ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಮಾದಕ ವಸ್ತುವನ್ನು (Narcotic raid) ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೋಕರ್ಣದ ಬೇಲೆಹಿತ್ತಲ ನಿವಾಸಿ ತುಳುಸು ಗೌಡ, ಮೂಲೇಕೇರಿ ನಿವಾಸಿ ಶ್ರೀಧರ ಗೌಡ ಹಾಗೂ ಕುಡ್ಲೆ ನಿವಾಸಿ ಸಂತ ಬದ್ದೂರ್ ಬಂಧಿತ ಆರೋಪಿಗಳು. ಈ ಮೂವರು ಓಂ ಬೀಚ್ ರಸ್ತೆಯಲ್ಲಿ ಮಾದಕ ವಸ್ತುವಾದ ಚರಸ್ ಅನ್ನು ಇರಿಸಿಕೊಂಡು ವಿದೇಶಿಗರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಸಿಪಿಐ ಮಂಜುನಾಥ ಎಂ ಅವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದ್ದು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿಗಳಿಂದ ಸುಮಾರು 10 ಲಕ್ಷ ರೂ. ಮೌಲ್ಯದ 1 ಕೆಜಿ 648 ಗ್ರಾಂ ಚರಸ್ ಅನ್ನು ಜಪ್ತಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ನಿರೀಕ್ಷಕ ಹರೀಶ್ ಎಚ್, ಪಿ.ಎಸ್.ಐ ಸಕ್ತಿ ವೇಲು, ಸಿಬ್ಬಂದಿಗಳಾದ ರಾಜೇಶ ನಾಯ್ಕ, ಅರವಿಂದ ಶೆಟ್ಟಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Puneeth Rajkumar: ಪೋಸ್ಟರ್‌ಗೆ ಸೀಮಿತವಾಯಿತು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ ಸ್ಫೂರ್ತಿ ದಿನ