ಬೆಂಗಳೂರು: ಯುಜಿನೀಟ್-2024ಕ್ಕೆ (NEET UG 2024) ಹೊಸದಾಗಿ ನೋಂದಣಿ ಮಾಡಿರುವ ಕ್ಲಾಸ್ ಎ ಮತ್ತು ಕ್ಲಾಸ್ ವೈ ಅಭ್ಯರ್ಥಿಗಳಿಗೆ ಪರಿಶೀಲನಾ ಪತ್ರವನ್ನು (ವೆರಿಫಿಕೇಶನ್ ಸ್ಲಿಪ್) ಪ್ರಾಧಿಕಾರದ ವೆಬ್‌ಸೈಟಿನ ಸೂಕ್ತ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಕ್ರವಾರ ಸೂಚಿಸಿದೆ.
ಒಂದು ವೇಳೆ ಎ ಮತ್ತು ಕ್ಲಾಸ್ ವೈ ಅಭ್ಯರ್ಥಿಗಳು ಯುಜಿ ನೀಟ್- 24ಕ್ಕೆ ಹೊಸದಾಗಿ ನೋಂದಣಿ ಮಾಡಿಸಿಕೊಂಡಿದ್ದು, ಎನ್ ಆರ್ ಐ-ವಾರ್ಡ್ ಎಂದು ಕ್ಲೇಮ್ ಮಾಡಿದ್ದಲ್ಲಿ ಅಥವಾ ಪ್ರವರ್ಗ 2ರಿಂದ ಪ್ರವರ್ಗ 8ರ ಅಡಿಯಲ್ಲಿ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕ್ಲೇಮ್ ಮಾಡಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ದಾಖಲಾತಿ ಪರಿಶೀಲನೆಗೆ ಆಗಸ್ಟ್ 12 ಅಥವಾ 13ರಂದು ಹಾಜರಾಗಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುಜಿ ನೀಟ್-2024ಕ್ಕೆ ಹೊಸದಾಗಿ ನೋಂದಣಿ ಮಾಡಿರುವ ಕ್ಲಾಸ್ ಬಿ, ಸಿ, ಡಿ, ಇ, ಎಫ್, ಜಿ, ಎಚ್, ಐ, ಜೆ, ಕೆ, ಎಲ್, ಎಂ, ಎನ್ ಮತ್ತು ಒ ಅಭ್ಯರ್ಥಿಗಳು ಹಾಗೂ ಒಸಿಐ/ ಪಿಐಒ / ಎನ್ ಆರ್ ಐ / ವಿದೇಶ ಪ್ರಜೆ ಅಭ್ಯರ್ಥಿಗಳು ಕೆಇಎ ಕಚೇರಿಗೆ ದಾಖಲಾತಿ ಪರಿಶೀಲನೆಗೆ ಆಗಸ್ಟ್ 12 ಅಥವಾ 13ರಂದು ಹಾಜರಾಗಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ದಾಖಲೆಗಳ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳ ಬಗ್ಗೆ ತಿಳಿಯಲು ಯುಜಿ ನೀಟ್-2024 ಮಾಹಿತಿ ಪುಸ್ತಕ ನೋಡಬಹುದು ಎಂದು ಹೇಳಲಾಗಿದೆ. ಆ.7ರಿಂದ 9ರವರೆಗೆ ನಡೆದ ದಾಖಲಾತಿ ಪರಿಶೀಲನೆಗೆ ಹಾಜರಾಗದಿದ್ದವರು ಕೂಡ ಈ ಮೇಲಿನ ದಿನಗಳಂದು ಭೇಟಿ ಕೊಡಬಹುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ | Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೋರೇಷನ್‌ನಲ್ಲಿದೆ 55 ಹುದ್ದೆ; ಹೀಗೆ ಅಪ್ಲೈ ಮಾಡಿ
ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಮತ್ತೆ ಮುಂದೂಡಿಕೆ; ಯಾವಾಗ ಪ್ರಕಟ?
ಬೆಂಗಳೂರು: ಯುಜಿಸಿಇಟಿ 2024ರ (UGCET 2024) ಮೊದಲ ಅಣಕು ಸೀಟು ಹಂಚಿಕೆಯ ಫಲಿತಾಂಶ ಬಿಡುಗಡೆ ಮತ್ತೆ ಮುಂದೂಡಿಕೆಯಾಗಿದೆ. ಆಗಸ್ಟ್ 9ರ ಸಂಜೆ ಫಲಿತಾಂಶ (KCET Mock Allotment 2024) ಬಿಡುಗಡೆ ಮಾಡುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿತ್ತು. ಆದರೆ, ಇದೀಗ ಮತ್ತೆ ಒಂದು ದಿನ ಮುಂದೂಡಲಾಗಿದೆ. ಈ ಕುರಿತು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.
ಎಂಜಿನಿಯರಿಂಗ್ (Engineering) ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ (UGCET 2024) ಪ್ರವೇಶಕ್ಕೆ ತಮ್ಮ ಆಸಕ್ತಿಗನುಗುಣವಾಗಿ ಆಪ್ಷನ್ ದಾಖಲಿಸಿರುವ ಸಿಇಟಿ ರ‍್ಯಾಂಕಿಂಗ್ (CET Ranking) ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಆ.10ರಂದು ಸಂಜೆ 6 ಗಂಟೆಗೊಳಗೆ ಕೆಇಎ (KEA) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಕೆಇಎ ತಿಳಿಸಿದೆ.
ಅಭ್ಯರ್ಥಿಗಳಿಗೆ ತಮ್ಮ ಆಪ್ಷನ್ ದಾಖಲಿಸಲು ಆಗಸ್ಟ್ 4 ಕೊನೆಯ ದಿನವಾಗಿತ್ತು. ಎಂಜಿನಿಯರಿಂಗ್, ಯೋಗ, ನ್ಯಾಚುರೋಪಥಿ, ಪಶುವೈದ್ಯ, ನರ್ಸಿಂಗ್, ಕೃಷಿ ವಿಜ್ಞಾನ, ಬಿ -ಫಾರ್ಮಾ ಮತ್ತು ಡಿ-ಫಾರ್ಮಾ ಕೋರ್ಸ್ ಮತ್ತು ಕಾಲೇಜುಗಳ ಆಯ್ಕೆ ಆಪ್ಷನ್ ಮೂಲಕ ನಡೆದಿದೆ. ಇಂದು ಅಣಕು ಸೀಟು ಹಂಚಿಕೆ ಬಳಿಕ ನೈಜ ಸೀಟು ಹಂಚಿಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಈ ಮೊದಲು ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಏಳು ದಿನ ಅವಕಾಶ ನೀಡಲಾಗಿತ್ತು. ಜು.30ರಂದು ಕೊನೆಯಾಗಲಿದ್ದ ಅದನ್ನು ಅಭ್ಯರ್ಥಿಗಳ ಮನವಿ ಮೇರೆಗೆ ಮತ್ತೂ ವಿಸ್ತರಿಸಲಾಗಿತ್ತು. ಯೋಗ ಮತ್ತು ನ್ಯಾಚುರೋಪತಿ ಕೋರ್ಸುಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು, ಅದಕ್ಕೂ ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿತ್ತು. ರಾಷ್ಟ್ರೀಯ ವೈದ್ಯಕೀಯ ಮಂಡಳಿ, ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳು / ಅಧಿಸೂಚನೆಗಳ ಅನ್ವಯ ವೈದ್ಯಕೀಯ ಮತ್ತು ದಂತ ವೈದ್ಯಕ್ಯೀಯ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ.