಉದ್ಯಾನವನದ ವ್ಯವಸ್ಥೆ ಮಾಡಿರುವುದು ಈ ಲೇಔಟ್‌ನ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿದೆ.

ನೈರುತಿ ಡೆವಲಪರ್ಸ್ ಅಭಿವೃದ್ಧಿ ಪಡಿಸಿರುವ ಬಡಾವಣೆಗಳಿವು
ಸಂಗನಕಲ್ ರಸ್ತೆಯಲ್ಲಿ ಡಾಲರ್ ಕಾಲೋನಿಯನ್ನು 3 ಎಕರೆಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಎಸ್.ಆರ್. ಕಾಲೋನಿಯನ್ನು 6 ಎಕರೆಯಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಎಸ್ಎಲ್‌ವಿ ಕಾಲೋನಿಯನ್ನು 2 ಎಕರೆಯಲ್ಲಿ, ಕೆಬಿಆರ್ ಲೇಔಟನ್ನು 15 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಕಪ್ಪಗಲ್ ರಸ್ತೆಯಲ್ಲಿ ದೇವಾಸ್ ಕಾಲೋನಿಯನ್ನು 6 ಎಕರೆ ಪ್ರದೇಶದಲ್ಲಿ, ಸಿಎಲ್ಆರ್ (ಸಿ.ಲಕ್ಷ್ಮಿರೆಡ್ಡಿ) ಸ್ಮಾರ್ಟ್‌ ಸಿಟಿಯನ್ನು 13.64 ಎಕರೆ ಪ್ರದೇಶದಲ್ಲಿ, ಕೃಷ್ಣಾ ಬಡಾವಣೆಯನ್ನು 13 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ. ತಾಳೂರು ರಸ್ತೆಯಲ್ಲಿ ಶಿವಲಿಂಗೇಶ್ವರ ನಗರವನ್ನು 12.5 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ, ಹೊಸಪೇಟೆ ರಸ್ತೆಯಲ್ಲಿ ತುಳಸಿ ಎನ್ಕ್ಲೇವ್ ಅನ್ನು 5 ಎಕರೆ ಪ್ರದೇಶದಲ್ಲಿ, ಅನಂತಪುರ ರಸ್ತೆಯಲ್ಲಿ ಶಾಂತಾ ಎನ್ಕ್ಲೇವ್‌ ಅನ್ನು 4.5 ಎಕರೆ ಪ್ರದೇಶದಲ್ಲಿ, ಬಳ್ಳಾರಿ ಜಿಲ್ಲೆಯ ಕುಡತಿನಿಯಲ್ಲಿ ಗಣೇಶ್ ಎನ್ಕ್ಲೇವ್ ಅನ್ನು 4.5 ಎಕರೆ ಪ್ರದೇಶದಲ್ಲಿ, ಕುರುಗೋಡಿನಲ್ಲಿ ಶ್ರೀ ನಂದಿ ಲೇಔಟ್‌ ಅನ್ನು 21 ಎಕರೆ ಪ್ರದೇಶದಲ್ಲಿ ಎಮ್ಮಿಗನೂರಿನ ಸಾಯಿಗಣೇಶ್ ಎನ್ಕ್ಲೇವ್‌ ಅನ್ನು 5 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಇನ್ನು ಹಲವು ಯೋಜನೆಗಳ ಇವರ ಕೈಯಲ್ಲಿವೆ.

ಸಮಾಜ ಸೇವೆಗೆ ಸೈ
ಈಗಾಗಲೇ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇದಕ್ಕಾಗಿಯೇ ನೈರುತಿ ಚಾರಿಟೇಬಲ್ ಟ್ರಸ್ಟ್ ಹುಟ್ಟು ಹಾಕಿಕೊಂಡು ಅಧಿಕೃತವಾಗಿ ಸಾಮಾಜಿಕ ಸೇವೆ ಮಾಡಲು ಸಂಕಲ್ಪ ಮಾಡಿದ್ದಾರೆ. ತಂದೆಯ ಹೆಸರಿನಲ್ಲಿಯೇ ಸಿ.ಲಕ್ಷಿರೆಡ್ಡಿ ಅವರ ಹೆಸರಿನಲ್ಲಿ ಡ್ರೀಮ್ ಪ್ರಾಜೆಕ್ಟ್ ಆರಂಭಿಸಿದ್ದಾರೆ. ನೈರುತಿ ಡೆವಲಪರ್ಸ್ ಎಂದು ಹೆಸರಿಡಲು ತಂದೆಯೇ ಪ್ರೇರಣೆ ಎಂದು ಹೇಳುತ್ತಾರೆ ಹರಿಪ್ರಸಾದ ರೆಡ್ಡಿ. ನೈರುತಿ ಎಂದಾಕ್ಷಣ ಯಾವುದೇ ಅನುಮಾನವಿಲ್ಲದೆ ನಿವೇಶನ ಖರೀದಿ ಮಾಡಬಹುದು ಎಂಬ ನಂಬಿಕೆಯನ್ನು ಗಳಿಸಿಕೊಂಡಿದೆ ಎಂದರೆ ಅತಿಶಯೋಕ್ತಿ ಎನಿಸದು, ಇದಕ್ಕೆ ಈವರೆಗೆ ಮಾರಾಟವಾಗಿರುವ ನಿವೇಶನಗಳೇ ಸಾಕ್ಷಿ. ನೀವೊಮ್ಮೆ ಡ್ರಿಮ್ ಪ್ರಾಜೆಕ್ಟ್ ಸ್ಥಳಕ್ಕೆ ಹೋಗಿ ಭೇಟಿ ಕೊಡಿ, ವಾಸ್ತವತೆ ತಮಗೆ ತಿಳಿಯಲಿದೆ ಎಂದೂ ಅವರು ಆಹ್ವಾನ ನೀಡುತ್ತಾರೆ.

ಇವರನ್ನು ಹೀಗೆ ಸಂಪರ್ಕಿಸಿ
ಸಿ.ಹರಿಪ್ರಸಾದ ರೆಡ್ಡಿ, ಎಕ್ಸಿಕ್ಯೂಟಿವ್ ಡೈರೆಕ್ಟರ್
ನೈರುತಿ ಡೆವಲಪರ್ಸ್ ಆಂಡ್ ಬಿಲ್ಡರ್ಸ್ ಪ್ರವೇಟ್ ಲಿಮಿಟೆಡ್,
ಕಪ್ಪಗಲ್ ರಸ್ತೆ.
ಇ-ಮೇಲ್‌ nairuthiventures@gmail.com
ಮೊಬೈಲ್- 98801 34569, 99166 34569

ಇದನ್ನೂ ಓದಿ | ದಲಿತ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ ಹಂಚಿಕೆ ಕೊರತೆ ಭರ್ತಿಗೆ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

Exit mobile version