ರಾಯಚೂರು: ರಾಜ್ಯಕ್ಕೆ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ(Bharat Jodo) ಪ್ರವೇಶ ಮಾಡಿದಾಗಿನಿಂದ ಪಾದಯಾತ್ರೆಯಲ್ಲಿ ಎಲ್ಲೂ ಕಾಣಿಸಿಕೊಂಡಿರದಿದ್ದ ನಟಿ ರಮ್ಯಾ, ಶನಿವಾರ ರಾಯಚೂರಿನಲ್ಲಿ ದಿಢೀರನೆ ಪ್ರತ್ಯಕ್ಷರಾಗಿ ಪಕ್ಷದ ನಾಯಕರಲ್ಲಿ ಅಚ್ಚರಿ ಮೂಡಿಸಿ, ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ್ದರು.
ಆದರೆ, ಅದಾದ ನಂತರ ಏರ್ಪಡಿಸಿದ್ದ ಕಾರ್ನರ್ ಮೀಟಿಂಗ್‌ನಲ್ಲಿ ವೇದಿಕೆ ಮೇಲೆ ಅವರಿಗೆ ಕೂರಲು ಅವಕಾಶ ಸಿಗದ ಕಾರಣ ಗರಂ ಆಗಿ ಹೊರನಡೆದಿರುವುದು ಕಂಡುಬಂದಿದೆ.
ರಾಯಚೂರಿನ ಬಸವೇಶ್ವರ ವೃತ್ತದಲ್ಲಿ ಕಾರ್ನರ್ ಮೀಟಿಂಗ್ ಏರ್ಪಡಿಸಲಾಗಿತ್ತು. ಈ ವೇಳೆ ರಮ್ಯಾ ವೇದಿಕೆ ಹತ್ತಲು ಮುಂದಾದಾಗ ವೇದಿಕೆಗೆ ಹೋಗಲು ಭದ್ರತಾ ಸಿಬ್ಬಂದಿ ಅವಕಾಶ ನೀಡಿಲ್ಲ. ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ನಟಿ ಹೆಸರು ಇಲ್ಲದ ಕಾರಣ ಅವರಿಗೆ ವೇದಿಕೆ ಹತ್ತಲು ಸಿಬ್ಬಂದಿ ನಿರಾಕರಿಸಿದ್ದಾರೆ.
ಹೀಗಾಗಿ ಕೆಲಕಾಲ ಭದ್ರತಾ ಸಿಬ್ಬಂದಿ ಹಾಗೂ ಮುಖಂಡರ ಜತೆ ವಾಗ್ವಾದ ನಡೆಸಿ, ಸ್ಟೇಜ್ ಬಳಿ ಓಡಾಡಿ ನಂತರ ಅಲ್ಲಿಂದ ಕಾರಣ ನಿರ್ಗಮಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Bharat Jodo | ರಾಹುಲ್ ಪಾದಯಾತ್ರೆಯಲ್ಲಿ ರಮ್ಯಾ ಅಚ್ಚರಿಯ ಎಂಟ್ರಿ, ರಾಜ್ಯ ಕಾಂಗ್ರೆಸ್ ನಾಯಕರು ತಬ್ಬಿಬ್ಬು!