ಮಂಗಳೂರು: ಮತೀಯ ಶಕ್ತಿಗಳು ಡಿ ಜೆ ಹಳ್ಳಿ-ಕೆಜೆ ಹಳ್ಳಿ ಗಲಭೆ, ಶಿವಮೊಗ್ಗ ಹರ್ಷ, ಪ್ರವೀಣ್ ನೆಟ್ಟಾರು(Praveen nettaru) ಅವರಂತಹ ಕಾರ್ಯಕರ್ತರ ಕೊಲೆ ಮಾಡುವ ಮೂಲಕ ದೇಶದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಯತ್ನಿಸುತ್ತಿವೆ. ಪ್ರವೀಣ್ ನೆಟ್ಟಾರು ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಇದಕ್ಕೆ ತಕ್ಕ ಉತ್ತರ ನೀಡಲಿದೆ. ಇಂತಹ ಮತಾಂಧ ಶಕ್ತಿಗಳನ್ನು ಮಣಿಸುವ ಶಕ್ತಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಸೂಕ್ತ ಉತ್ತರ ನೀಡಲು ಬದ್ಧರಿದ್ದೇವೆ. ಸೂಕ್ತ ಉತ್ತರ ನೀಡಬೇಕು ಎನ್ನುವ ಜನರ ಆಕ್ರೋಶವೂ ಇದೆ. ನೋವಿನಿಂದ ರಾಜೀನಾಮೆ ಕೊಟ್ಟವರನ್ನು ಕರೆದು ಮಾತನಾಡಿಸುತ್ತೇವೆ. ಕಾರ್ಯಕರ್ತನ ಸಾವಿಗೆ ನ್ಯಾಯ ಕೊಡುವ ಕೆಲಸ ಸರ್ಕಾರ ಮಾಡುತ್ತದೆ ಎಂದರು.
ಮುಗ್ಧ ಯುವಕ ಬಲಿಯಾಗಿದ್ದು, ಎಲ್ಲ ಹಂತದ ತನಿಖೆಗಳಾಗಬೇಕು. ಇದರ ಹಿಂದೆ ಕೇರಳ ಸಹಿತ ಮತೀಯ ಶಕ್ತಿಗಳ ಕೈವಾಡ ಇರುವ ಮಾಹಿತಿ ಬರುತ್ತಿದೆ. ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದು, ಪೊಲೀಸರು ಮುಕ್ತವಾಗಿ ತನಿಖೆ ಮಾಡುತ್ತಾರೆ. ಒಡನಾಡಿಯನ್ನು ಕಳೆದುಕೊಂಡ ದುಃಖ ನಮಗೂ ಇದೆ. ರಾಷ್ಟ್ರಮಾತೆಯ ಆರಾಧನೆಯೇ ಪ್ರಮುಖ ಎಂದು ಭಾವಿಸಿ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಯುವಮೋರ್ಚಾದ ಸಜ್ಜನ ಕಾರ್ಯಕರ್ತ ತನ್ನ ಜೀವವನ್ನು ಸಮರ್ಪಿಸಿದ್ದಾನೆ. ಮನೆಯವರಿಗೆ ಕುಟುಂಬಕ್ಕೆ ದುಃಖವನ್ನು ಶಕ್ತಿ ನೀಡಲಿ ಎಂದರು.
ಇದನ್ನೂ ಓದಿ | Praveen nettar| ಮುಗ್ಧ ಪ್ರಾಣಿಗಳ ಮೇಲೆ ಅಪಾರ ಪ್ರೀತಿ, ಅನಾಥ ನಾಯಿ ಮರಿಗಳಿಗೆ ಆಸರೆ ಒದಗಿಸಿದ್ದರು ಪ್ರವೀಣ್