Site icon Vistara News

Honey-Trap Case: ರಾಜಕುಮಾರ್‌ ಟಾಕಳೆ ಒಬ್ಬ ಹೆಣ್ಣುಬಾಕ, ಆತನ ಮನೆ ಅಕ್ರಮಗಳ ತಾಣ: ನವ್ಯಶ್ರೀ

Navyashree R Rao press meet

#image_title

ಬೆಳಗಾವಿ: ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ವಿರುದ್ಧದ ಹನಿಟ್ರ್ಯಾಪ್ ಪ್ರಕರಣದಲ್ಲಿ (Honey-Trap Case) ಬೆಳಗಾವಿ ಎಪಿಎಂಸಿ ಪೋಲಿಸರು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿರುವ ನವ್ಯಶ್ರೀ ಆರ್. ರಾವ್, ತಮ್ಮ ವಿರುದ್ಧ ಕೇಸ್‌ ದಾಖಲಿಸಿದ್ದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಠಾಕಳೆ ವಿರುದ್ಧ ಹರಿಹಾಯ್ದಿದ್ದಾರೆ.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಠಾಕಳೆ ಒಬ್ಬ ಹೆಣ್ಣುಬಾಕ, ಸೆಕ್ಸ್ ಟ್ರೇಡರ್ ಆಗಿದ್ದಾನೆ. ನನ್ನ ಖಾಸಗಿ ವಿಡಿಯೊಗಳನ್ನು ವೆಬ್‌ಸೈಟ್‌ಗೆ ಮಾರಾಟ ಮಾಡಿದ್ದಾನೆ. ಪೊಲೀಸರ ತನಿಖೆಯಲ್ಲಿ ಮೊಬೈಲ್ ಕಳೆದು ಹೋಗಿದೆ ಎಂದು ಏಕೆ ಸುಳ್ಳು ಹೇಳಿದ್ದಾನೆ. ಆತನ ಮೊಬೈಲ್‌ನಲ್ಲಿ ಬೇರೆ ಹೆಣ್ಣುಮಕ್ಕಳ ವಿಡಿಯೊಗಳು ಸಹ ಇರಬಹುದು. ಆತನ ಮನೆಯೇ ಅಕ್ರಮ ಚಟುವಟಿಕೆ ನಡೆಸುವ ತಾಣವಾಗಿದೆ. ಆತನ ಪತ್ನಿ ಹೇಗೆ ನನಗೆ ಮನೆಯಲ್ಲಿ ಒಂದು ವಾರ ಇರಲು ಅವಕಾಶ ಕೊಟ್ಟಳು? ಇದು ಬಿಗ್ ಮಾಫಿಯಾ ಇದೆ ಎಂದು ಆರೋಪಿಸಿದರು.

ಸರ್ಕಾರಿ ಅಧಿಕಾರಿಯಾಗಿ ಸರ್ಕಾರಿ ಬಂಗಲೆ ದುರುಪಯೋಗ ಪಡಿಸಿಕೊಂಡಿದ್ದಾನೆ. ಈತನ ಕಾಮಕೃತ್ಯಕ್ಕೆ ಎಷ್ಟೋ ಹೆಣ್ಣು ಮಕ್ಕಳು ಬಲಿಯಾಗಿರಬಹುದು? ಇಂತಹ ಗೋಮುಖ ವ್ಯಾಘ್ರನ ಜತೆ ಆತನ ಸಹೋದರರು ಸೇರಿದ್ದಾರೆ. ಯಾವ್ಯಾವ ವೆಬ್‌ಸೈಟ್‌ಗೆ ಯಾವ್ಯಾವ ಹೆಣ್ಣುಮಕ್ಕಳ ಖಾಸಗಿ ವಿಡಿಯೊ ಮಾರಾಟ ಮಾಡಿದ್ದಾನೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | Public safety: ಸಿಟಿಗೆ ಸೇಫ್ಟಿ ಐಲ್ಯಾಂಡ್‌ ಎಂಟ್ರಿ; ಬಟನ್‌ ಒತ್ತಿದ್ದರೆ ಪೊಲೀಸರು ಬರೋದು ಗ್ಯಾರಂಟಿ

2022 ಜುಲೈ 18ರಂದು ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ನನ್ನ ವಿರುದ್ಧ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಠಾಕಳೆ ನೀಡಿದ ದೂರಿನ ಮೇರೆಗೆ ಹನಿಟ್ರ್ಯಾಪ್ ಕೇಸ್ ದಾಖಲಾಗಿತ್ತು. ನನ್ನ ಆಪ್ತ ಹಾಗೂ ನನ್ನ ಮೇಲೆ ರಾತ್ರೋರಾತ್ರಿ ಎಫ್ಐಆರ್ ದಾಖಲು ಮಾಡಿದ್ದರು. ಅತ್ಯಾಚಾರ, ವಂಚನೆ, ಖಾಸಗಿ ವಿಡಿಯೊ ಹರಿಬಿಟ್ಟ ಬಗ್ಗೆ ಅವರ ವಿರುದ್ಧ ನಾನೂ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ, ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಪೊಲೀಸರು ಎರಡು ಪ್ರಕರಣ ತನಿಖೆ ಮಾಡಿದ್ದಾರೆ ಎಂದು ತಿಳಿಸಿದರು.

ನಾನು ದುಬೈನಲ್ಲಿ ಇದ್ದಾಗ ನನ್ನ ಖಾಸಗಿ ವಿಡಿಯೊ ಬೇರೆ ಬೇರೆ ವೆಬ್‌ಸೈಟ್‌ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದ. ಒಂದು ಅವನು ವಿಡಿಯೋ ಮಾಡಬೇಕು, ಇಲ್ಲ ನಾನು ಮಾಡಬೇಕು. ಆದರೆ, ಆ ವಿಡಿಯೋದಲ್ಲಿ ಆತನ ಮುಖ ಎಡಿಟ್ ಮಾಡಲಾಗಿತ್ತು. ಖಾಸಗಿ ಬದುಕಿಗೂ ವೃತ್ತಿ ಬದುಕಿಗೂ ವ್ಯತ್ಯಾಸ ಇದೆ. ನನ್ನ ಮೇಲೆ ಹನಿಟ್ರ್ಯಾಪ್ ಆರೋಪ ಬಂದ ಮೇಲೆ ನಾನು ಓಡಿ ಹೋಗಲಿಲ್ಲ ಎಂದು ಕಿಡಿಕಾರಿದರು.

ಹನಿಟ್ರ್ಯಾಪ್ ಎಂದರೆ ಏನು? ಇದೆಂತಹ ಹನಿಟ್ರ್ಯಾಪ್. ನಾನು ತಪ್ಪು ಮಾಡದಿದ್ದಾಗ ಹಿಂದೆ ತಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಪೊಲೀಸರು 11 ತಿಂಗಳು ಸುದೀರ್ಘ ತನಿಖೆ ಮಾಡಿ ಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. ಸಾಕ್ಷ್ಯಾಧಾರ ಕೊರತೆ, ತಪ್ಪು ತಿಳಿವಳಿಕೆಯಿಂದ ದೂರು ಎಂದು ಪರಿಗಣಿಸಿ ಪೊಲೀಸರು ಫೈಲ್ ಕ್ಲೋಸ್ ಮಾಡಿದ್ದಾರೆ. ನಾನು ನಿರ್ದೋಷಿ ಎಂದು ತಿಳಿಯಲು 11 ತಿಂಗಳು ಬೇಕಾಯಿತು ಎಂದು ತಿಳಿಸಿದರು.

ಇದನ್ನೂ ಓದಿ | 10 ವರ್ಷ ಅನ್ನ ಹಾಕಿದ ಬ್ಯಾಂಕ್‌ಗೆ ಕನ್ನ; ಹಾಸನದಲ್ಲಿ ಕೋಟಿ ರೂ. ಮೌಲ್ಯದ ಚಿನ್ನ ಕದ್ದು ಹೌಸ್‌ ಕೀಪರ್‌ ಎಸ್ಕೇಪ್‌

ಊರು ಯಾವುದೇ ಇರಬಹುದು, ರಾಜ್ಯ ಯಾವುದೇ ಇರಬಹುದು, ಆದರೇ ಕಾನೂನು ಎಲ್ಲರಿಗೂ ಒಂದೇ. ನಾನು ಮಾಡಿದ ಆರೋಪಗಳು ‌ನಿಜ ಎಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ ನವ್ಯಶ್ರೀ, ಕುಮಾರಕೃಪಾ ಗೆಸ್ಟ್‌ಹೌಸ್‌ನಲ್ಲಿ ತಮ್ಮ ಪತ್ನಿ ಎಂದು ನನ್ನ ಹೆಸರು ಉಲ್ಲೇಖಿಸಿದ್ದಾರೆ. ಕಾನೂನು ಪ್ರಕಾರ ರಾಜಕುಮಾರ್ ಠಾಕಳೆಗೆ ಶಿಕ್ಷೆಯಾಗಬೇಕು. ಆತ ಈಗ, ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾನೆ. ನಾನು ಸಹ ಸುಪ್ರೀಂಕೋರ್ಟ್‌‌‌‌ ಮೆಟ್ಟಿಲೇರುವೆ. ನನ್ನ ಪರ ಹಿರಿಯ ವಕೀಲ ಕಪಿಲ್ ಸಿಬಲ್‌ಗೆ ವಾದಮಂಡನೆಗೆ ಮನವಿ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಪ್ರಕರಣದಿಂದ ಹಿಂದೆ ಸರಿಯಲ್ಲ ಎಂದ ನವ್ಯಶ್ರೀ ಆರ್.ರಾವ್ ಹೇಳಿದರು.

ರಾಜಕುಮಾರ್ ಟಾಕಳೆಯನ್ನು ಗಂಡ ಎಂದು ಒಪ್ಪಿಕೊಳ್ಳುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಶಕ್ತ ಹೆಣ್ಣು ಇದ್ದೇನೆ, ಕುಟುಂಬ ನಿರ್ವಹಣೆ ಮಾಡುವ ಶಕ್ತಿ ಇದೆ. ನನಗೆ ಯಾವ ಗಂಡನ ಅವಶ್ಯಕತೆ ಇಲ್ಲ. ಗಂಡ ಎಂದರೆ ಹೆಂಡತಿ ವಿಡಿಯೊ ಮಾಡಿ ಅಪ್‌ಲೋಡ್ ಮಾಡೋದಲ್ಲ. ಆತನನ್ನು ಕ್ಷಮಿಸುವುದರಲ್ಲಿ ಅರ್ಥವೇ ಇಲ್ಲ ಎಂದ ನವ್ಯಶ್ರೀ ಆರ್.ರಾವ್ ಹೇಳಿದರು.

Exit mobile version