Site icon Vistara News

Nirani Vs Yathnal | ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡಲ್ಲ: ಕಣ್ಣೀರು ಹಾಕುತ್ತಲೇ ಯತ್ನಾಳ್‌ ವಿರುದ್ಧ ಕಿಡಿಕಾರಿದ ನಿರಾಣಿ

Minister murugesh nirani hopes gujarat results will affect karnataka politics

ಬೆಂಗಳೂರು: ವಿಜಯಪುರದಲ್ಲಿ ಒಬ್ಬರಿದ್ದಾರೆ. ಎಲುಬಿಲ್ಲದ ನಾಲಿಗೆಯಿಂದ ಏನೇನೋ ಮಾತನಾಡುತ್ತಿದ್ದಾರೆ. ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡುವುದಿಲ್ಲ- ಹೀಗೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ವಿರುದ್ಧ ಕೆಂಡ ಕಾರಿದ್ದಾರೆ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ (Nirani Vs Yathnal).

ಶನಿವಾರ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಅವರ ಜತೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಣ್ಣೀರು ಹಾಕುತ್ತಲೇ ತಮ್ಮ ನೋವು ಹಂಚಿಕೊಂಡರು.

ಶಾಸಕ ಬಸವನ ಗೌಡ ಪಾಟೀಲ್‌ ಯತ್ನಾಳ್‌ ಅವರು ಇತ್ತೀಚೆಗೆ ಮುರುಗೇಶ್‌ ನಿರಾಣಿ ಅವರನ್ನು ಪಿಂಪ್‌ ಎಂದು ಕರೆದಿದ್ದರು. ಇದು ನಿರಾಣಿ ಅವರಿಗೆ ಭಾರಿ ನೋವು ಉಂಟುಮಾಡಿತ್ತು. ಅದನ್ನೇ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿ ಕಣ್ಣೀರು ಹಾಕಿದರು. ಜತೆಗೆ ತೀವ್ರವಾಗಿ ವಾಗ್ದಾಳಿ ನಡೆಸಿದರು.

ʻʻವಿಜಯಪುರದವರೊಬ್ಬರು ಎಲುಬಿಲ್ಲದ ನಾಲಿಗೆಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ. ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡಲ್ಲ. ನಾನು ಪಿಂಪ್‌ ಕೆಲಸ ಮಾಡುತ್ತಿದ್ದೇನೆ ಎಂದೆಲ್ಲ ಹೇಳಿದ್ದಾರೆ. ಆ ಸಂಸ್ಕೃತಿಯಲ್ಲಿ ಇದ್ದವರು ಮಾತ್ರ ಆ ಭಾಷೆಯಲ್ಲಿ ಮಾತನಾಡುತ್ತಾರೆ. ಒಳ್ಳೆಯ ಮನೆತನವಿದ್ದವರು ಯಾರೂ ಈ ರೀತಿ ಮಾತನಾಡುವುದಿಲ್ಲʼʼ ಎಂದರು ನಿರಾಣಿ.

ಆಗದಿದ್ದರೆ ಪಕ್ಷ ಬಿಟ್ಟು ಹೋಗಲಿ ಎಂದ ನಿರಾಣಿ
ʻʻನಾಲಿಗೆ ಇದೆ ಎಂದು ಬೇಕಾಬಿಟ್ಟಿ ಮಾತನಾಡಿದ್ರೆ ನಾಲಿಗೆ ಕತ್ತರಿಸುವ ಕೆಲಸವಾಗುತ್ತದೆ. ಇಲ್ಲಸಲ್ಲದ ಮಾತನಾಡಬಾರದು. ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಪಕ್ಷದಲ್ಲಿ ಇರುವುದಕ್ಕೆ ಆಗಲ್ಲ ಅಂದ್ರೆ ರಾಜೀನಾಮೆ ಕೊಟ್ಡು ಹೊರಗೆ ಹೋಗಲಿʼʼ ಎಂದು ಸವಾಲು ಹಾಕಿದರು.

ಸಿಸಿ ಪಾಟೀಲ್‌ ಮಾತನಾಡಿ, ʻಯತ್ನಾಳ್ ಬಿಜೆಪಿಯ ಹಿರಿಯ ನಾಯಕರು. ಸರ್ಕಾರದ ವಿರುದ್ಧ ಈ ರೀತಿಯ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲʼʼ ಎಂದರು. ಅದೇ ಹೊತ್ತಿಗೆ, ʻʻಯತ್ನಾಳ್ ಮೇಲೆ ಭಯ ಅಂತ ಏನಿಲ್ಲ. ಅವರು ಹಿರಿಯರು ಅಂತ ನಾವು ಸುಮ್ಮನಿದ್ದೇವೆʼʼ ಎಂದರು.

ಇದನ್ನೂ ಓದಿ | Panchamasali Reservation | ಪದೇಪದೆ ಗಡುವು ನೀಡುವ ಸ್ವಾಮೀಜಿ, ಯತ್ನಾಳ್‌ ವಿರುದ್ಧ ಸಿ.ಸಿ ಪಾಟೀಲ್‌, ನಿರಾಣಿ ಆಕ್ರೋಶ

Exit mobile version