ಬೆಂಗಳೂರು: ವಿದೇಶಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ವಾಟರ್ ಬರ್ತ್ ಪೂಲ್ ಪರಿಕಲ್ಪನೆ ಇದೀಗ ರಾಜಧಾನಿ ಬೆಂಗಳೂರಿನಲ್ಲೂ ಹೆಚ್ಚಾಗುತ್ತಿದೆ. ನಿಧಾನವಾಗಿ ಮಹಿಳೆಯರು ಸಿ-ಸೆಕ್ಷನ್ ಬದಲಿಗೆ ವಾಟರ್ ಬರ್ತ್ ಮೊರೆ ಹೋಗುತ್ತಿದ್ದಾರೆ. ಬೆಂಗಳೂರಿನ ರೈಬೊ ಆಸ್ಪತ್ರೆಯಲ್ಲಿ ಪ್ರಾಚೀನ ಕಲ್ಪನೆಯ ನ್ಯಾಚುರಲ್ ಬರ್ತ್ ಸೆಂಟರ್ (Natural birth center) ತೆರೆದಿದೆ.
ವಾಟರ್ ಬರ್ತ್ ಪೂಲ್ ಹೆಸರೇ ಹೇಳುವಂತೆ ನೀರಿನ ಕೊಳದಂತಿರುವ ಡಬ್‌ನಲ್ಲಿ ಹೆರಿಗೆ ಮಾಡಿಸಲಾಗುತ್ತದೆ. ನೀರಿನಲ್ಲಿದ್ದಾಗ ಗರ್ಭಿಣಿಗೆ ಹೆರಿಗೆ ನೋವು ಕಡಿಮೆಯಾಗುತ್ತದೆ. ಹೈಡ್ರೋಥೆರಪಿ ಮೂಲಕ ವಾಟರ್ ಬರ್ತ್ ಡೆಲಿವರಿ ಮಾಡಿಸಲಾಗುತ್ತದೆ. ಗರ್ಭಿಣಿ ನೀರಿನಲ್ಲಿದ್ದಾಗ ಹೆರಿಗೆ ನೋವು ಕಡಿಮೆ ಆಗಿ, ಮಸಲ್ ರಿಲ್ಯಾಕ್ಸ್ ಆಗುವ ಕಾರಣ ಸಾಮಾನ್ಯ ಹೆರಿಗೆಗೆ ಸಹಕಾರಿಯಾಗುತ್ತದೆ.
ಹೀಗಾಗಿ ಇದನ್ನು ನಟಿ ಅಮೂಲ್ಯ ಖುಷಿ ವ್ಯಕ್ತಪಡಿಸಿದ್ದು, ಸೆಂಟರ್‌ಗೆ ಚಾಲನೆ ನೀಡಿದರು. ವಾಟರ್ ಬರ್ತ್ ಡೆಲಿವರಿಯಲ್ಲಿ ಹೆರಿಗೆ ವೇಳೆ ಯಾವುದೇ ಔಷಧ ಬಳಸಲಾಗುವುದಿಲ್ಲ. ನೈಸರ್ಗಿಕವಾಗಿ ಹೆರಿಗೆ ಮಾಡಿಸಲಾಗುತ್ತದೆ. ಇದರಿಂದ ಹೆರಿಗೆ ನಂತರದ ಯಾವುದೇ ವ್ಯತ್ಯಯಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯ.
ಇದನ್ನೂ ಓದಿ | Tripura Sundari Serial | ʻಸ್ಪರ್ಶʼ ಸಿನಿಮಾ ಖ್ಯಾತಿಯ ನಟಿ ರೇಖಾ ಧಾರಾವಾಹಿಗೆ ಎಂಟ್ರಿ!