Site icon Vistara News

New Year 2024 : ಹೊಸ ವರ್ಷದ ಪಾರ್ಟಿಗೆ ರೈಲಿನಲ್ಲಿ ಬಂತು ಗಾಂಜಾ!

Smuggling of drugs from outside the state for the New Year

ಬೆಂಗಳೂರು: ಹೊಸ ವರ್ಷಕ್ಕೆ (New Year 2024) ದಿನಗಣನೆ (Drugs Siezed) ಶುರುವಾಗಿದೆ. ಸಂಭ್ರಮದ ಕಾವು ಜೋರಾಗಿದ್ದು, ಈ ಸಮಯದಲ್ಲಿ ಮಾದಕ ವಸ್ತುಗಳಿಗೆ ಡಿಮ್ಯಾಂಡ್ ಜಾಸ್ತಿ ಆಗಿದೆ. ಆದರೆ ಮಾದಕ ವಸ್ತುಗಳನ್ನು ಸರಬರಾಜು ಮಾಡುವುದು ಪೆಡ್ಲರ್‌ಗಳಿಗೆ ದೊಡ್ಡ ತಲೆನೋವಾಗಿದೆ. ಹೆಜ್ಜೆ ಹೆಜ್ಜೆಗೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಪೆಡ್ಲರ್‌ಗಳು ಮಾದಕ ವಸ್ತುಗಳ ಸರಬರಾಜು ಮಾಡಲು ಆಗುತ್ತಿಲ್ಲ. ಸದ್ಯ ಪೊಲೀಸರ ಕಣ್ತಪ್ಪಿಸಿ ಗಾಂಜಾ ಸಾಗಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರಿಗರಿಗೆ ನಶೆ ಏರಿಸಲು ರೈಲುಗಳಲ್ಲಿ ಡ್ರಗ್ ಸಪ್ಲೈ ಮಾಡಲಾಗುತ್ತಿತ್ತು. ಆದರೆ ಖಚಿತ ಮಾಹಿತಿ ಮೇರೆಗೆ ರೈಲ್ವೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ಹತ್ತು ದಿನಗಳಿಂದ ಕಾರ್ಯಾಚರಣೆ ನಡೆಸಿರುವ ರೈಲ್ವೆ ಪೊಲೀಸರು ಐದು ಪ್ರಕರಣಗಳನ್ನು ಭೇದಿಸಿ ಒಟ್ಟು 7 ಮಂದಿಯನ್ನು ಬಂಧಿಸಿದ್ದಾರೆ.

ಒಡಿಸ್ಸಾ ಮೂಲದ ನಿತ್ಯಾನಾನದ್ ದಾಸ್, ನಿಕೇಶ್ ರಾಣಾ, ಜಲಂಧರ್ ಕನ್ಹರ್, ಬೈಕುಂಟಾ ಕನ್ಹರ್, ಸಾಗರ್ ಕನ್ಹರ್, ತ್ರಿಪುರಾ ಮೂಲದ ರಾಜೇಶ್ ದಾಸ್‌ ಹಾಗೂ ಬಿಹಾರ ಮೂಲದ ಅಮರ್‌ಜಿತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.

ಈ ಆರೋಪಿಗಳು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಗಾಂಜಾವನ್ನು ರೈಲುಗಳ ಮೂಲಕ ಸಾಗಾಟ ಮಾಡುತ್ತಿದ್ದರು. ಮುಖ್ಯವಾಗಿ ಒಡಿಸ್ಸಾ, ಬಿಹಾರ, ಪಶ್ಚಿಮ ಬಂಗಾಳದಿಂದ ಬರುವ ರೈಲುಗಳ ಮೂಲಕ ಗಾಂಜಾ ಹಾಗೂ ವಿವಿಧ ಮಾದರಿಯ ಡ್ರಗ್ಸ್‌ಗಳನ್ನು ಸರಬರಾಜು ಮಾಡುತ್ತಿದ್ದರು. ಹೀಗೆ ನಗರಕ್ಕೆ ಬಂದ ಡ್ರಗ್ಸ್‌ಗಳನ್ನು ನಿತ್ಯಾನಂದ ಮತ್ತು ರಾಜೇಶ್ ಎಂಬುವವರು ಸ್ವಿಗ್ಗಿ, ಜೋಮೋಟೊ ಮೂಲಕ ಗ್ರಾಹಕರಿಗೆ ಸಪ್ಲೇ ಮಾಡುತ್ತಿದ್ದರು.

ಸದ್ಯ ಬೈಯ್ಯಪ್ಪನಹಳ್ಳಿ, ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಐದು ಕೇಸ್ ದಾಖಲಿಸಿಕೊಂಡಿದ್ದು, ಆರೋಪಿಗಳಿಂದ 60 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಅಸ್ಥಿಪಂಜರ ಪತ್ತೆ ಕೇಸ್‌; ಪಾಳು ಬಿದ್ದ ಮನೆಯಲ್ಲಿ ಮೊದಲು ಬುರುಡೆ ನೋಡಿದ್ದೇ ವಿದ್ಯಾರ್ಥಿಗಳು

ಹೊಸ ವರ್ಷಕ್ಕೆ ನಶೆಯೇರಿಸಲು ರೆಡಿ; 21 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ!

ಬೆಂಗಳೂರು: ರಾಜಧಾನಿಯಲ್ಲಿ ಹೊಸ ವರ್ಷಾಚರಣೆ (New Year in Bangalore) ಎಂದರೆ ಮದ್ಯ ಮತ್ತು ಡ್ರಗ್ಸ್‌ ನಶೆಯಲ್ಲಿ (drugs menace) ತೇಲಾಡುವುದು ಎಂಬ ಭಾವನೆ ಹೆಚ್ಚಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಡಿಸೆಂಬರ್‌ 31ರ ರಾತ್ರಿ ಕಾಣಿಸುವ ಚಿತ್ರಗಳು ಇದನ್ನು ಸಾರಿ ಹೇಳುತ್ತಿವೆ. ಮೈಮೇಲೆ ಪ್ರಜ್ಞೆ ಇಲ್ಲದೆ ಬಿದ್ದುಕೊಂಡ ಹುಡುಗಿಯರು, ಏನು ಮಾಡಿದರೂ ಅರಿವೇ ಆಗದ ಸ್ಥಿತಿಯಲ್ಲಿ ಬಿದ್ದುಕೊಂಡವರು, ಕಂಡ ಕಂಡವರ ಜತೆ ಜಗಳಕ್ಕೆ ಇಳಿಯುವ ಹುಡುಗರು.. ನಶೆಯ ಮತ್ತಿನಲ್ಲಿ ಕಳೆದು ಹೋದವರು ದೊಡ್ಡ ಸಂಖ್ಯೆಯಲ್ಲಿ ಕಾಣುತ್ತಾರೆ. ಇಂಥವರ ನಶೆಯ ಆಸೆಯನ್ನು ಈಡೇರಿಸಲು ಡ್ರಗ್‌ ಪೆಡ್ಲರ್‌ಗಳು ಕೂಡಾ ರೆಡಿಯಾಗಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ನಡೆದ ದಾಳಿಯೊಂದರಲ್ಲಿ 21 ಕೋಟಿ ಮೌಲ್ಯದ ಡ್ರಗ್ಸ್‌ ವಶವಾಗಿರುವುದು (Drugs Siezed) ಇದನ್ನೆಲ್ಲ ಸಾರಿ ಹೇಳುತ್ತಿದೆ.

ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿ ರಾಮಮೂರ್ತಿ ನಗರದ ಮನೆಗೆ ದಾಳಿ ಮಾಡಿ ಆಫ್ರಿಕನ್ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ. ಆತ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಶೇಖರಣೆ ಮಾಡಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.

ದಾಳಿ ಮಾಡಿದಾಗ ಅಲ್ಲಿ 21 ಕೋಟಿ ಬೆಲೆಬಾಳುವ 16 ಕೆಜಿ ಎಂಡಿಎಂಎ ಮತ್ತು 500 ಗ್ರಾಂ ಕೊಕೇನ್ ‌ ಪತ್ತೆಯಾಗಿದೆ. ವಶವಾದ ಎಂಡಿಎಂಎ ಮೌಲ್ಯ 16 ಕೋಟಿ ರೂ.! ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ ಯಾರಿಗೆಲ್ಲ ಇದನ್ನು ಸಪ್ಲೈ ಮಾಡುತ್ತಿದ್ದ ಎಂಬುದರ ಮಾಹಿತಿಯನ್ನು ಕೂಡಾ ಸಂಗ್ರಹಿಸುತ್ತಿದ್ದಾರೆ. ಆರೋಪಿಯು ಸೋಪ್ ಬಾಕ್ಸ್ , ಚಾಕ್ಲೇಟ್ ಬಾಕ್ಸ್ ನಲ್ಲಿಟ್ಟು ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಎನ್ನುವುದು ಪ್ರಾಥಮಿಕವಾಗಿ ಸಿಕ್ಕಿರುವ ಮಾಹಿತಿ. ಆತ ವರ್ಷವಿಡೀ ಡ್ರಗ್ಸ್‌ ದಂಧೆ ನಡೆಸುತ್ತಾನೆ. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತರಿಸಿಕೊಳ್ಳಲು ಕಾರಣ ಹೊಸ ವರ್ಷಾಚರಣೆ.

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ನಡೆಯುವ ಗುಂಡು ಪಾರ್ಟಿ, ರೇವ್‌ ಪಾರ್ಟಿಗಳಿಗೆ ಇವುಗಳನ್ನು ಮಾರಾಟ ಮಾಡಲು ಅವರು ಬೇಡಿಕೆಯನ್ನು ಪಡೆದಿದ್ದ. ಅಂದ ಹಾಗೆ ಬೆಂಗಳೂರು ಪೊಲೀಸ್ ಇತಿಹಾಸದಲ್ಲಿಯೇ ಒಂದೇ ದಾಳಿಯಲ್ಲಿ ಸಿಕ್ಕಿದ ಅತಿ ದೊಡ್ಡ ಮೊತ್ತದ ಡ್ರಗ್ಸ್‌ ಇದು ಎಂದು ತಿಳಿದುಬಂದಿದೆ.

ಇದೊಂದು ದೊಡ್ಡ ಜಾಲ

ಈ ಆಫ್ರಿಕನ್‌ ಪ್ರಜೆಗೆ ದೇಶ ಮತ್ತು ವಿದೇಶಗಳಲ್ಲಿ ಹಲವಾರು ಸಂಪರ್ಕ ಕೊಂಡಿಗಳಿವೆ. ಆತ ವಿದೇಶಿ ಮೂಲದ ವ್ಯಕ್ತಿಗಳಿಂದ ಸೀರೆ , ಚೂಡಿದಾರ, ಬಟ್ಟೆಗಳಲ್ಲಿ ಡ್ರಗ್ಸ್ ತರಿಸಿಕೊಳ್ತಿದ್ದ ಎನ್ನಲಾಗಿದೆ. ದೆಹಲಿ,‌ ಮುಂಬೈ ಹಾಗು ಇತರ ರಾಜ್ಯಗಳಿಂದಲೂ ವಿದೇಶಿ ಪ್ರಜೆಗಳ ಮೂಲಕವೇ ಡ್ರಗ್ಸ್‌ ತರಿಸಿಕೊಳ್ಳುತ್ತಿದ್ದ. ಅದನ್ನು ಬೆಂಗಳೂರಿನ ನಾನಾ ಕಡೆಗಳಿಗೆ ಹಂಚುತ್ತಿದ್ದ. ಆತನಿಗೆ ಬೇಡಿಕೆ ಇಡುವ ಮತ್ತು ಅದನ್ನು ಬೇಕಾದವರಿಗೆ ತಲುಪಿಸುವ ಒಂದು ದೊಡ್ಡ ಗ್ಯಾಂಗ್‌ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version