Site icon Vistara News

Namma Metro : ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆಗೆ ನಮ್ಮ ಮೆಟ್ರೋ ವಿಸ್ತರಣೆ?

Namma Metro Bangalore

ಬೆಂಗಳೂರು: ಬ್ರಾಂಡ್‌ ಬೆಂಗಳೂರು ಸೇರಿದಂತೆ ರಾಜಧಾನಿಯ ಟ್ರಾಫಿಕ್‌ (Bangalore Traffic) ಸಮಸ್ಯೆಯನ್ನು ಪರಿಹಾರ ಮಾಡುವ ಕನಸನ್ನು ಹೊಂದಿರುವ ರಾಜ್ಯ ಸರ್ಕಾರವು (Karnataka State Government) ಆ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಮರ್ಪಕ ರಸ್ತೆ ಸಂಪರ್ಕವನ್ನು ಕಲ್ಪಿಸುವುದರ ಜತೆಗೆ ಪರ್ಯಾಯ ಮಾರ್ಗದತ್ತಲೂ ಚಿಂತನೆ ನಡೆಸಿದೆ. ಹೀಗಾಗಿ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಮತ್ತು ಹೊಸಕೋಟೆಗೆ ನಮ್ಮ ಮೆಟ್ರೋ (Namma Metro) ಸೇವೆ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರಿನಲ್ಲಿ ಟ್ರಾಫಿಕ್‌ ದಟ್ಟಣೆ ಭಾರಿ ಹೆಚ್ಚಳ ಕಂಡಿದೆ. ಇದರ ಅಡ್ಡ ಪರಿಣಾಮವು ಸಾಕಷ್ಟು ರೀತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜನರ ಹಾಗೂ ಸರ್ಕಾರದ ಮೇಲಾಗುತ್ತಿದೆ. ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂ ಎನ್ ಶ್ರೀಹರಿ (traffic and mobility expert MN Sreehari) ಹಾಗೂ ಅವರ ತಂಡವು ಇತ್ತೀಚೆಗೆ ನೀಡಿದ ವರದಿಯೊಂದರ ಪ್ರಕಾರ, ಬೆಂಗಳೂರೊಂದರಲ್ಲಿಯೇ ಟ್ರಾಫಿಕ್‌ ದಟ್ಟಣೆಯಿಂದಾಗಿ ಪ್ರತಿ ವರ್ಷಕ್ಕೆ ಅಂದಾಜು 19,725 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು. ಹೀಗೆ ಟ್ರಾಫಿಕ್‌ ಸಮಸ್ಯೆ ಆರ್ಥಿಕವಾಗಿಯೂ ಬಹಳ ಪರಿಣಾಮವನ್ನು ಬೀರುತ್ತಿದೆ. ಈ ಕಾರಣದಿಂದಾಗಿಯೇ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ದೂರದ ಪ್ರದೇಶಗಳಿಗೆ ಸಂಪರ್ಕ ವ್ಯವಸ್ಥೆಯನ್ನು ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Cow slaughter : ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌ ಪಡೆದರೆ ಹುಷಾರ್; ಸರ್ಕಾರದ ವಿರುದ್ಧ ಸಿಡಿದ ಸಂತರು!‌

ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ದೇವನಹಳ್ಳಿ ಸೇರಿದಂತೆ ನಾಲ್ಕು ಹೊರ ಪಟ್ಟಣಗಳಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ಸಂಬಂಧ ಇತ್ತೀಚೆಗೆ ಮೆಟ್ರೋ ಅಧಿಕಾರಿಗಳ ಸಭೆ ನಡೆದಿದೆ ಎಂದು ಹೇಳಲಾಗಿದೆ.

Namma Metro Bangalore testing

ಶಾಸಕರಿಂದಲೂ ಸಿಎಂಗೆ ಸಲಹೆ

ಬೆಂಗಳೂರು ಎಂದರೆ ಕೇವಲ ವಿಧಾನಸೌಧ, ಮೆಜಿಸ್ಟಿಕ್ ಸುತ್ತಮುತ್ತಲಿನ ಪ್ರದೇಶವಲ್ಲ. ಇದೀಗ ಬೃಹದಾಕಾರವಾಗಿ ಬೆಳೆದಿದೆ. ಹೊಸೂರು, ವೈಟ್‌ಫೀಲ್ಡ್‌, ನೆಲಮಂಗಲ ಸೇರಿದಂತೆ ದೂರದ ಪ್ರದೇಶಗಳವರೆಗೆ ವಿಸ್ತರಣೆಯಾಗುತ್ತಲೇ ಇದೆ. ಆದರೆ, ಹೀಗಾಗಿ ಬೆಂಗಳೂರಿನ ಕೆಲವು ಪ್ರಮುಖ ಪ್ರದೇಶಗಳಿಗೆ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (chief minister Siddaramaiah), ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Deputy chief minister DK Shivakumar) ಸಹ ಒಲವು ವ್ಯಕ್ತಪಡಿಸಿದ್ದಾರೆ. ಅವರು ಈಚೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕರ ಜತೆ ನಡೆಸಿದ ಸಭೆಯಲ್ಲಿಯೂ ಸಹ ಇದೇ ವಿಷಯ ಪ್ರಸ್ತಾಪ ಆಗಿದೆ. ಇದಕ್ಕೆ ಎಲ್ಲ ಶಾಸಕರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕಡಿಮೆಯಾಗಲಿದೆಯಾ ಸಂಚಾರ ದಟ್ಟಣೆ?

ಬೆಂಗಳೂರಿನ ಟ್ರಾಫಿಕ್‌ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಹಲವರು ಈಗಾಗಲೇ ಮೆಟ್ರೋ ಸಂಚಾರವನ್ನು ಪರಿಗಣಿಸಿದ್ದಾರೆ. ಹಾಗಂತ ಸಂಚಾರ ದಟ್ಟಣೆಯಲ್ಲಿ ಅಂತಹ ಮಹತ್ವದ ಬದಲಾವಣೆಯೇನೂ ಕಾಣುತ್ತಿಲ್ಲ. ಆದರೆ, ಪೀಕ್‌ ಅವರ್‌ ಎಂದು ಪರಿಗಣಿಸುವ ಬೆಳಗ್ಗೆ 9ರಿಂದ 11 ಹಾಗೂ ಸಂಜೆ 7ರಿಂದ 8.30ರ ಹೊತ್ತಿಗೆ ಮೆಟ್ರೋದಲ್ಲಿ ಭಾರಿ ಪ್ರಮಾಣದಲ್ಲಿ ಪ್ರಯಾಣಿಕರು ಇರುತ್ತಾರೆ. ಇದರ ಹೊರತಾಗಿಯೂ ಮೆಟ್ರೋ ಓಡಾಟ ಇದ್ದೇ ಇದೆ. ಇಷ್ಟಾದರೂ ಮೆಟ್ರೋ ಬಂದ ಮೇಲೆ ಒಂದಷ್ಟು ಟ್ರಾಫಿಕ್‌ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಈ ನಿಟ್ಟಿನಲ್ಲಿ ಇನ್ನೂ ದೂರಕ್ಕೆ ಸೇವೆಯನ್ನು ವಿಸ್ತರಣೆ ಮಾಡಿದರೆ ಸಂಚಾರ ಸಮಸ್ಯೆಗೆ ಇನ್ನಷ್ಟು ಪರಿಹಾರ ಸಿಗಬಹುದು ಎಂಬ ಆಶಾಭಾವನೆಯಲ್ಲಿ ರಾಜ್ಯ ಸರ್ಕಾರ ಇದೆ.

ಇದನ್ನೂ ಓದಿ: Commission Politics : ಕಮಿಷನ್‌ ಕೇಳಿಲ್ಲವಾದರೆ ಡಿಕೆಶಿ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ: ಸಿ.ಟಿ. ರವಿ ಸವಾಲು

ನಮ್ಮ ಮೆಟ್ರೋ ಸಂಪರ್ಕ

ಪ್ರಸ್ತುತ ಪ್ಲ್ಯಾನ್ ಪ್ರಕಾರ, ಬೆಂಗಳೂರು ಮೆಟ್ರೋ ಸಂಪರ್ಕವು 69.66 ಕಿ.ಮೀ. ಕೃಷ್ಣರಾಜಪುರದಿಂದ ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಕ್ಕೆ ಸಂಪರ್ಕಿಸುವ 39.34 ಕಿ.ಮೀ ಪೂರ್ವ-ಪಶ್ಚಿಮ ಕಾರಿಡಾರ್, ಪೂರ್ವ ಬೈಯಪ್ಪನಹಳ್ಳಿಯಿಂದ ಪಶ್ಚಿಮ ಕೆಂಗೇರಿ ಟರ್ಮಿನಲ್‌ವರೆಗಿನ 25.63 ಕಿ.ಮೀ ಉದ್ದದ ಮೆಟ್ರೋ ವಿಸ್ತರಣೆಯನ್ನು ಕಾರ್ಯಾಚರಣೆಯ ಭಾಗಗಳು ಒಳಗೊಂಡಿವೆ. ಇದಲ್ಲದೆ, ಹೆಚ್ಚುವರಿ 30.32 ಕಿ.ಮೀ ಉದ್ದದ ಉತ್ತರ-ದಕ್ಷಿಣ ಕಾರಿಡಾರ್ ಇದೆ. ಅಲ್ಲಿ ರೈಲು ಉತ್ತರ ನಾಗಸಂದ್ರದಿಂದ ದಕ್ಷಿಣ ಸಿಲ್ಕ್ ಇನ್ಸ್ಟಿಟ್ಯೂಟ್‌ವರೆಗೆ ಚಲಿಸುತ್ತದೆ.

Exit mobile version