ಯಾದಗಿರಿ: ಉಗ್ರ ಸಂಘಟನೆ ಐಎಸ್ಐಎಸ್ ಜತೆಗೆ ಸಂಪರ್ಕ ಹೊಂದಿದ ಆರೋಪದಡಿ ಯಾದಗಿರಿ ಜಿಲ್ಲೆಯ ಶಹಾಪುರ ನಗರಕ್ಕೆ ಜಾರ್ಖಂಡ್ ರಾಜ್ಯದ ರಾಂಚಿ ಮೂಲದ ಎನ್ಐಎ ತಂಡ (NIA Raid) ದಿಢೀರ್ ಭೇಟಿ ನೀಡಿದೆ. ಸಚ್ಚಿದಾನಂದ ಶರ್ಮಾ ಇನ್ಸ್ಪೆಕ್ಟರ್ ನೇತೃತ್ವದ ನಾಲ್ವರು ಅಧಿಕಾರಿಗಳನ್ನೊಳಗೊಂಡ ಎನ್ಐಎ ತಂಡ ಭೇಟಿ ನೀಡಿದೆ.
ಉಗ್ರನ ಸಂಪರ್ಕ ಹೊಂದಿದ ಆರೋಪದ ಮೇಲೆ ಶಹಾಪುರ ನಗರದ ನಿವಾಸಿ ಖಾಲೀದ್ ಅಹ್ಮದ್ (22) ಎಂಬಾತ ಮನೆಯಲ್ಲಿ ವಿಚಾರಣೆ ನಡೆಸಿದೆ. ಕಳೆದ ಜುಲೈ ತಿಂಗಳಲ್ಲಿ ರಾಂಚಿಯಲ್ಲಿ ಐಎಸ್ಐಎಸ್ ಸಂಘಟನೆಯ ಉಗ್ರ ಫೈಯಾಜ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಬಂಧಿತ ಫೈಯಾಜ್ ಜತೆ ಯಾದಗಿರಿಯ ಶಹಾಪುರದ ಖಾಲೀದ್ ಅಹ್ಮದ್ ಇನ್ಸ್ಟಾಗ್ರಾಮ್‌ನಲ್ಲಿ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಹಿನ್ನೆಲೆ ನಸುಕಿನ ಜಾವ ಶಹಾಪುರದ ಅಬ್ದುಲ್ ಖಾಲೀದ್ ನಿವಾಸದ ಮೇಲೆ ದಾಳಿ ಮಾಡಿ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: Anganwadi Workers : ಶಿಶುಪಾಲನೆ ವಿರುದ್ಧ ಸಿಡಿದ ಅಂಗನವಾಡಿ ಕಾರ್ಯಕರ್ತೆಯರು; ನಾಳೆ ಪ್ರತಿಭಟನೆ
ಎನ್‌ಐಎ ತಂಡ 2ನೇ ಬಾರಿ ಶಹಾಪುರಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, 4 ಗಂಟೆಗಳ ಕಾಲ ಉಗ್ರ ಸಂಪರ್ಕಿತ ಖಾಲೀದ್ ಅಹ್ಮದ್ ಮನೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಅಬ್ದುಲ್ ಖಾಲೀದ್‌ನ ತೀವ್ರ ವಿಚಾರಣೆ ನಡೆಸಿರುವ ಎನ್‌ಎಐ ತಂಡ ಸೆ. 20 ರಂದು ಮತ್ತೆ ರಾಂಚಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಜತೆಗೆ ಎನ್‌ಇಐ ತಂಡದವರು ಅಬ್ದುಲ್ ಖಾಲೀದ್‌ನ ಎರಡು ಮೊಬೈಲ್ ಜಪ್ತಿ ಮಾಡಿ, ಆಧಾರ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್‌ನ ಜೆರಾಕ್ಸ್ ಪ್ರತಿ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ