ಬೆಂಗಳೂರು: ರಾಜ್ಯ ಸರಕಾರ ಕೊನೆಗೂ ಓಲಾ ಮತ್ತು ಉಬರ್ ಅಗ್ರಿಗೇಟರ್ ಸಂಸ್ಥೆಗಳಿಗೆ ದರ ನಿಗದಿ ಮಾಡಿದೆ. ಕನಿಷ್ಠ ಪ್ರಯಾಣ ದರಕ್ಕಿಂತ ಶೇ. ೫ರಷ್ಟು ಸೇವಾ ತೆರಿಗೆ ಮತ್ತು ಅದಕ್ಕೆ ಪೂರಕವಾದ ಜಿಎಸ್‌ಟಿಯನ್ನು ಸಂಗ್ರಹಿಸಲು ಅವಕಾಶ ನೀಡಿದೆ. ಈ ದರ ಪಟ್ಟಿಯನ್ನು ಸರಕಾರ ಕೋರ್ಟ್‌ಗೆ ಕಳುಹಿಸಬೇಕಾಗಿದೆ. ಹೈಕೋರ್ಟ್ ಇದನ್ನು ಗಮನಿಸಿ, ಅಗ್ರಿಗೇಟರ್‌ಗಳ ಅಭಿಪ್ರಾಯ ಪಡೆದು ತೀರ್ಮಾನ ಹೇಳಬೇಕಾಗಿದೆ.
ಹಾಲಿ ಕನಿಷ್ಠ ದರ + 10% ಪ್ಲಾಟ್‌ಫಾರಂ ಫೀಸ್ + ಜಿಎಸ್‌ಟಿ = ನೂತನ ದರ ಈ ಮಾದರಿಯಲ್ಲಿ ಅಗ್ರಿಗೇಟರ್‌ಗಳು ದರ ವಿಧಿಸಬಹುದು ಎಂದು ಸಾರಿಗೆ ಇಲಾಖೆ ತನ್ನ ದರವನ್ನು ಫೈನಲ್ ಮಾಡಿದೆ. ಅಂದರೆ, ಮೊದಲ ಎರಡು ಕಿ.ಮೀ.ಗೆ ಕನಿಷ್ಠ ದರ 2 ಕಿ.ಮೀ.ಗೆ 30ರಿಂದ 33 ರೂ.ಗೆ ಏರಿಕೆಯಾಗಲಿದೆ.
ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಓಲಾ ಹಾಗೂ ಉಬರ್ ಪ್ರಯಾಣ ದರವನ್ನು ನಿಗದಿ ಮಾಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 15 ದಿನಗಳ ಕಾಲಾವಕಾಶ ನೀಡಿತ್ತು. ಆದ್ರೆ ಕಾಟಾಚಾರಕ್ಕೆ ಸಭೆ ಮಾಡಿ ಸುಮ್ಮನಾಗಿದ್ದ ಸಾರಿಗೆ ಇಲಾಖೆ ಇದೀಗ ದರ ನಿಗದಿ ಮಾಡಿ. ಈ ಬಗ್ಗೆ ಹೈಕೋರ್ಟ್ಗೂ ಸಾರಿಗೆ ಇಲಾಖೆ ವರದಿಯನ್ನು ನೀಡಿದೆ. ಇದೀಗ ಹೈಕೋರ್ಟ್ ತೀರ್ಪು ಬಾಕಿದೆ.
ಓಲಾ, ಉಬರ್, ರ‍್ಯಾಪಿಡೊ ಕಂಪನಿಗಳೊಂದಿಗೆ ಸಭೆ ನಡೆಸಿ ದರ ನಿಗದಿ ಬಗ್ಗೆ ಚರ್ಚಿಸಿದ ಬಳಿಕ ಸಾರಿಗೆ ಇಲಾಖೆ ತನ್ನ ದರವನ್ನು ಅಂತಿಮಗೊಳಿಸಿದೆ. ಅಗ್ರಿಗೇಟರ್ ಸಂಸ್ಥೆಗಳು ಕನಿಷ್ಠ 2 ಕಿ.ಮೀ.ಗೆ 100 ರೂ. ನಿಗದಿ ಮಾಡುವಂತೆ ಡಿಮಾಂಡ್ ಮಾಡಿದ್ದವು. ಅಂದರೆ ಕನಿಷ್ಠ ದೂರವನ್ನು ಎರಡು ಕಿ.ಮೀ.ನಿಂದ ೪ ಕಿ.ಮೀ.ಗೆ ಏರಿಸಲು ಬಯಸಿದ್ದವು.
ಇಂದಿನಿಂದಲೇ ಜಾರಿ
ನಿಜವೆಂದರೆ, ಪ್ರಯಾಣಿಕರಿಗೆ ಹೊರೆಯಾಗದಂತೆ ಕೊನೆಗೂ ದರ ನಿಗದಿ ಮಾಡಿದ ಸಾರಿಗೆ ಅಧಿಕಾರಿಗಳು ತಕ್ಷಣದಿಂದಲೆ ಹೊಸ ಪರಿಷ್ಕೃತ ದರ ಜಾರಿಗೆ ಸೂಚಿಸಿದ್ದಾರೆ. 15 ಅಗ್ರಿಗೇಟರ್ಸ್ ಕಂಪೆನಿಗಳಿಗೆ ಹೊಸ ದರ ಜಾರಿಗೊಳಿಸಿ ಸರ್ಕಾರ ಆದೇಶ ಮಾಡಿದೆ. ಆದರೆ, ಇದಕ್ಕೆ ಅಗ್ರಿಗೇಟರ್ ಸಂಸ್ಥೆಗಳು ಒಪ್ಪಿಗೆ ಕೊಡುತ್ತವಾ? ಹೈಕೋರ್ಟ್‌ನಲ್ಲಿ ಮತ್ತೆ ತಗಾದೆ ಎತ್ತುತ್ತವಾ ಎಂದು ಕಾದು ನೋಡಬೇಕಾಗಿದೆ.
ಹಿಂದಿನ ಸುದದಿ | Ola, uber tariff | ಆ್ಯಪ್ ಆಧರಿತ ಆಟೋರಿಕ್ಷಾ ಸೇವೆಗಳ ದರದ ಬಗ್ಗೆ ನವೆಂಬರ್ 25ರೊಳಗೆ ಅಂತಿಮ ನಿರ್ಧಾರ