Site icon Vistara News

Nandini ghee : ತಿರುಪತಿ ಲಡ್ಡಿಗೆ ನಂದಿನಿ ತುಪ್ಪ ಇನ್ನಿಲ್ಲ!

Tirumala laddu

ತಿರುಪತಿ: ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ತಿರುಪತಿ ಲಡ್ಡಿನಲ್ಲಿ (Nandini ghee) ಕರ್ನಾಟಕದ ಜನಪ್ರಿಯ ನಂದಿನಿ ತುಪ್ಪವನ್ನು ಬಳಸಲಾಗುತ್ತಿತ್ತು. ಆದರೆ ಇನ್ನು ಮುಂದೆ ತಿರುಪತಿ ಲಡ್ಡಿನಲ್ಲಿ ನಂದಿನಿ ತುಪ್ಪ ಇರುವುದಿಲ್ಲ. ಕಾರಣವೇನು ಎನ್ನುತ್ತೀರಾ? ಇಲ್ಲಿದೆ ಡಿಟೇಲ್ಸ್.

ನಾವು ಕೆಎಂಎಫ್‌ನಿಂದ ತುಪ್ಪವನ್ನು ಪೂರೈಸುತ್ತಿದ್ದೆವು. ಇದು ಅತ್ಯುತ್ತಮ ಗುಣಮಟ್ಟವನ್ನೂ ಹೊಂದಿತ್ತು. ತಿರುಪತಿ ಲಡ್ಡುವಿನ ರುಚಿಯಲ್ಲಿ ಇದರ ಕೊಡುಗೆ ಇತ್ತು. ಹೀಗಿದ್ದರೂ ಕಳೆದ ಸಲದ ಟೆಂಡರ್‌ನಲ್ಲಿ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯು ಸ್ಪರ್ಧಾತ್ಮಕ ದರದಲ್ಲಿ ತುಪ್ಪ ಪಡೆಯಲು ಬಯಸಿತ್ತು. ಉತ್ತಮ ಗುಣಮಟ್ಟದ ತುಪ್ಪ ನೀಡುವುದರಿಂದ ಕಡಿಮೆ ಬೆಲೆಗೆ ಕೊಡಲು ಸಾಧ್ಯವಿರಲಿಲ್ಲ. ಹೀಗಾಗಿ ಟೆಂಡರ್‌ ಬೇರೊಂದು ಕಂಪನಿಯ ಪಾಲಾಗಿದೆ ಎಂದು ಕರ್ನಾಟಕ ಮಿಲ್ಕ್‌ ಫೆಡರೇಷನ್‌ನ ಚೇರ್ಮನ್‌ ಭೀಮಾ ನಾಯಕ್‌ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Milk Miracle : ಗಣಪತಿ ಹಾಲು ಕುಡಿದದ್ದು ನೆನಪಿದ್ಯಾ? ಈಗ ಬಸವಣ್ಣ ಹಾಲು ಕುಡಿದನಂತೆ!

ಟೆಂಡರ್‌ನಲ್ಲಿ ಕಡಿಮೆ ದರ ಬಿಡ್ಡರ್‌ ತುಪ್ಪ ಪೂರೈಸಲಿದ್ದಾರೆ ಎಂದು ತಿಳಿಸಲಾಗಿತ್ತು. ನಾವು ನಿಗದಿತ ದರದಲ್ಲಿ ಮಾತ್ರ ಪೂರೈಸಲು ಸಾಧ್ಯ. ದರದಲ್ಲಿ ಬದಲಾವಣೆ ಮಾಡಲು ಸಾಧ್ಯವಿರಲಿಲ್ಲ.‌ ಕಡಿಮೆ ದರದಲ್ಲಿ ಕೊಡಲು ಸಾಧ್ಯವಿಲ್ಲ ಎಂದು ಭೀಮಾ ನಾಯಕ್‌ ವಿವರಿಸಿದ್ದಾರೆ. ಆಗಸ್ಟ್‌ 1 ರಿಂದ ಹಾಲು ಖರೀದಿಯ ವೆಚ್ಚದಲ್ಲೂ ಏರಿಕೆಯಾಗಲಿದೆ. ಕೆಎಂಎಫ್‌ ಚೇರ್ಮನ್‌ ಪ್ರಕಾರ ಭವಿಷ್ಯದ ದಿನಗಳಲ್ಲಿ ಬಹುಶಃ ತಿರುಪತಿ ಲಡ್ಡಿನ ರುಚಿಯ ಮೇಲೆ ಬದಲಾವಣೆಯ ಪ್ರಭಾವ ಬೀರಬಹುದು. ಆದರೆ ವಿಶ್ವ ವಿಖ್ಯಾತ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಪೂರೈಕೆ ಆಗದಿರುವುದಕ್ಕೆ ಹಲವು ಮಂದಿ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕೆಎಂಎಫ್‌ ಟೆಂಡರ್‌ನಲ್ಲಿ ಆಯ್ಕೆಯಾಗಬೇಕಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Exit mobile version