Site icon Vistara News

NIMBUS app: ಬಿಎಂಟಿಸಿ ಬಸ್ಸುಗಳ ಓಡಾಟದ ಮಾಹಿತಿ ನೀಡುವ ಆ್ಯಪ್‌ ಈ ವಾರ ಲಭ್ಯ

NIMBUS app

NIMBUS app

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಇದೇ ತಿಂಗಳಲ್ಲಿ ತನ್ನ ಬಹು ನಿರೀಕ್ಷೆಯ NIMBUS ಆ್ಯಪ್‌ ಅನ್ನು ಲೋಕಾರ್ಪಣೆ ಮಾಡಲಿದೆ ಎಂದು ಬಿಎಂಟಿಸಿ ಮಾಹಿತಿ ಮತ್ತು ತಂತ್ರಜ್ಞಾನ ನಿರ್ದೇಶಕ ಸೂರ್ಯ ಸೇನ್‌ ತಿಳಿಸಿದ್ದಾರೆ.

ಐಒಎಸ್‌ ಹಾಗೂ ಆಂಡ್ರಾಯ್ಡ್‌ ಗ್ಯಾಜೆಟ್‌ಗಳಲ್ಲಿ ಕೆಲಸ ಮಾಡಬಹುದಾದ ಆ್ಯಪ್‌ ಅನ್ನು ಬಿಎಂಟಿಸಿ ಈ ವಾರದಲ್ಲಿ ಬಿಡುಗಡೆ ಮಾಡಲಿದೆ. ಈ ಹಿಂದೆ ಹಲವಾರು ಬಾರಿ ಆ್ಯಪ್‌ ಬಿಡುಗಡೆಗೆ ಮುಂದಾಗಿದ್ದ ಸಂಸ್ಥೆ, ತಾಂತ್ರಿಕ ತೊಡಕುಗಳಿಂದಾಗಿ ಅದನ್ನು ಮುಂದೂಡಿತ್ತು. ಮೊದಲು ಡಿಸೆಂಬರ್‌ 13ರಂದು, ನಂತರ 23ರಂದು ನಿಗದಿಯಾಗಿ ಬಳಿಕ ಮುಂದೆ ಹೋಗಿತ್ತು.

ಸುಮಾರು 5000 ಬಿಎಂಟಿಸಿ ಬಸ್ಸುಗಳು ಓಡಾಟದ ಮಾಹಿತಿ ಇದರಲ್ಲಿ ಸಿಗಲಿದೆ. NIMBUS ಆ್ಯಪ್‌ ಮೂಲಕ ಬಿಎಂಟಿಸಿ ಬಸ್ಸುಗಳು ರಿಯಲ್‌ ಟೈಮ್‌ ಟ್ರ್ಯಾಕಿಂಗ್‌ ಮಾಡಬಹುದಾಗಿದೆ. ಹಾಗೆಯೇ ಇದರಲ್ಲಿ SOS ಅಲರ್ಟ್‌ ವ್ಯವಸ್ಥೆಯೂ ಇದೆ.

ಇದೊಂದು ಸಂಕೀರ್ಣ ಆ್ಯಪ್‌ ಆಗಿದ್ದು, ಅನೇಕ ಬಗ್‌ (ತಾಂತ್ರಿಕ ತೊಡಕು)ಗಳು ಅದರಲ್ಲಿವೆ. ಅವುಗಳನ್ನು ಪರಿಹರಿಸಬೇಕಿದೆ. ಈ ಆ್ಯಪ್‌ನಲ್ಲಿ ಬಸ್‌ಗಳ ಓಡಾಟದ ಪ್ಲಾನಿಂಗ್‌, ಶೆಡ್ಯೂಲ್‌, ಡಿಪೋ ನಿರ್ವಹಣೆ, ಮತ್ತಿತರ ಫೀಚರ್‌ಗಳು ಇರಲಿವೆ. ಬಸ್‌ ಸರ್ವಿಸ್‌ಗಳು ಹಾಗೂ ಪ್ರಯಾಣಿಕರ ನಡುವಿನ ಮಾಹಿತಿ ಕೊರತೆಯನ್ನು ಈ ಆ್ಯಪ್‌ ತುಂಬಲಿದೆ.

ಸದ್ಯ 30-40 ಬಳಕೆದಾರರು ಈ ಆ್ಯಪ್‌ನ ಪೈಲಟ್‌ ಬಳಕೆಯನ್ನು ಪರಿಶೀಲಿಸುತ್ತಿದ್ದಾರೆ. ಇಂಗ್ಲಿಷ್‌ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಇದು ಸಿಗಲಿದೆ.

ಇದನ್ನೂ ಓದಿ : BMTC Vajra ticket price hike | ಬಿಎಂಟಿಸಿ ವಜ್ರ ಬಸ್‌ ಪ್ರಯಾಣದ ಟಿಕೆಟ್‌ ದರ ಏರಿಕೆ

Exit mobile version