Site icon Vistara News

Namma Metro | ಬೈಯ್ಯಪ್ಪನಹಳ್ಳಿ ಟು ವೈಟ್‌ಫೀಲ್ಡ್‌ ಟ್ರಯಲ್‌ ರನ್‌; ಮೆಟ್ರೋ ನಿಲ್ದಾಣಕ್ಕೆ ಕೋಚ್‌ಗಳ ರವಾನೆ

ಬೆಂಗಳೂರು: ಬೈಯ್ಯಪ್ಪನಹಳ್ಳಿ- ವೈಟ್‌ಫೀಲ್ಡ್‌ ನಡುವಿನ ಮೆಟ್ರೋ (Namma Metro) ಮಾರ್ಗ ಕಾಮಗಾರಿ ಪೂರ್ಣಗೊಂಡಿದ್ದು, ಅಕ್ಟೋಬರ್‌ 25ಕ್ಕೆ ಟ್ರಯಲ್‌ ರನ್‌ ನಡೆಸಲು ಚುರುಕಿನ ಸಿದ್ಧತೆಗಳು ನಡೆಯುತ್ತಿವೆ. ಹೊಸ ಮಾರ್ಗದಲ್ಲಿ ಟ್ರಯಲ್‌ ರನ್‌ ನಡೆಸುವ ಉದ್ದೇಶದಿಂದ ರೈಲು ಕೋಚ್‌ಗಳನ್ನು ನಿಲ್ದಾಣಕ್ಕೆ ರವಾನೆ ಮಾಡುವ ಪ್ರಕ್ರಿಯೆಗೆ ಗುರುವಾರ ಚಾಲನೆ ನೀಡಲಾಯಿತು.

6 ಕೋಚ್‌ಗಳ 1 ಟ್ರೈನ್ ಅನ್ನು ರಸ್ತೆ ಮೂಲಕ ರವಾನೆ ಮಾಡಲಾಗುತ್ತಿದ್ದು, 1 ಕೋಚ್‌ಗೆ 9.85 ಕೋಟಿ ರೂಪಾಯಿ ವೆಚ್ಚ ತಗುಲಿದೆ. ಹೀಗಾಗಿ ಹೊಸ ರೈಲು 59.1 ಕೋಟಿ ರೂ. ಬೆಲೆ ಬಾಳಲಿದೆ. ಕಪ್ಲಿಂಗ್, ಟೆಸ್ಟಿಂಗ್ ಎಲ್ಲವೂ ನಡೆದಿದೆ. ಇದೇ ಅಕ್ಟೋಬರ್‌ 25ರಂದು ಪ್ರಯೋಗಾರ್ಥ ಪರೀಕ್ಷೆ ನಡೆಯಲಿದೆ. ನವೆಂಬರ್ ಅಂತ್ಯದಲ್ಲಿ 2ನೇ ರೈಲು ಹಾಗೂ ಡಿಸೆಂಬರ್ ಅಂತ್ಯದಲ್ಲಿ 3ನೇ ರೈಲಿನ ಟ್ರಯಲ್‌ ರನ್‌ ನಡೆಯಲಿದೆ. ರೈಲ್ವೆ ಸೇಫ್ಟಿ ಕಮಿಷನರ್ ಪರಿಶೀಲನೆ ಬಳಿಕ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ. ಟ್ರಯಲ್‌ ರನ್‌ ಬಳಿಕ 45 ದಿನಗಳಲ್ಲಿ ರೈಲ್ವೆ ಸೇಫ್ಟಿ ಕಮಿಷನರ್‌ರಿಂದ ಪರೀಕ್ಷೆ ನಡೆಯಲಿದೆ.

ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್‌ 15 ಕಿ.ಮೀ ಉದ್ದದ ಮಾರ್ಗ ಇದಾಗಿದ್ದು, ಐಟಿ-ಬಿಟಿ ಮಂದಿಗೆ ಇನ್ನಷ್ಟು ರಿಲೀಫ್ ಸಿಗಲಿದೆ. ಈಗಾಗಲೇ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ 5 ಲಕ್ಷಕ್ಕೂ ಹೆಚ್ಚಿದ್ದು, ಈ ಮಾರ್ಗವೂ ಶುರುವಾದರೆ 7-8 ಲಕ್ಷಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ.

ಬೈಯಪ್ಪನಹಳ್ಳಿ To ವೈಟ್ ಫೀಲ್ಡ್ ನಡುವೆ ಎಷ್ಟಿವೆ ನಿಲ್ದಾಣ?

ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್‌ವರೆಗಿನ ಮೆಟ್ರೋ ಮಾರ್ಗದಲ್ಲಿ ಒಟ್ಟು 14 ನಿಲ್ದಾಣಗಳಿವೆ. ವೈಟ್ ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸಾದರ ಮಂಗಲ, ನಲ್ಲೂರ ಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ ಪಾಳ್ಯ, ಮಹದೇವಪುರ, ಕೆ.ಆರ್.ಪುರ, ಬೆನ್ನಿಗಾನಹಳ್ಳಿ, ಬೈಯಪ್ಪನ ಹಳ್ಳಿ.

ಇದನ್ನೂ ಓದಿ | Bagless Day | ಶಾಲಾ ಮಕ್ಕಳಿಗೆ ಗುಡ್‌ ನ್ಯೂಸ್; ಡಿಸೆಂಬರ್‌ನಿಂದ ಪ್ರತಿ ಶನಿವಾರ ಬ್ಯಾಗ್‌ಲೆಸ್‌ ಡೇ

Exit mobile version