ಬೆಂಗಳೂರು: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವು ಪ್ರಕರಣದ (Namma Metro Pillar) ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಗೊವೀಂದಪುರ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ.
ನಾಗವಾರದ ರಿಂಗ್ ರೋಡ್‌ನ ಎಚ್‌ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಮಂಗಳವಾರ ಮುಂಜಾನೆ ಕುಸಿದು (Namma Metro Pillar) ಬೈಕ್‌ನಲ್ಲಿ ತೆರಳುತ್ತಿದ್ದ ತೇಜಸ್ವಿನಿ (೨೮) ಮತ್ತು ಎರಡು ವರ್ಷ ಆರು ತಿಂಗಳ ಮಗು ವಿಹಾನ್ ಮೃತಪಟ್ಟಿದ್ದರು. ಅಧಿಕಾರಿಗಳು, ಸಿಬ್ಬಂದಿ ನಿರ್ಲ್ಷಕ್ಷ್ಯದಿಂದ ಹೆಂಡತಿ, ಮಗು ಕೊನೆಯುಸಿರೆಳೆದಿದ್ದಾರೆ ಎಂದು ಮಹಿಳೆಯ ಪತಿ, ಗೋವಿಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಗುರುವಾರ ಘಟನೆ ನಡೆದ ಸ್ಥಳಕ್ಕೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಪರಿಶೀಲಿಸಿ, ಕಾಮಗಾರಿಯಲ್ಲಿ ಆದಂತಹ ಲೋಪಗಳ ಬಗ್ಗೆ ತಜ್ಞರಿಂದ ಮಾಹಿತಿ ಪಡೆದರು. ಅವರ ಸೂಚನೆಯಂತೆ ಪ್ರಕರಣದ ಆರೋಪಿಗಳಿಗೆ ನೋಟಿಸ್ ನೀಡಿದ್ದು, ಗೋವಿಂದಪುರ ಪೊಲೀಸ್ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.
ಪ್ರಕರಣದ ಆರೋಪಿಗಳು
A1 ನಾಗಾರ್ಜುನ ಕನ್ಸ್‌ಟ್ರಕ್ಷನ್ ಕಂಪನಿ (ಎನ್‌ಸಿಸಿ)
A2 ಪ್ರಭಾಕರ್, ಜೆಇ (junior engineer) ಎನ್‌ಸಿಸಿ
A3 ಚೈತನ್ಯ, ನಿರ್ದೇಶಕ, ಎನ್‌ಸಿಸಿ
A4 ಮತಾಯಿ, ಎಸ್‌ಪಿಎಂ (ಸೀನಿಯರ್ ಪ್ರಾಜೆಕ್ಟ್ ಮ್ಯಾನೇಜರ್), ಎನ್‌ಸಿಸಿ
A5 ವಿಕಾಸ್ ಸಿಂಗ್, ಪಿಎಂ (ಪ್ರಾಜೆಕ್ಟ್ ಮ್ಯಾನೇಜರ್), ಎನ್‌ಸಿಸಿ
A6 ಲಕ್ಷ್ಮಿ ಪತಿ, ಸೂಪರ್‌ವೈಸರ್, ಎನ್‌ಸಿಸಿ
A7 ವೆಂಕಟೇಶ್ ಶೆಟ್ಟಿ, ಡೆಪ್ಯುಟಿ ಚೀಫ್ ಎಂಜಿನಿಯರ್(DCE), ಬಿಎಂಆರ್‌ಸಿಎಲ್
A8 ಮಹೇಶ್ ಬಂಡೇಕರಿ , ಇಇ (Executive Engineer), ಬಿಎಂಆರ್‌ಸಿಎಲ್
A9 ಜಾಫರ್ ಸಿದ್ದಿಕಿ, ಜೆಇ (BMRCL)
ಇದನ್ನೂ ಓದಿ | Namma metro collapse | ಮೆಟ್ರೋ ಪಿಲ್ಲರ್ ಕುಸಿತ: ತನಿಖೆಗಿಳಿದ ಐಐಎಸ್‌ಸಿ ತಂಡ; ತಪ್ಪಾಗಿರುವುದು ನಿಜ ಎಂದ ತಜ್ಞರು!