ಹುಬ್ಬಳ್ಳಿ: ಸಿದ್ದರಾಮಯ್ಯ ಎಲ್ಲೇ ಹೋದರೂ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಘೋಷಣೆಗಳು ಮೊಳಗುತ್ತಿರುತ್ತವೆ. ಈ ನಡುವೆ ಸ್ವಾಮೀಜಿಯೊಬ್ಬರು ಮತ್ತೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದು ಬೀರಪ್ಪನ ವಾಣಿ, ಕರಿಸಿದ್ದೇಶ್ವರರ ವಾಣಿ, ಕನಕದಾನಸನ ವಾಣಿ, 2023ಕ್ಕೆ ಕಂಬಳಿ ಬೀಸ್ತದೆ, ಬಂಡಾರ ಹಾರತ್ತೆ, ಡೊಳ್ಳು ಬಾರಿಸತ್ತೆ. ಟಗರು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ (Next CM siddaramaiah) ಆಗುತ್ತಾರೆ. ಇದನ್ನು ಸೂರ್ಯ, ಚಂದ್ರ ಅಡ್ಡ ಬಂದರೂ ತಪ್ಪಿಸಕ್ಕಾಗಲ್ಲ ಎಂದು ಮನಸೂರಿನ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ಹೇಳಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕ ಜಯಂತಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಭಾಷಣ ಕರ್ನಾಟಕಕ್ಕೆ ದಿಕ್ಸೂಚಿಯಾಗಿದೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುತ್ತಾರೆ. ಇದು ದೈವವಾಣಿ ಎಂದು ಹೇಳಿದ್ದಾರೆ.
ಮತ್ತೆ ಮೊಳಗಿದ ಮುಂದಿನ ಸಿಎಂ ಸಿದ್ದರಾಮಯ್ಯ ಕೂಗು
ಕನಕ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸುವ ಮುನ್ನ ಸಿದ್ದರಾಮಯ್ಯ, ಸಂಶಿ ಗ್ರಾಮದ ಕರಿ ಸಿದ್ದೇಶ್ಚರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಅರ್ಚಕ ಕನಕಪ್ಪ ಮನೆಯಲ್ಲಿ ಉಪಹಾರ ಸೇವಿಸಿ ಹೊರಬರುವಾಗ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಅಭಿಮಾನಿಗಳು ಕೂಗಿದ್ದು ಕಂಡುಬಂತು. ಇದಕ್ಕೂ ಮೊದಲು ಗ್ರಾಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದಾಗ ಕ್ರೇನ್ ಮೂಲಕ ಬೃಹತ್ ಸೇಬು ಹಣ್ಣಿನ ಹಾರವನ್ನು ಹಾಕಿ ಕಾಂಗ್ರೆಸ್ ನಾಯಕರು ಅದ್ಧೂರಿ ಸ್ವಾಗತ ಕೋರಿದರು.
ಇದನ್ನೂ ಓದಿ | Vokkaliga Reservation | ಒಕ್ಕಲಿಗ ಮೀಸಲಾತಿ ಕುರಿತು ಶೀಘ್ರ ವರದಿ ಲಭಿಸಲಿದೆ: ಸಿಎಂ ಬೊಮ್ಮಾಯಿ