ಬೆಂಗಳೂರು: ಜವಾಹರ ನವೋದಯ ವಿದ್ಯಾಲಯದಲ್ಲಿ (Navodaya School) ಓದಬೇಕು ಎಂದು ಅದೆಷ್ಟೋ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕನಸು ಕಂಡಿರುತ್ತಾರೆ. 5ನೇ ತರಗತಿ ಮುಗಿಯುತ್ತಿದ್ದಂತೆ 6ನೇ ತರಗತಿಗೆ ಸೇರಿಸಲು ಅಪ್ಲಿಕೇಶನ್ ಸಲ್ಲಿಸಿ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಆದರೆ ಹಾಗೆ ಅಪ್ಲಿಕೇಶನ್ ಹಾಕಲು ಮುಂದಾಗಿದ್ದವರಿಗೆ ವೆಬ್‌ಸೈಟ್ ಕೈ ಕೊಟ್ಟಿದ್ದು, ಪೋಷಕರು ಶಾಕ್ ಆಗಿದ್ದಾರೆ.
2023ರ ಸಾಲಿನ ನವೋದಯ ಶಾಲೆಗೆ ಸೇರುವ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 31ರಂದು ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಎಂದು ಘೋಷಣೆ ಮಾಡಲಾಗಿದೆ. ಆದರೆ, ಇದೀಗ ವೆಬ್‌ಸೈಟ್ ಕೈಕೊಟ್ಟಿರುವುರಿಂದ ಪೋಷಕರು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ವೆಬ್ಸೈಟ್ನಲ್ಲಿ ಮಾಹಿತಿಗಳು ಅಪ್ಲೋಡ್ ಆಗದೇ ಪರದಾಡುತ್ತಿದ್ದಾರೆ.
ನವೋದಯ ಶಾಲಾ ವೆಬ್ಸೈಟ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಬಗ್ಗೆ ಹಲವು ಪೋಷಕರು ಕೂಡ ಆನ್ಲೈನ್ನಲ್ಲಿ ದೂರು ನೀಡಿದ್ದಾರೆ. ಅರ್ಜಿ ಹಾಕಲು ನೀಡಿರುವ ಡೆಡ್ಲೈನ್ ಸಮೀಪವಾಗುತ್ತಿದ್ದು, ಅರ್ಜಿ ಹಾಕದ ಅದೆಷ್ಟೋ ವಿದ್ಯಾರ್ಥಿಗಳು ಮುಂದೇನು ಎಂದು ಕಂಗಾಲಾಗಿದ್ದಾರೆ. ಈಗ ನೀಡಿರುವ ದಿನಾಂಕವನ್ನು ಮುಂದೂಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Amit Shah : ಕಾಂಗ್ರೆಸ್ ಹಿಡಿತದಲ್ಲಿರುವ ಕುಂದಗೋಳದಲ್ಲಿ ಅಮಿತ್ ಶಾ ರೋಡ್ ಶೋ: ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ
ವೆಬ್‌ಸೈಟ್ ಕಣ್ಣಾಮುಚ್ಚಾಲೆ ಆಟ ಪಚೀತಿ ತಂದಿಟ್ಟಿದೆ. ಆನ್ಲೈನ್ನಲ್ಲಿ ದೂರು ನೀಡಿದರೂ, ಹೆಲ್ಪ್ಲೈನ್ಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇತ್ತ ಅರ್ಜಿ ಹಾಕಲು ನೀಡಿರುವ ಡೆಡ್ಲೈನ್ ಕೂಡ ಮುಗಿಯುತ್ತಿದ್ದು, ನವೋದಯ ವಿದ್ಯಾಸಂಸ್ಥೆ ಪೋಷಕರ ಒತ್ತಾಯಕ್ಕೆ ಮಣಿದು ಅರ್ಜಿ ದಿನಾಂಕ ವಿಸ್ತರಣೆ ಮಾಡಲಿದ್ಯಾ ಕಾದುನೋಡಬೇಕಿದೆ.
ಇನ್ನಷ್ಟು ಶಿಕ್ಷಣ ಕ್ಷೇತ್ರದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ