Site icon Vistara News

Karnataka election 2023: ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ಮೂಡಿಸಿ ಗಮನ ಸೆಳೆದ ನವ ದಂಪತಿ

Karnataka election 2023 Newly married couples attract attention by creating voting awareness in marriage hall

ಕುಷ್ಟಗಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಭಾನುವಾರ ನವದಂಪತಿಗಳು ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ಸಂದೇಶ ಸಾರುವ ಮೂಲಕ ಗಮನ ಸೆಳೆದರು.

ಕುಷ್ಟಗಿಯಲ್ಲಿ ಭಾನುವಾರ ನಡೆದ ಕಡೇಕೊಪ್ಪ ಗ್ರಾಮದ ಜೀಗೇರಿ ಕುಟುಂಬದ ಮದುವೆ ಸಂಭ್ರಮದ ಸಮಾರಂಭದಲ್ಲಿ ನೂತನ ವಧು-ವರರು ಮೇ 10 ರಂದು ನಡೆಯುವ ಚುನಾವಣೆಯ ಮತದಾನ ಜಾಗೃತಿ ಮೂಡಿಸಿ ಗಮನ ಸೆಳೆದರು.

ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ

ನೂತನ ದಂಪತಿಯಾದ ನಿಂಗಪ್ಪ ಜಿಗೇರಿ- ರೇಖಾ ಹಾಗೂ ರಾಚಪ್ಪ-ನಿವೇದಿತಾ ಅವರು, “ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ’ ಎಂಬ ಬರಹವಿದ್ದ ಫಲಕಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ಇದನ್ನೂ ಓದಿ: FAME II sops : ಓಲಾ ಸೇರಿ 4 ಇ-ಸ್ಕೂಟರ್‌ ಕಂಪನಿಗಳಿಗೆ 500 ಕೋಟಿ ರೂ. ಸಬ್ಸಿಡಿ, ಗ್ರಾಹಕರಿಗೆ ಏನೇನು ಲಾಭ?

ಮದುವೆಗೆ ಬಂದ ಕುಟುಂಬದವರು, ಸಂಬಂಧಿಕರು ಸ್ನೇಹಿತರು ಈ ಮಾದರಿ ಮದುವೆಯ ಈ ಸಂದೇಶವನ್ನು ಮೆಚ್ಚಿಕೊಂಡರಲ್ಲದೆ ಮತದಾನ ಜಾಗೃತಿಯನ್ನು ಸಾಕ್ಷೀಕರಿಸಿದರು. ಮದುವೆ ಕಾರ್ಯಕ್ರಮದ ಗಡಿಬಿಡಿಯಲ್ಲಿ ಮತದಾನವನ್ನು ಮರೆಯದಂತೆ ಈ ಹೊಸ ಜೋಡಿಗಳು ಮೇ 10 ರಂದು ತಪ್ಪದೇ ಮತದಾನ ಮಾಡುವಂತೆ ಮಾಡಿರುವ ಮನವಿ ವಿಶೇಷವೆನಿಸಿದೆ.

Exit mobile version