Site icon Vistara News

Free Electricity: ಉಚಿತ ವಿದ್ಯುತ್‌ ಅರ್ಜಿ ಪೋರ್ಟಲ್‌ ಓಪನ್‌ ಆಗ್ತಿಲ್ವಾ? ಈ ಲಿಂಕ್‌ ಬಳಸಿ, ನೇರ ಕನೆಕ್ಟ್‌ ಆಗುತ್ತೆ

Gruha jyothi registration

#image_title

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರ ಘೋಷಿಸಿರುವ ಉಚಿತ ವಿದ್ಯುತ್‌ (Free Electricity) ನೀಡುವ ಗೃಹ ಜ್ಯೋತಿ ಯೋಜನೆ (Gruhajyothi scheme)ಗೆ ನೋಂದಣಿ ಮಾಡಿಕೊಳ್ಳಲು ಜನರ ಪರದಾಟ ಮುಂದುವರಿದಿದೆ. ಹಲವಾರು ಕಡೆಗಳಲ್ಲಿ ಸೇವಾ ಸಿಂಧು ಪೋರ್ಟಲ್‌ (Sewa sindhu Portal) ಓಪನ್‌ ಆಗದೆ ಸಮಸ್ಯೆಯಾದರೆ ಕೆಲವು ಕಡೆ ಡೆಡ್‌ ಸ್ಲೋ ಇದೆ. ಹೀಗಾಗಿ ರಾಜ್ಯ ಸರ್ಕಾರ ಹೊಸ ವ್ಯವಸ್ಥೆಯೊಂದನ್ನು ಮಾಡಲಾಗಿದೆ. ಇದು ಅತ್ಯಂತ ಸರಳ ಮತ್ತು ನೇರವಾಗಿದೆ.

ರಾಜ್ಯದ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನೋಂದಣಿ ಮಾಡಲು ಪ್ರತ್ಯೇಕ ಲಾಗಿನ್ ಐಡಿ ಹಾಗೂ ಪ್ರತ್ಯೇಕ ಲಿಂಕ್ ಅನ್ನು ನೀಡಲಾಗಿದೆ. ಹಾಗಾಗಿ ರಾಜ್ಯದ 2000 ವಿದ್ಯುಚ್ಛಕ್ತಿ ಕಚೇರಿಗಳು, ಗ್ರಾಮ ಪಂಚಾಯತಿಗಳು ಹಾಗು ನಾಡ ಕಚೇರಿಗಳಲ್ಲಿ ಪ್ರತ್ಯೇಕ ಲಿಂಕ್‌ ಮೂಲಕ ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯಲಿದೆ. ನಡೆಯಲಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು.

ಗ್ರಾಮ ಒನ್ ಕೇಂದ್ರಗಳಿಗೆ ರಾಜ್ಯ ಸರ್ಕಾರ ನೀಡಿರುವ ಪ್ರತ್ಯೇಕ ಲಿಂಕ್ ಗಳಲ್ಲಿ ವಿದ್ಯುತ್ ಗ್ರಾಹಕರು 200 ಯೂನಿಟ್ ಉಚಿತ ವಿದ್ಯುತ್ ಯೋಜನೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಕೇವಲ ಒಂದೇ ಒಂದು ನಿಮಿಷಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಜನರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಲಿಂಕ್‌ ಇದು

ಗೃಹ ಜ್ಯೋತಿ ಯೋಜನೆಯ ಸೌಲಭ್ಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿದಲ್ಲಿ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶ ದೊರೆಯಲಿದೆ. ಒಂದೋ ಇದನ್ನೇ ಕ್ಲಿಕ್‌ ಮಾಡಬಹುದು, ಇಲ್ಲವೇ ಇದನ್ನು ಕಾಪಿ ಮಾಡಿ ಗೂಗಲ್‌ ಸರ್ಚ್‌ಗೆ ಹಾಕಿ ಕ್ಲಿಕ್‌ ಮಾಡಬಹುದು.

ಇದಲ್ಲದೇ ಲಿಂಕ್ ಕೂಡ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Electricity bill: ಒಂದು ಹೊತ್ತಿನ ಊಟಕ್ಕೂ ಪರದಾಡುವ ಅಜ್ಜಿ ಮನೆಗೆ ಬಂತು ಒಂದು ಲಕ್ಷ ಕರೆಂಟ್‌ ಬಿಲ್!

Exit mobile version