Site icon Vistara News

Book Release: ಮೈಸೂರಿನಲ್ಲಿ ʼನಾನು ಕೃತಾರ್ಥಳು ನಾನು ಕೃತಜ್ಞಳುʼ ಪುಸ್ತಕ ಬಿಡುಗಡೆ

Nanu krutarthalu nanu krutagnalu book Released In Mysore

#image_title

ಮೈಸೂರು: ಮೈಸೂರಿನಲ್ಲಿ ನಡೆದ ರಾಷ್ಟ್ರ ಸೇವಿಕಾ ಸಮಿತಿ ದ್ವಿತೀಯ ಅರ್ಧ ವಾರ್ಷಿಕ ಬೈಠಕ್‌ನಲ್ಲಿ ‘ನಾನು ಕೃತಾರ್ಥಳು ನಾನು ಕೃತಜ್ಞಳು’ ಪುಸ್ತಕವನ್ನು (Book Release) ಬಿಡುಗಡೆ ಮಾಡಲಾಯಿತು. ಇದು ರಾಷ್ಟ್ರ ಸೇವಿಕಾ ಸಮಿತಿಯ ದ್ವಿತೀಯ ಸಂಚಾಲಿಕಾ ವಂದನೀಯ ಸರಸ್ವತೀ ತಾಯಿ ಆಪ್ಟೆ (ತಾಯೀಜಿ) ಅವರ ಬದುಕು ಹಾಗೂ ಉನ್ನತ ವ್ಯಕ್ತಿತ್ವ ಕುರಿತು ಲೇಖಕಿ ಮೃಣಾಲಿನಿ ಜೋಷಿ ಅವರು ಬರೆದಿರುವ ‘ಕೃತಾರ್ಥಮೀ ಕೃತಜ್ಞಮೀ’ ಮೂಲ ಮರಾಠಿ ಪುಸ್ತಕದ ಕನ್ನಡ ಅನುವಾದವಾಗಿದೆ. ರಾಷ್ಟ್ರ ಸೇವಿಕಾ ಸಮಿತಿಯ ಸುಕೃಪಾ ಟಸ್ಟ್ ವತಿಯಿಂದ ಈ ಕೃತಿಯನ್ನು ಹೊರತರಲಾಗಿದೆ.

ಮುಖ್ಯ ಅತಿಥಿ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಡಾ. ಬಿ.ವಿ. ಸುಧಾಮಣಿ ಮಾತನಾಡಿ, ಈ ಪುಸ್ತಕ ವಂದನೀಯ ತಾಯೀಜಿ ಅವರ ಜೀವನದ ಆದರ್ಶಗಳನ್ನು ಸಾರಿದೆ, ಮೂಲ ಪುಸ್ತಕದ ಆಶಯ ಹಾಗೂ ಭಾವನೆಗಳನ್ನು ಕನ್ನಡ ಅನುವಾದಿತ ಪುಸ್ತಕದಲ್ಲಿ ಕಾಣಬಹುದಾಗಿದೆ. ಇದನ್ನು ಎಲ್ಲ ಮಹಿಳೆಯರೂ ಓದಲೇಬೇಕು ಎಂದು ತಿಳಿಸಿದರು.

ಪುಸ್ತಕದ ಲೇಖಕಿ ಎಸ್. ಉಮಾದೇವಿ ಅವರು ಮಾತನಾಡಿ, ಮೂಲ ಪುಸ್ತಕವನ್ನು ಓದಿದ ನಂತರ ಕನ್ನಡ ಅನುವಾದ ಮಾಡುವ ಹಂತದಲ್ಲಿ ವಂದನೀಯ ಸರಸ್ವತಿ ತಾಯಿ ಅವರ ಜೀವನಗಾಥೆಯು ತಮ್ಮ ಮೇಲೆ ಅಪಾರ ಪ್ರಭಾವವನ್ನು ಬೀರಿತು ಎಂದು ಹೇಳಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಲಸಿಕಾ ವಿಜ್ಞಾನದ ಪಿತಾಮಹ ಎಡ್ವರ್ಡ್ ಜೆನ್ನರ್; ಅವನು ಯುದ್ಧವನ್ನೇ ನಿಲ್ಲಿಸಿದ ಶಸ್ತ್ರರಹಿತ ಸೇನಾನಿ!

ಹೊಯ್ಸಳ ಪ್ರಾಂತ ಕಾರ್ಯವಾಹಿಕಾ ಮಾ. ವಸಂತಾ ಸ್ವಾಮಿ ಅವರು ಪುಸ್ತಕ ಪರಿಚಯ ಮಾಡಿ, ವಂದನೀಯ ಸರಸ್ವತಿ ತಾಯೀಜಿ ಅವರ ಪ್ರೇರಣಾದಾಯಿ ವ್ಯಕ್ತಿತ್ವ ಮತ್ತು ಸಮಾಜಮುಖಿ ಚಿಂತನೆ ಹಾಗೂ ಸೇವಾಕಾರ್ಯ ಕುರಿತು ಮಾತನಾಡಿ, ಈ ಪುಸ್ತಕದ ಅಧ್ಯಯನದಿಂದ ಎಲ್ಲ ಕಾರ್ಯಕರ್ತೆಯರೂ ಸ್ಫೂರ್ತಿ ಪಡೆದು
ರಾಷ್ಟ್ರ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹಿಕಾ ಮಾ. ಸಾವಿತ್ರಿ ಸೋಮಯಾಜಿ, ದಕ್ಷಿಣ ಮಧ್ಯ ಕ್ಷೇತ್ರ ಸಹ ಕಾರ್ಯವಾಹಿಕಾ ಮಾ. ಅಂಬಿಕಾ ನಾಗಭೂಷಣ್ ಉಪಸ್ಥಿತರಿದ್ದರು.

Exit mobile version