ರಾಯಚೂರು: ನೂರ್ ಜಹಾರ್ ಖಾನಂ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಹುದ್ದೆಗೇರಿರುವುದು ನಿಯಮ ಬಾಹಿರವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಈ ಮೂಲಕ ಅವರ ನೇಮಕವನ್ನು ರದ್ದುಗೊಳಿಸಿರುವುದಾಗಿ ಕಲಬುರಗಿಯ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶಿಸಿದೆ.
ಜಿಲ್ಲಾ ಪಂಚಾಯತ್ ಸಿಇಒ ಹುದ್ದೆ ಐಎಎಸ್ ಕೇಡರ್ ಹುದ್ದೆಯಾಗಿದೆ. ಕಾನೂನನ್ನು ಉಲ್ಲಂಘನೆ ಮಾಡುವ ಮೂಲಕ ಕೆಎಎಸ್ ಅಧಿಕಾರಿಯಾಗಿರುವ ನೂರ್ ಜಾಹರ್ ಖಾನಂ ಅವರನ್ನು ಈ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಇದು ನಿಯಮದ ಉಲ್ಲಂಘನೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ದೂರು ನೀಡಿದ್ದರು.
ನೂರ್ ಜಾಹರ್ ಖಾನಂ ಅವರು ಸಿಇಒ ಹುದ್ದೆಗೆ ಅನರ್ಹರು ಎಂದು ಶಶಿಕಾಂತ ಆರೋಪಿಸಿದ್ದರು. ಈ ಕುರಿತು ಕರ್ನಾಟಕ ಆಡಳಿತ ನ್ಯಾಯಮಂಡಳಿ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಕಲಬುರಗಿಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯು, ನೂರ್ ಜಾಹರ್ ಖಾನಂ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಅಲ್ಲದೆ, ನಿಯಮ ಉಲ್ಲಂಘಿಸಿ ಜಿಲ್ಲಾ ಪಂಚಾಯತ್ ಸಿಇಒ ಹುದ್ದೆಗೆ ಇವರನ್ನು ನೇಮಕ ಮಾಡಿರುವುದನ್ನು ಸಹ ರದ್ದು ಮಾಡಿದೆ.
ಇದನ್ನೂ ಓದಿ: ರಾಯಚೂರು ಕಲುಷಿತ ನೀರು ಸೇವನೆ ಪ್ರಕರಣ: ಮತ್ತೊಬ್ಬ ಮಹಿಳೆ ಸಾವು