Site icon Vistara News

ಪಠ್ಯದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿಲ್ಲ; ಆರಗ ಜ್ಞಾನೇಂದ್ರ

home minister

ಶಿವಮೊಗ್ಗ: ಈ ಬಾರಿಯ ಪಠ್ಯ ಪರಿಷ್ಕರಣೆಯಲ್ಲಿ ಕುವೆಂಪು ಅವರನ್ನು ಅವಮಾನ ಮಾಡಿಲ್ಲ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಕುವೆಂಪುರವರ ಕುರಿತ ಪಾಠದಲ್ಲಿ ಕಡಿತಗೊಳಿಸಿತ್ತು. ಆದರೆ, ಈ ಬಾರಿ ರೋಹಿತ್ ಚಕ್ರತೀರ್ಥ‌ ಅವರ ನೇತೃತ್ವದ ಸಮಿತಿಯು ಕುವೆಂಪು ಅವರ ಪಠ್ಯವನ್ನು ಹೆಚ್ಚಿಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಒಕ್ಕಲಿಗರ ಯುವ ಸಮಾವೇಶದಲ್ಲಿ ಗೃಹ ಸಚಿವರು ಪಠ್ಯಪುಸ್ತಕ ವಿವಾದದ ಕುರಿತು ಮಾತನಾಡಿ, ಈ ಬಾರಿಯ ಪಠ್ಯ ಪರಿಷ್ಕರಣೆಯಲ್ಲಿ ಕುವೆಂಪು ಅವರನ್ನು ಅವಮಾನ ಮಾಡುವ ಯಾವುದೇ ಕೆಲಸ ಆಗಿಲ್ಲ. ಜನರಿಗೆ ಯಾವುದೇ ರೀತಿಯ ತಪ್ಪು ಸಂದೇಶ ಹೋಗಬಾರದು. ಈ ಕಾರಣಕ್ಕಾಗಿ ಇದನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದರು.

ಕುವೆಂಪು ರಚಿತ ನಾಡಗೀತೆಯನ್ನು 2017ರಲ್ಲಿ ಅಣಕು ಮಾಡಿ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ನಂತರ ಅದನ್ನು ರೋಹಿತ್ ಚಕ್ರತೀರ್ಥ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿ, ತನಿಖೆ ನಡೆದು ಬಿ ರಿಪೋರ್ಟ್ ಸಲ್ಲಿಕೆಯಾಗಿತ್ತು. ಆದರೆ, ನಮ್ಮ ಸರ್ಕಾರ ಬಂದ ಮೇಲೆ ಆ ಪ್ರಕರಣವನ್ನು ಅಷ್ಟಕ್ಕೇ ಬಿಡದೆ, ನಾಡಗೀತೆಯನ್ನು ತಿರುಚಿ ಬರೆದವರು ಯಾರು ಎಂಬ ಬಗ್ಗೆ ತನಿಖೆಗೆ ಮುಂದಾಗಿದ್ದೇವೆ ಎಂದು ಆರಗ ತಿಳಿಸಿದರು.

ಇದನ್ನೂ ಓದಿ: ಆರಗ ಜ್ಞಾನೇಂದ್ರ ರಾಜೀನಾಮೆಗೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಹಿಂದು ಜಾಗರಣಾ ವೇದಿಕೆಯಿಂದ ಪ್ರತಿಭಟನೆ

Exit mobile version