Site icon Vistara News

Swami Nityananda | ಲಂಕಾಗೆ ವೈದ್ಯಕೀಯ ನೆರವು ನೀಡುವಂತೆ ಮನವಿ, ನಿತ್ಯಾನಂದ ಆರೋಗ್ಯ ಸ್ಥಿತಿ ಗಂಭೀರ?

Nityanand

ನವದೆಹಲಿ: ಸ್ವಯಂಘೋಷಿತ ದೇವಮಾನವ, ದೇಶವನ್ನೇ ತೊರೆದು ಈಕ್ವೆಡಾರ್‌ನ ದ್ವೀಪದಲ್ಲಿ ನೆಲೆಸಿರುವ, ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದ (Swami Nityananda) ಆರೋಗ್ಯ ಸ್ಥಿತಿಯಲ್ಲಿ ತೀವ್ರ ಏರುಪೇರಾಗಿದೆ ಎಂದು ತಿಳಿದುಬಂದಿದೆ. ಅದರಲ್ಲೂ, “ನನಗೆ ತುರ್ತು ವೈದ್ಯಕೀಯ ನೆರವು ನೀಡಿ” ಎಂದು ಶ್ರೀಲಂಕಾ ಸರ್ಕಾರಕ್ಕೆ ಮನವಿ ಮಾಡಿರುವ ಕಾರಣ ಅವರು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.

ಶ್ರೀಲಂಕಾ ಅಧ್ಯಕ್ಷರಿಗೆ ಆಗಸ್ಟ್‌ ೭ರಂದೇ ನಿತ್ಯಾನಂದ ಪತ್ರ ಬರೆದಿದ್ದಾರೆ. “ಆರೋಗ್ಯದ ತುರ್ತು ಪರಿಸ್ಥಿತಿ ಎದುರಾದ ಕಾರಣ ವೈದ್ಯಕೀಯ ನೆರವು ನೀಡಬೇಕು ಹಾಗೂ ರಾಜಾಶ್ರಯ ನೀಡಬೇಕು” ಎಂಬುದಾಗಿ ನಿತ್ಯಾನಂದ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಲಂಕಾ ಸರ್ಕಾರದ ಮೂಲಗಳು ದೃಢಪಡಿಸಿವೆ. ಹಾಗಾಗಿ, ನಿತ್ಯಾನಂದ ಅವರು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ನಿತ್ಯಾನಂದ, ಈಕ್ವೆಡಾರ್‌ನಲ್ಲಿ ದ್ವೀಪವೊಂದನ್ನು ಖರೀದಿಸಿ, ಅಲ್ಲಿಯೇ “ಕೈಲಾಸ” ಎಂಬ ದೇಶ ನಿರ್ಮಿಸಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ನಿತ್ಯಾನಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಈ ಕುರಿತು ಫೇಸ್‌ಬುಕ್‌ನಲ್ಲಿ ಸ್ಪಷ್ಟಪಡಿಸಿದ್ದ ಅವರು, “ನಾನು ಧ್ಯಾನದಲ್ಲಿ ಸಮಾಧಿ ಸ್ಥಿತಿ ತಲುಪಿದ್ದೇನೆ” ಎಂದಿದ್ದರು.

ಇದನ್ನೂ ಓದಿ | Nityanand Swamy | ನಿತ್ಯಾನಂದ ಸ್ವಾಮಿಯನ್ನು ಮದುವೆ ಆಗುವ ಆಸೆಯಂತೆ ಈ ನಟಿಗೆ!

Exit mobile version