Site icon Vistara News

Namaz in School : ಬಕ್ರೀದ್‌ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಹಿಂದು ಮಕ್ಕಳಿಂದಲೂ ಪ್ರಾರ್ಥನೆ!

Muslim prayer at school

ಹಾಸನ: ಶಾಲೆಯೊಂದರಲ್ಲಿ (Muslim school) ಹಿಂದು ಮಕ್ಕಳಿಂದಲೂ ಪ್ರಾರ್ಥನೆ ಮಾಡಿಸಿದ ಆರೋಪ ಕೇಳಿಬಂದಿದೆ. ಹಾಸನ‌ ಜಿಲ್ಲೆ ಚನ್ನರಾಯ ಪಟ್ಟಣದ ಜ್ಞಾನ ಸಾಗರ ಇಂಟರ್ ನ್ಯಾಷನಲ್ ಶಾಲೆಯಲ್ಲಿ (Jnanasagara International school) ಕಳೆದ ಬಕ್ರೀದ್‌ ಹಬ್ಬದ ದಿನ (Eid al adha) ಸಾಮೂಹಿಕ ನಮಾಜ್‌ (Namaz in School) ನಡೆದಿದ್ದು, ಇದರ ವಿರುದ್ದ ಹಿಂದೂಪರ ಸಂಘಟನೆಗಳು ಸಿಡಿದೆದ್ದಿವೆ.

ಜೂನ್‌ 29ರಂದು ಬಕ್ರೀದ್‌ ಹಬ್ಬವಿತ್ತು. ಅದರ ಹಿಂದಿನ ದಿನ ಶಾಲೆಯ ನೂರಾರು ಮಕ್ಕಳನ್ನು ಒಟ್ಟಿಗೆ ಸೇರಿಸಿ ಮುಸ್ಲಿಂ ಧರ್ಮದ ಶ್ಲೋಕ (Mass prayer) ಹೇಳಿಸಲಾಗಿದೆ ಎನ್ನುವುದು ಆರೋಪ. ಮಕ್ಕಳು ಸಾಮೂಹಿಕ ಪ್ರಾರ್ಥನೆ ಮಾಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೆ ಶುಕ್ರವಾರ ಹಿಂದೂಪರ ಸಂಘಟನೆ ಕಾರ್ಯಕರ್ತರು ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಶಾಲೆಯಲ್ಲಿ ಈ ರೀತಿ ಪ್ರಾರ್ಥನೆ ಮಾಡಿದ್ದೇ ತಪ್ಪು, ಹಿಂದೂ ಮಕ್ಕಳನ್ನು ಸೇರಿಸಿಕೊಂಡು ಮಾಡಿದ್ದಂತೂ ಇನ್ನೂ ದೊಡ್ಡ ತಪ್ಪು ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ ಆಡಳಿತ ಮಂಡಳಿ ಹೇಳುವುದೇನು?

ನಾವು ಮಕ್ಕಳಿಂದ ಪ್ರಾರ್ಥನೆ ಮಾಡಿಸಿಲ್ಲ. ಕೇವಲ ಭಾವೈಕ್ಯತೆ ಮೂಡಿಸೊ ಸಲುವಾಗಿ ಆಚರಣೆ ನಡೆದಿದೆ ಅಷ್ಟೆ. ಮುಸ್ಲಿಂ ಸಮುದಾಯದ ಮೂರು ಮಕ್ಕಳು ಮಾತ್ರ ಪ್ರಾರ್ಥನೆ ಮಾಡಿದ್ದಾರೆ. ಉಳಿದ ಎಲ್ಲಾ ಮಕ್ಕಳು ಕಣ್ಮುಚ್ಚಿ ಕುಳಿತಿದ್ದಾರೆ ಅಷ್ಟೇ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ʻʻನಾವು ಕೇವಲ ಮುಸ್ಲಿಂ ಹಬ್ಬ ಮಾತ್ರವಲ್ಲ ಎಲ್ಲಾ ಧರ್ಮದ ಹಬ್ಬಗಳ ಪರಿಚಯ ಮಾಡಲು ಸಾಂಕೇತಿಕ ಆಚರಣೆ ಮಾಡುತ್ತೇವೆʼʼ ಎಂದು ಶಿಕ್ಷಕ ವರ್ಗವೂ ಸ್ಪಷ್ಟನೆ ನೀಡಿದೆ.

ಆದರೆ ಶಾಲೆಯಲ್ಲಿ ಮುಸ್ಲಿಂ ಧರ್ಮದ ಸಾಮೂಹಿಕ ಆಚರಣೆ ಮಾಡಿದ್ದು ತಪ್ಪು ಎಂದು ಹಿಂದು ಸಂಘಟನೆಗಳು ಹೇಳಿವೆ. ಈ ಕೃತ್ಯವನ್ನು ಖಂಡಿಸಿ ಸೋಮವಾರ ಹೋರಾಟಕ್ಕೆ ಕರೆ ಕೊಟ್ಟಿವೆ.

ಇದರೊಂದಿಗೆ ಶಾಲೆಯಲ್ಲಿ ಮಕ್ಕಳ ಕುರಾನ್‌ ಪಠಣ ತೀವ್ರ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Eid al Adha: ನಮ್ಮ ನಡುವೆಯೇ ಧ್ವೇಷ ಹುಟ್ಟುಹಾಕುವವರಿದ್ದಾರೆ: ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತು

Exit mobile version