ಗದಗ: ಮೂರು ದಿನಗಳ ಹಸುಗೂಸನ್ನು ರಟ್ಟಿನ ಡಬ್ಬದಲ್ಲಿ ಇಟ್ಟು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದ ಘಟನೆ (Newborn baby found) ಗದಗ ಎಪಿಎಂಸಿ ಆವರಣದಲ್ಲಿ ನಡೆದಿದೆ.
ಇದು ಗಂಡು ಮಗುವಾಗಿದ್ದು, ಬಟ್ಟೆಯಲ್ಲಿ ಸುತ್ತಿ ಡಬ್ಬದಲ್ಲಿ ಇಟ್ಟು ಮೇಲ್ಭಾಗದಲ್ಲಿ ಬೇವಿನ ಸೊಪ್ಪು ಹೊದಿಸಿ ಶಿಶು ಮುಚ್ಚಿಡಲಾಗಿತ್ತು. ಮಗು ಅಳುವುದನ್ನ ಕೇಳಿದ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ನಂತರ ಬಡಾವಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿದರು.
ಚಿಕ್ಕ ಮಕ್ಕಳ ತುರ್ತು ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಘಟಕ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸ್ವಲ್ಪ ವಿಳಂಬವಾಗಿದ್ದರೆ, ಮುದ್ದಾದ ಗಂಡು ನವಜಾತ ಶಿಶು ನಾಯಿ, ಹಂದಿಗಳ ಪಾಲಾಗುತ್ತಿತ್ತು. ಹೆತ್ತು ಬೀದಿಯಲ್ಲಿ ಬಿಟ್ಟುಹೋದ ಪಾಪಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಆದರೆ, ಇದು ಯಾರ ಮಗು, ಬಿಟ್ಟು ಹೋದವರು ಯಾರು ಎನ್ನುವುದು ಇನ್ನೂ ತಿಳಿದುಬಂದಿಲ್ಲ.
ರೈಲಿನಡಿ ಸಿಲುಕಿ ವ್ಯಕ್ತಿ ಆತ್ಮಹತ್ಯೆ
ಯಾದಗಿರಿ: ನಗರದ ಪದವಿ ಕಾಲೇಜು ಹಿಂಭಾಗದಲ್ಲಿ ಯುವಕನೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಾದಗಿರಿಯ ಬಸವೇಶ್ವರ ನಗರ ನಿವಾಸಿ ಯುವರಾಜ…(೨೮) ಮೃತಪಟ್ಟವರು. ಸ್ಥಳಕ್ಕೆ ರೈಲ್ವೆ ಸುರಕ್ಷಾದಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | child found | ಎರಡು ದಿನದ ಮಗುವನ್ನು ಕೈಚೀಲದಲ್ಲಿ ಹಾಕಿ ಮಾರ್ಗದ ಬದಿಯಲ್ಲಿ ಬಿಟ್ಟು ಹೋದ ನಿರ್ದಯಿಗಳು!