Site icon Vistara News

National Youth Festival : ಮೋದಿಗೆ ನೀಡಿದ ವಿಶೇಷ ಮೂರು ಉಡುಗೊರೆಗಳಿವು; ಬಹಳ ಹೊತ್ತು ಏಲಕ್ಕಿ ಪೇಟ ಧರಿಸಿಯೇ ಕುಳಿತಿದ್ದ ಪ್ರಧಾನಿ

modi in peta ಹಾವೇರಿ ಏಲಕ್ಕಿ ಹಾರ, ಪೇಟ, ಧಾರವಾಡ ಶಾಲು

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರೀಯ ಯುವಜನೋತ್ಸವ (National Youth Festival) ಕಾರ್ಯಕ್ರಮದಲ್ಲಿ ಸ್ಥಳೀಯವಾಗಿ ಸಿದ್ಧಪಡಿಸಲಾದ ಮೂರು ವಿಶೇಷ ಉಡುಗೊರೆಗಳನ್ನು ನೀಡಲಾಗಿದೆ. ಹಾವೇರಿಯ ಏಲಕ್ಕಿ ಪೇಟ, ಹಾರ, ರಾಷ್ಟ್ರಧ್ವಜದ ಸ್ಮರಣಿಕೆ ಹಾಗೂ ಬಿದರಿ ಕಲೆಯಲ್ಲಿ ಅರಳಿದ ವಿವೇಕಾನಂದರ ಮೂರ್ತಿಯನ್ನು ನೀಡಿ ಗೌರವಿಸಲಾಗಿದೆ.

ಹಾವೇರಿ ಏಲಕ್ಕಿ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಹೀಗಾಗಿ ಅಲ್ಲಿನ ಏಲಕ್ಕಿಯಿಂದ ಪೇಟ, ಹಾರವನ್ನು ತಯಾರಿಸಲಾಗಿತ್ತು. ಬೀದರ್‌ ಜಿಲ್ಲೆಯ ಖ್ಯಾತ ಬಿದರಿ ಕಲೆಯಿಂದ ನಿರ್ಮಾಣ ಮಾಡಿದ ಸ್ವಾಮಿ ವಿವೇಕಾನಂದರ ಮೂರ್ತಿ, ಧಾರವಾಡದಲ್ಲಿ ವಿಶೇಷವಾಗಿ ನೇಯಲ್ಪಟ್ಟ ಹ್ಯಾಂಡ್‌ಲೂಮ್‌ ಶಾಲು, ಗರಗ ಹಾಗೂ ಬೆಂಗೇರಿಯಲ್ಲಿ ತಯಾರಿಸಿದ ರಾಷ್ಟ್ರಧ್ವಜವನ್ನು (ಇದಕ್ಕೆ ಟೀಕ್‌ವುಡ್‌ ಫ್ರೇಮ್‌ ಅಳವಡಿಸಲಾಗಿದೆ) ಉಡುಗೊರೆಯಾಗಿ ನೀಡಲಾಗಿದೆ.

ಏಲಕ್ಕಿ ಹಾರ, ಶಾಲು ಸೇರಿದಂತೆ ರಾಷ್ಟ್ರಧ್ವಜದ ಸ್ಮರಣಿಕೆಯನ್ನು ತೆಗೆದುಕೊಟ್ಟ ಮೋದಿ, ಏಲಕ್ಕಿ ಪೇಟವನ್ನು ಮಾತ್ರ ಬಹಳ ಕಾಲ ಧರಿಸಿಯೇ ಕುಳಿತಿದ್ದರು. ಈ ವೇಳೆ ಯುವ ಜನರ ಸಾಂಸ್ಕೃತಿಕ, ಕಲಾ ಪ್ರದರ್ಶನಗಳನ್ನು ವೀಕ್ಷಿಸಿದ ಪ್ರಧಾನಿ ಆಗಲೂ ಪೇಟವನ್ನು ಧರಿಸಿಯೇ ಕುಳಿತಿದ್ದರು. ತಮ್ಮ ಭಾಷಣಕ್ಕೆ ಕೆಲವು ಸಮಯಗಳ ಮುಂಚೆ ಅದನ್ನು ತೆಗೆದಿಟ್ಟರು.

ಇದನ್ನೂ ಓದಿ | National Youth Festival | ಮೋದಿ ಭಾಷಣದಲ್ಲಿ ಕನ್ನಡ ಕಂಪು, ಶ್ರೀ ಸಿದ್ದೇಶ್ವರ ಸ್ವಾಮೀಜಿ ಸ್ಮರಣೆ

Exit mobile version