Site icon Vistara News

NEET Exam 2023: ‌ಇಂದು ನೀಟ್‌ ಪರೀಕ್ಷೆ; ಎಷ್ಟು ಗಂಟೆಯೊಳಗೆ ಪರೀಕ್ಷಾ ಕೇಂದ್ರದಲ್ಲಿರಬೇಕು?

SSSLC Exam from March 25 2348 students registered in Koratagere taluk

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೇ 7ರಂದು ನೀಟ್‌ ಪರೀಕ್ಷೆಯನ್ನು ನಡೆಸುತ್ತಿದೆ. ಈ ಬಾರಿ ದೇಶಾದ್ಯಂತ 499 ನಗರಗಳಲ್ಲಿರುವ ವಿವಿಧ ಕೇಂದ್ರಗಳು ಸೇರಿದಂತೆ ಭಾರತದ ಹೊರಗಿನ 14 ನಗರಗಳಲ್ಲೂ ನೀಟ್‌ ಪರೀಕ್ಷೆಯನ್ನು (NEET Exam 2023) ನಡೆಸಲಾಗುತ್ತಿದೆ. ಈ ಬಾರಿ ಒಟ್ಟು 18,72,341 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ನೀಟ್‌ (NEET UG) ಅನ್ನು 13 ಭಾಷೆಗಳಲ್ಲಿ ನಡೆಸಲಾಗುತ್ತಿದೆ. ಅದರ ಮೂಲಕ ಎಂಬಿಬಿಎಸ್‌ ಸೇರಿದಂತೆ 10 ಕೋರ್ಸ್‌ಗಳಿಗೆ ಪ್ರವೇಶವನ್ನು ನೀಡಲಾಗಿದೆ.

ಯಾವ ಸಮಯಕ್ಕೆ ನೀಟ್‌ ಪರೀಕ್ಷೆ?

ಮೇ 7ರ ಭಾನುವಾರದಂದು ನೀಟ್‌ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಅವಧಿ 3 ಗಂಟೆ 20 ನಿಮಿಷವಾಗಿದೆ. ಮಧ್ಯಾಹ್ನ 2 ಗಂಟೆಗೆ ಪರೀಕ್ಷೆ ಶುರುವಾಗಿ 5:20ಕ್ಕೆ ಮುಕ್ತಾಯವಾಗಲಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮೊದಲೇ ಹಾಜರಿರಬೇಕು. ವಿಶೇಷವಾಗಿ ಬೆಂಗಳೂರಿನಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ನರೇಂದ್ರ ಮೋದಿ ರೋಡ್‌ ಶೋ ಇರುವುದರಿಂದ ಮುಂಚಿತವಾಗಿ ಹೊರಡಲು ಸಲಹೆ ನೀಡಲಾಗಿದೆ.

ಇನ್ನು ಅಭ್ಯರ್ಥಿಗಳು ಹಾಲ್‌ ಟಿಕೆಟ್‌ ಅನ್ನು neet.nta.nic.in ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಹಾಲ್‌ ಟಿಕೆಟ್‌ ಅನ್ನು ಡೌನ್‌ಲೋಡ್ ಮಾಡಬಹುದು. ಕಳೆದ ಮೇ 3ರಿಂದಲೇ ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಪರೀಕ್ಷೆಯ ದಿನದಂದು ಅಭ್ಯರ್ಥಿಗಳು ಹಾಲ್‌ ಟಿಕೆಟ್‌ ಜತೆಗೆ ಐಡಿ ಕಾರ್ಡ್‌ ತೆಗೆದುಕೊಂಡು ಹೋಗಬೇಕು.

ಪರೀಕ್ಷಾ ಕೇಂದ್ರದೊಳಗೆ ಈ ವಸ್ತುಗಳಿಗೆ No Entry

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ನಿಗದಿತ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕಾಗುತ್ತದೆ. ಉದ್ದನೆಯ ತೋಳು ಇರುವ ಧಿರಿಸು, ಬೂಟುಗಳು, ಆಭರಣಗಳು ಅಥವಾ ಲೋಹದ ವಸ್ತುಗಳನ್ನು ಹೊಂದಿರುವ ಬಟ್ಟೆಗಳನ್ನು ಹಾಕಿಕೊಂಡು ಬರುವಂತಿಲ್ಲ.

ಇದನ್ನೂ ಓದಿ: Karnataka Election: ಮೇ 7ರಂದು ಆಯನೂರಿನಲ್ಲಿ ಮೋದಿ ಚುನಾವಣಾ ಪ್ರಚಾರ; 3 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿ ನಿರೀಕ್ಷೆ

ಜತೆಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ಪಠ್ಯ ಸಾಮಗ್ರಿಗಳು, ಕಾಗದದ ಬಿಟ್‌ಗಳು, ಪೆನ್ಸಿಲ್ ಬಾಕ್ಸ್‌ಗಳು, ಪ್ಲಾಸ್ಟಿಕ್ ಪೌಚ್‌ಗಳು ಸೇರಿದಂತೆ ಕ್ಯಾಲ್ಕುಲೇಟರ್‌ಗಳು, ಪೆನ್ ಡ್ರೈವ್‌ಗಳು, ಎಲೆಕ್ಟ್ರಾನಿಕ್ ಪೆನ್‌ಗಳನ್ನು ನಿಷೇಧಿಸಲಾಗಿದೆ.

Exit mobile version