Site icon Vistara News

ರಾಷ್ಟ್ರಪತಿ ನರೇಂದ್ರ ಮೋದಿ ಅಂದ್ರು ಮಕ್ಕಳು! ಎಷ್ಟು ಜಿಲ್ಲೆ ಅಂತ ಶಿಕ್ಷಕರಿಗೂ ಗೊತ್ತಿಲ್ಲ; ಸಚಿವ ಖಂಡ್ರೆ ಕಂಗಾಲು

Minister Ishwar Khandre visit Aurad‌ govt school 2

ಬೀದರ್: ನಮ್ಮ ದೇಶದ ರಾಷ್ಟ್ರಪತಿ ಯಾರು? (President of India) ನಮ್ಮ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳು ಇವೆ? ಹೀಗೆಂದು ಅರಣ್ಯ ಹಾಗೂ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಕ್ಕಳು ಹಾಗೂ ಶಿಕ್ಷಕರಿಗೆ ಕೇಳಿದ ಪ್ರಶ್ನೆಗೆ ಬಂದ ಉತ್ತರ ಎಲ್ಲರನ್ನೂ ಕಂಗಾಲು ಮಾಡಿದೆ! ಏಕೆಂದರೆ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ರಾಷ್ಟ್ರಪತಿಯಾಗಿದ್ದಾರೆ!

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕರಿಕ್ಯಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇಂಥದ್ದೊಂದು ಪ್ರಸಂಗ ನಡೆದಿದೆ. ಸಚಿವ ಈಶ್ವರ ಖಂಡ್ರೆ ಕರಿಕ್ಯಾಳ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಶಾಲೆ ಹೇಗಿದೆ? ಮಕ್ಕಳು ಹೇಗೆ ಕಲಿಕೆ ಮಾಡುತ್ತಿದ್ದಾರೆ? ಶಿಕ್ಷಕರು ಪಾಠವನ್ನು ಸರಿಯಾಗಿ ಮಾಡುತ್ತಿದ್ದಾರೆಯೇ ಎಂದು ಪರಿಶೀಲನೆ ನಡೆಸಲು ಶಾಲೆಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: Crime News: ಮಹಿಳೆಗೆ ಲೈಂಗಿಕ ಹಿಂಸೆ ನೀಡಿ, ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿದ ಕೀಚಕರು, ಅವರಿಗೆ ಕಾದಿದೆ ಬೆತ್ತದ ರುಚಿ

ಕರಿಕ್ಯಾಳ ಗ್ರಾಮದ ಶಾಲಾ ಶಿಕ್ಷಕರನ್ನು ತರಾಟೆ ತೆಗೆದುಕೊಂಡ ಸಚಿವ ಈಶ್ವರ ಖಂಡ್ರೆ

ಹೀಗೆ ಭೇಟಿ ನೀಡಿದಾಗ ಮಕ್ಕಳ ಬಳಿ ಬಂದ ಸಚಿವ ಈಶ್ವರ ಖಂಡ್ರೆ, ದೇಶದ ರಾಷ್ಟ್ರಪತಿ ಯಾರು ಎಂದು ಮಕ್ಕಳಿಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮಕ್ಕಳು ಮರು ಮಾತಿಲ್ಲದೆ, “ನರೇಂದ್ರ ಮೋದಿ” ಎಂದು ಉತ್ತರಿಸಿದ್ದಾರೆ. ಮಕ್ಕಳು ನೀಡಿದ ಉತ್ತರಕ್ಕೆ ಮುಜುಗರಕ್ಕೆ ಒಳಗಾದ ಈಶ್ವರ ಖಂಡ್ರೆ ಶಿಕ್ಷಕರ ಕಡೆಗೆ ತಿರುಗಿ, “ಎಂತಹ ಪಾಠ ಮಾಡುತ್ತೀರಿ” ಎಂದು ಗದರಿದ್ದಾರೆ.

ಈ ವೇಳೆ ಶಿಕ್ಷಕರು ಎಷ್ಟರ ಮಟ್ಟಿಗೆ ತಿಳಿವಳಿಕೆಯನ್ನು ಹೊಂದಿದ್ದಾರೆ ಎಂದು ತಿಳಿಯುವ ಸಂಬಂಧ ಅವರಿಗೂ ಒಂದು ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಶಿಕ್ಷಕರು ಉತ್ತರಿಸಲು ತಡಬಡಾಯಿಸಿದ್ದಾರೆ. ಇದು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ. ಆಗಿದ್ದೇನೆಂದರೆ ಪ್ರಶ್ನೆ ಕೇಳಲು ಶಿಕ್ಷಕರತ್ತ ಬಂದ ಸಚಿವ ಈಶ್ವರ ಖಂಡ್ರೆ, ರಾಜ್ಯದಲ್ಲಿ ಜಿಲ್ಲೆಗಳು ಎಷ್ಟು ಇವೆ? ಎಂಬ ಸರಳ ಪ್ರಶ್ನೆಯನ್ನೇ ಕೇಳಿದ್ದಾರೆ. ಆಗ ಶಿಕ್ಷಕರು, “ಅದೂ.. ಅದೂ… ಅದೂ..” ಎಂದು ತಡವರಿಸುತ್ತಾ ಹೋಗಿದ್ದು ಬಿಟ್ಟರೆ, ಸರಿಯಾದ ಉತ್ತರವನ್ನೇ ನೀಡಲಿಲ್ಲ!

ಇದನ್ನೂ ಓದಿ: Video Viral: 4 ನೈಂಟಿ ಕೊಡುವೆನೆಂದು ಹಣ ಪಡೆದು ಎರಡೇ ಕೊಟ್ಟವನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಟ್ಟಿದ ನಾರಿಯರು!

ಇದು ನಮ್ಮ ಶಿಕ್ಷಣ ವ್ಯವಸ್ಥೆಯ ಕನ್ನಡಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಸಚಿವ ಈಶ್ವರ ಖಂಡ್ರೆ, ಶಿಕ್ಷಕರಿಗೆ ಗೊತ್ತಿಲ್ಲದೇ ಹೋದರೆ, ಮಕ್ಕಳಿಗೆ ಇನ್ನೇನು ಕಲಿಸಿಕೊಡುತ್ತೀರಿ ಎಂದು ಪ್ರಶ್ನೆ ಮಾಡಿದರು. ಅಲ್ಲದೆ, ಮೇಲಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

Exit mobile version