ನವದೆಹಲಿ: ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯಗಳನ್ನು ಕೈಗೊಳ್ಳುವ ಮೂಲಕ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾತಕ ಕೃತ್ಯಗಳನ್ನು ಮತ್ತಷ್ಟು ಹೆಚ್ಚಿಸಲು ಸಂಚು ರೂಪಿಸಿದ್ದ ಶಿವಮೊಗ್ಗ ಇಸ್ಲಾಮಿಕ್ ಸ್ಟೇಟ್ (IS) ಪ್ರಕರಣದ ಇಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಚಾರ್ಜ್‌ಶೀಟ್ ಸಲ್ಲಿಸಿದೆ. ಆಪಾದಿತರಿಬ್ಬರು ವಿದೇಶಿ ಹ್ಯಾಂಡ್ಲರ್‌ಗಳಿಂದ ಕ್ರಿಪ್ಟೋ ಕರೆನ್ಸಿಗಳ ಮೂಲಕ ಹಣ ಪಡೆದುಕೊಳ್ಳುತ್ತಿದ್ದರು ಎಂಬ ಸಂಗತಿಯೂ ಬಯಲಾಗಿದೆ(Shivamogga Islamic State).
2022ರ ಆಗಸ್ಟ್ 15ರಂದು ಆರೋಪಿ ಜಬೀವುಲ್ಲಾ ಮತ್ತು ಆತನ ಸಹಚರರು ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಇರಿದಿದ್ದರು. ಈ ಪ್ರಕರಣ ಕುರಿತು ಕರ್ನಾಟಕ ಪೊಲೀಸರು ತನಿಖೆ ನಡೆಸಿದ್ದರು. 2022ರ ಸೆಪ್ಟೆಂಬರ್‌ನಲ್ಲಿ ಈ ಪ್ರಕರಣವನ್ನು ಎನ್ಐಎ ತನ್ನ ಸುಪರ್ದಿಗೆ ತೆಗೆದುಕೊಂಡು ಮರು ತನಿಖೆಗೆ ಕೈಗೊಂಡು ಇದೀಗ ಚಾರ್ಜ್‌ಶೀಟ್ ಸಲ್ಲಿಸಿದೆ.
ಶಿವಮೊಗ್ಗ ಇಸ್ಲಾಮಿಕ್ ಸ್ಟೇಟ್(IS) ಪ್ರಕರಣದಲ್ಲಿ ಮಾಜ್ ಮುನೀರ್ ಅಹ್ಮದ್(23) ಹಾಗೂ ಸೈಯದ್ ಯಾಸೀನ್ ವಿರುದ್ಧ(22) ವಿರುದ್ಧ ಭಾರತೀಯ ದಂಡ ಸಂಹಿತೆಯ 120ಬಿ, 121ಎ ಅಡಿ ಕೇಸ್ ದಾಖಲಿಸಲಾಗಿದೆ. ಜತೆಗೆ, ರಾಷ್ಟ್ರೀಯ ಗೌರವಗಳ ಅವಮಾನಗಳ ತಡೆ ಕಾಯಿದೆಯಡಿಯೂ ಆರೋಪಗಳನ್ನು ಹೊರಿಸಲಾಗಿದೆ.
ಇದನ್ನೂ ಓದಿ: Terrorists punished: 11 ವರ್ಷಗಳ ಬಳಿಕ ಮೂವರು ಉಗ್ರರಿಗೆ ಜೀವಾವಧಿ ಶಿಕ್ಷೆ; ಎನ್ಐಎ ವಿಶೇಷ ಕೋರ್ಟ್ ಆದೇಶ
ಮಾಜ್ ಮ್ತತು ಸೈಯಬ್ ಇಬ್ಬರೂ ಬಿಟೆಕ್ ಪದವೀಧರರಾಗಿದ್ದಾರೆ. ಇವರಿಬ್ಬರೂ ವಿದೇಶಿ ಆನ್‌ಲೈನ್ ಹ್ಯಾಂಡ್ಲರ್‌ಗಳ ಬೋಧನೆಯೊಂದಿಗೆ ಕಟ್ಟರ್‌ಗಳಾಗಿ ಬದಲಾಗಿದ್ದರು. ಒಂದು ನಿರ್ದಿಷ್ಟ ಸಮುದಾಯದ ವ್ಯಕ್ತಿಗಳ ದಾಸ್ತಾನುಗಳು, ಮದ್ಯದ ಅಂಗಡಿಗಳು, ಹಾರ್ಡ್‌ವೇರ್ ಶಾಪ್ಸ್, ವಾಹನಗಳು ಮತ್ತು ಖಾಸಗಿ ಆಸ್ತಿಗಳು ಸೇರಿದಂತೆ ಸಾರ್ವಜನಿಕ ಆಸ್ತಿಗಳನ್ನು ಧ್ವಂಸಗೊಳಿಸುವ ಪ್ಲ್ಯಾನ್ ಮಾಡಿಕೊಂಡಿದ್ದರು. ಇವರಿಬ್ಬರೂ 25ಕ್ಕೂ ಅಧಿಕ ಬೆಂಕಿ ಹಾಗೂ ವಿಧ್ವಂಸಕ ಘಟನೆಗಳಲ್ಲಿ ಪಾಲ್ಗೊಂಡಿದ್ದಾರೆ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ.
ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಪಡೆದಿದ್ದರು
ಆಪಾದಿತರು ವಾರಹಿ ನದಿ ದಡದಲ್ಲಿ ಸ್ಫೋಟದ ಪ್ರಯೋಗ ನಡೆಸಿದ್ದರು. ಕೃತ್ಯಗಳಿಗೆ ವಿದೇಶಿ ಕೆರನ್ಸಿ ರೂಪದಲ್ಲಿ ಹಣ ಪಡೆಯುತ್ತಿದ್ದರು. ಈ ಪೈಕಿ ಮಾಝ್ ಕ್ರಿಪ್ಟೋ ಕರೆನ್ಸಿ ರೂಪದಲ್ಲಿ ಹಣದ ನೆರವು ಪಡೆದುಕೊಳ್ಳುತ್ತಿದ್ದ. ಹೀಗೆ ಆತ ಒಟ್ಟು 1.5 ಲಕ್ಷ ರೂ. ಕ್ರಿಪ್ಟೋ ಕರೆನ್ಸಿಯಲ್ಲಿ ಪಡೆದುಕೊಂಡಿದ್ದ. ಇನ್ನೊಬ್ಬ ಸ್ನೇಹಿತನ ಖಾತೆ ಮುಖಾಂತರ 62 ಸಾವಿರ ಪಡೆದಿದ್ದ ಎನ್ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.