Site icon Vistara News

NMMS Scholarship: ಎನ್‌ಎಂಎಂಎಸ್‌ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ; ಕೊನೆಯ ದಿನಾಂಕ ಯಾವಾಗ, ಅರ್ಜಿ ಸಲ್ಲಿಕೆ ಹೇಗೆ?

NMMS scholarship

ಬೆಂಗಳೂರು: 2024-25ನೇ ಶೈಕ್ಷಣಿಕ ಸಾಲಿನ ಎನ್‌ಎಂಎಂಎಸ್‌ (NMMS) ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP) ತೆರೆಯಲಾಗಿದೆ. ಅರ್ಜಿ ಸಲ್ಲಿಸಲು ಹಾಗೂ ನವೀಕರಿಸಲು ಆಗಸ್ಟ್‌ 31 ಕೊನೆಯ ದಿನಾಂಕವಾಗಿದ್ದು, ಅರ್ಹ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ತಿಳಿಸಿದೆ.

NMMS ವಿದ್ಯಾರ್ಥಿ ವೇತನಕ್ಕಾಗಿ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್‌ನಲ್ಲಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನಂತೆ ವೇಳಾಪಟ್ಟಿ ನಿಗದಿ ಪಡಿಸಲಾಗಿದೆ.

ಕಾರ್ಯ ಚಟುವಟಿಕೆಯ ವಿವರ

ಪೋರ್ಟಲ್ ಆರಂಭ: ಜೂನ್‌ 30
ಅರ್ಜಿ ಸಲ್ಲಿಸಲು/ನವೀಕರಿಸಲು ಅಂತಿಮ ದಿನಾಂಕ: ಆಗಸ್ಟ್‌ 31
ಶಾಲಾ/ ಕಾಲೇಜು ಹಂತದಲ್ಲಿ INOಗಳಿಂದ ಅರ್ಜಿ ಪರಿಶೀಲನೆಗೆ ಅಂತಿಮ ದಿನಾಂಕ: ಸೆಪ್ಟೆಂಬರ್‌ 15
ಜಿಲ್ಲಾ ಹಂತದಲ್ಲಿ DNOಗಳಿಂದ ಅರ್ಜಿ ಪರಿಶೀಲನೆಗೆ ಅಂತಿಮ ದಿನಾಂಕ: ಸೆಪ್ಟೆಂಬರ್‌ 30

ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಪ್ರಮುಖ ಅಂಶಗಳು

ಅ) ಆಧಾ‌ರ್ ಸಂಖ್ಯೆ ಇರುವ ವಿದ್ಯಾರ್ಥಿಗಳು OTR ಪಡೆಯಲು ಅಗತ್ಯ ದಾಖಲೆಗಳು

ಆ) ಆಧಾ‌ರ್ ಸಂಖ್ಯೆ ಇಲ್ಲದೇ ಇರುವ ವಿದ್ಯಾರ್ಥಿಗಳು OTR ಪಡೆಯಲು ಅಗತ್ಯವಿರುವ ದಾಖಲೆಗಳು

ವಿಶೇಷ ಸೂಚನೆ: ಪೋಷಕರ ಆಧಾರ್ ಸಂಖ್ಯೆ ನೀಡಿದ್ದರೂ ಕೂಡ ಉಳಿದ ಎಲ್ಲಾ ಮಾಹಿತಿಗಳು ಹಾಗೂ ಭಾವಚಿತ್ರ ವಿದ್ಯಾರ್ಥಿಯದ್ದೇ ಆಗಿರಬೇಕು. ವಿದ್ಯಾರ್ಥಿ ವೇತನವನ್ನು ಪಡೆಯಲು, ಕಾಲ ಮಿತಿಯೊಳಗೆ ವಿದ್ಯಾರ್ಥಿಯು ತನ್ನ ಆಧಾರ್ ಸಂಖ್ಯೆಯನ್ನು update ಮಾಡಿಸಬೇಕು.

ಇ) OTR (One Time Registration) ಸಂಖ್ಯೆ ಪಡೆದ ವಿದ್ಯಾರ್ಥಿಗಳಿಗೆ ಸೂಚನೆಗಳು

ಈ) ರೆಫೆರೆನ್ಸ್‌ ಸಂಖ್ಯೆ ಪಡೆದಿರುವ ವಿದ್ಯಾರ್ಥಿಗಳು OTR ಪಡೆಯಲು ಅನುಸರಿಸಬೇಕಾದ ಕ್ರಮಗಳು (ರೆಫರನ್ಸ್ ಸಂಖ್ಯೆ ಉದಾ: R23-003101555)

(Link: https://play.google.com/store/apps/details?id=in.gov.uidai.facerd

(link: https://play.google.com/store/apps/details?id=in.gov.scholarships.nspotr&pli=1)

ಉ) App ಗಳ ಮೂಲಕ OTR ಪಡೆಯುವ ಪ್ರಕ್ರಿಯೆ

ಊ) Reference ID ಪಡೆಯದೇ ಇರುವ Fresh ವಿದ್ಯಾರ್ಥಿಗಳು ವಹಿಸಬೇಕಾದ ಕ್ರಮಗಳು

ಸುತ್ತೋಲೆಯ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಡಯಟ್ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು (ಆಡಳಿತ)ರವರು, ತಮ್ಮ ವ್ಯಾಪ್ತಿಯ ಶಾಲಾ ಮುಖ್ಯೋಪಾಧ್ಯಾಯರಿಗೆ ಹಾಗೂ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರುಗಳಿಗೆ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಇವರ ಮುಖಾಂತರ ಮಾಹಿತಿ ನೀಡಿ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ National Scholarship Portal ಮೂಲಕ ಸಲ್ಲಿಸಲು ಸೂಕ್ತ ಕ್ರಮವಹಿಸಿ, ಎಲ್ಲಾ ಫಲಾನುಭವಿಗಳು ವಿದ್ಯಾರ್ಥಿವೇತನವನ್ನು ಪಡೆಯಲು ಕ್ರಮವಹಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸೂಚಿಸಿದೆ.

Exit mobile version