ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ (Bangalore Traffic) ಕಿರಿಕಿರಿಯಿಂದ ಬೇಸತ್ತು ಹೋಗಿದ್ದ ಜನರು, ಐಟಿ ಮಂದಿಗೆ ಈಗ ನಮ್ಮ ಮೆಟ್ರೋದ (Namma Metro) ನೇರಳೆ ಮಾರ್ಗದಿಂದ (Metro Purple Line) ಬಿಗ್ ರಿಲೀಫ್ ಸಿಕ್ಕಂತಾಗಿದೆ. ಬಹುನಿರೀಕ್ಷಿತ ನೇರಳೆ ಮಾರ್ಗದ ಮೆಟ್ರೋ ಸೇವೆ ಸೋಮವಾರ (ಅಕ್ಟೋಬರ್ 9) ಆರಂಭವಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈಗಾಗಲೇ ದುಪ್ಪಟ್ಟು ಪ್ರಯಾಣಿಕರು ಸಂಚರಿಸಿದ್ದಾರೆಂಬ ಮಾಹಿತಿ ಸಿಕ್ಕಿದೆ. ಒಟ್ಟು 43.49 ಕಿ.ಮೀ ಮಾರ್ಗದ ಪ್ರಯಾಣ ಈಗ ಸುಲಭವಾಗಿದೆ.
ನೇರಳೆ ಮಾರ್ಗದಲ್ಲಿ ಬಾಕಿ ಉಳಿದಿದ್ದ ಕೆಂಗೇರಿ- ಚಲ್ಲಘಟ್ಟ (2.10 ಕಿ.ಮೀ.) ಹಾಗೂ ಬೈಯಪ್ಪನಹಳ್ಳಿ- ಕೆ.ಆರ್.ಪುರ (2.10 ಕಿ.ಮೀ.) ಮಾರ್ಗಗಳನ್ನು ಸಂಪೂರ್ಣಗೊಳಿಸಲಾಗಿದೆ. ಈ ವಿಸ್ತರಿತ ಮಾರ್ಗ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ 43.5 ಕಿ.ಮೀ ಇದ್ದು, ಒಟ್ಟು ಪ್ರಯಾಣದ ಅವಧಿ 1 ಗಂಟೆ 40 ನಿಮಿಷ. ಈ ಮಾರ್ಗ ಒಟ್ಟು 37 ನಿಲ್ದಾಣಗಳನ್ನು ಒಳಗೊಂಡಿದ್ದು, ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ 60 ರೂ. ಟಿಕೆಟ್ ದರ ನಿಗದಿಯಾಗಿದೆ.
ಬಿಂದು ಸಂಚೇತಿ ಎಂಬ ಸೋಷಿಯಲ್ ಮೀಡಿಯಾ ಎಕ್ಸ್ ಬಳಕೆದಾರರು ಈ ಬಗ್ಗೆ ಪೋಸ್ಟ್‌ವೊಂದನ್ನು ಹಾಕಿದ್ದು, ಖುಷಿಯನ್ನು ಹಂಚಿಕೊಂಡಿದ್ದಾರೆ. ವೈಟ್‌ಫೀಲ್ಡ್‌ನಿಂದ ಎಂಜಿ ರಸ್ತೆಗೆ ನಾನು 500 ರೂಪಾಯಿ ಕೊಡುತ್ತಿದ್ದೆ. ಅದೀಗ ನನಗೆ ಉಳಿತಾಯವಾಗಿದೆ. ಕೇವಲ 30 ನಿಮಿಷಗಳಲ್ಲಿ 36 ರೂಪಾಯಿ ಕೊಟ್ಟು ಪ್ರಯಾಣ ಮಾಡಿದೆ. ಇದರ ಜತೆಗೆ ನನಗೆ ಪ್ರತಿದಿನ ಸರಿಸುಮಾರು 2 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕುವುದು ಸಹ ತಪ್ಪಿದೆ. ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ಕೊನೆಯ ರೈಲು ರಾತ್ರಿ 10.45ಕ್ಕೆ ಮತ್ತು ಉಳಿದ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11.05ಕ್ಕೆ ಹೊರಡಲಿದೆ. ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 5 ಗಂಟೆಗೆ ಸೇವೆಗಳು ಪ್ರಾರಂಭವಾಗುತ್ತವೆ.
ಸೋಷಿಯಲ್ ಮೀಡಿಯಾದಲ್ಲಿ ಪ್ರಯಾಣಿಕರು ತಮ್ಮ ಖುಷಿಯನ್ನು ಹಂಚಿಕೊಂಡಿದ್ದು, ಪ್ರಯಾಣದ ಅನುಭವಗಳನ್ನು ಹೇಳಿಕೊಂಡಿದ್ದಾರೆ.
Travelled from Whitefield to MG road in 30 mins in just 36 bucks. What a joyful day for the Delhite and Marwadi in me!
— Bindu Sancheti (@SanchetiBindu) October 9, 2023
Can’t imagine ever paying Rs. 500 just to spend 2 hours in traffic again – assuming I find a cab in the first place!
Great job @cpronammametro #PurpleLine 🚀 pic.twitter.com/lskdSfF5BI
“ಇಂದು ಕೇವಲ 45 ನಿಮಿಷಗಳಲ್ಲಿ ಕಚೇರಿಯನ್ನು ತಲುಪಿದೆ. ಅದೇ ರಸ್ತೆ ಮಾರ್ಗವಾಗಿ ನಾನು ಹೋಗಿದ್ದರೆ ಸಾಮಾನ್ಯ ದಟ್ಟಣೆಯಲ್ಲಿ 2 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ.
Just 18 minutes to Cubbon Park! That's impressively quick!
— Citizens Movement, East Bengaluru (@east_bengaluru) October 9, 2023
East Bengalurians' weekend plans are now streamlined:
– Morning run in Cubbon Park
– Breakfast at Konark
– Movie at Inox
– Shopping on Brigade Road/Church Street
– Lunch at home in Whitefield.#PurpleLine #NammaMetro… https://t.co/QSTQtRn5Yr
ನೇರಳೆ ಮಾರ್ಗದ ನಿಲ್ದಾಣಗಳ ನಡುವೆ ತೆಗೆದುಕೊಳ್ಳುವ ಪ್ರಯಾಣದ ಸಮಯ:
1) ವೈಟ್‌ಫೀಲ್ಡ್‌ನಿಂದ ಪಟಂದೂರು ಅಗ್ರಹಾರದ ನಡುವೆ 10 ನಿಮಿಷಗಳು.
2) ಮೈಸೂರು ರಸ್ತೆಯಿಂದ ಚಲ್ಲಘಟ್ಟಕ್ಕೆ 10 ನಿಮಿಷಗಳು.
3) ಪಟಂದೂರು ಅಗ್ರಹಾರದಿಂದ ಮೈಸೂರು ರಸ್ತೆಗೆ 5 ನಿಮಿಷ.
4) ನಾಡಪ್ರಭು ಕೆಂಪೇಗೌಡ ನಿಲ್ದಾಣ- ಮೆಜೆಸ್ಟಿಕ್‌ನಿಂದ ಎಂ.ಜಿ ರಸ್ತೆ- ಬೆಳಗಿನ ಪೀಕ್ ಸಮಯದಲ್ಲಿ 3 ನಿಮಿಷಕ್ಕೆ ಒಂದು ರೈಲು.
5) ಕೊನೆಯ ರೈಲು ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ರಾತ್ರಿ 10.45ಕ್ಕೆ ಹೊರಡುತ್ತದೆ.
6) ಉಳಿದ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11.05ಕ್ಕೆ ಹೊರಡುತ್ತದೆ.
7) ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ರೈಲು ಸೇವೆಗಳು ಎಂದಿನಂತೆ ಬೆಳಗ್ಗೆ 5 ಗಂಟೆಗೆ ಪ್ರಾರಂಭ
ರೋಗಿಗಳಿಗೂ ಅನುಕೂಲ
ವೈಟ್‌ಫೀಲ್ಡ್‌ನಲ್ಲಿರುವ ನೂರಾರು ಐಟಿ ಕಂಪನಿಗಳ ಉದ್ಯೋಗಿಗಳು ರಾಜಧಾನಿಯ ಬೇರೆಬೇರೆಡೆಯಿಂದ ಮೆಟ್ರೋ ಮೂಲಕ ಆಗಮಿಸಲು ನೇರಳೆ ಮಾರ್ಗ ಅವಕಾಶ ಕಲ್ಪಿಸಿಕೊಟ್ಟಿದೆ. ಹಾಗೆಯೇ ಚಲ್ಲಘಟ್ಟ ಸಮೀಪವೇ ಇರುವ RR ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಿಧ್ಯಾರ್ಥಿಗಳು, ಸಿಬ್ಬಂದಿ, ರೋಗಿಗಳಿಗೂ ಇದರಿಂದ ಹೆಚ್ಚು ಪ್ರಯೋಜನವಾಗಲಿದೆ.
ಇದನ್ನೂ ಓದಿ: HD Kumaraswamy : ಕತ್ತಲೆ ಭಾಗ್ಯ 6ನೇ ಗ್ಯಾರಂಟಿ; ನವರಾತ್ರಿಗೆ ಮೊದಲೇ ಕರಾಳ ರಾತ್ರಿ ಎಂದ HDK
ಒಂದೇ ದಿನ 61,179 ಮಂದಿ ಪ್ರಯಾಣ
ಸೋಮವಾರ ಒಂದೇ ದಿನ ನಮ್ಮ ಮೆಟ್ರೋ ವಿಸ್ತೃತ ಮಾರ್ಗವಾದ ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರಂ ವರೆಗಿನ ಮಾರ್ಗದಲ್ಲಿ 61,179 ಮಂದಿ ಪ್ರಯಾಣ ಮಾಡಿದ್ದಾರೆ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ಓಡಾಟ ನಡೆಸಿದ್ದಾರೆ. ಇಷ್ಟು ದಿನ ಪ್ರತಿನಿತ್ಯ ಸುಮಾರು 28000 ಮಂದಿ ಈ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದರು.