ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ಕಡಲತೀರದಲ್ಲಿ ಓಲಿವ್ ರಿಡ್ಲ್ (Olive Riddle) ಪ್ರಭೇದದ ಕಡಲಾಮೆಯೊಂದು ಹಗಲಿನಲ್ಲೇ ಮೊಟ್ಟೆ ಇಡಲು ಆಗಮಿಸಿ ಆಶ್ಚರ್ಯ ಮೂಡಿಸಿದೆ.
ಇದನ್ನೂ ಓದಿ: Kiccha sudeep : ಕಿಚ್ಚ ಸುದೀಪ್ ಮನೆಗೆ ತೆರಳಿದ ಡಿ.ಕೆ. ಶಿವಕುಮಾರ್, ರಾಜಕೀಯದಲ್ಲಿ ಭಾರಿ ಕುತೂಹಲ ಸೃಷ್ಟಿಸಿದ ಭೇಟಿ
ಮುದಗಾ ಕಡಲತೀರಕ್ಕೆ ಹಗಲಿನಲ್ಲಿಯೇ ಕಡಲಾಮೆ ಆಗಮಿಸಿ ಮೊಟ್ಟೆ ಇಟ್ಟು ತೆರಳಿದ್ದು, ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ವಿಭಾಗದ ಕೋಸ್ಟಲ್ ಮರೈನ್ ಸೆಲ್‌ನ ಆರ್‌ಎಫ್‌ಒ ಪ್ರಮೋದ್ ನಾಯಕ ಹಾಗೂ ಸಿಬ್ಬಂದಿ ಆಮೆಯ ಮೊಟ್ಟೆಗಳನ್ನು ರಕ್ಷಣೆ ಮಾಡಿದ್ದಾರೆ. ಓಲಿವ್ ರಿಡ್ಲ್ ಪ್ರಭೇದದ ಆಮೆಗಳು ನವೆಂಬರ್‌ನಿಂದ ಮಾರ್ಚ್‌ವರೆಗೆ ಮೊಟ್ಟೆ ಇಡುತ್ತವೆ. ಕಡಲಾಮೆಗಳು ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ಮಾತ್ರ ಕಡಲತೀರಕ್ಕೆ ಆಗಮಿಸಿ ಮೊಟ್ಟೆಯಿಟ್ಟು ತೆರಳುತ್ತಿದ್ದವು. ಆದರೆ ಅಪರೂಪ ಎನ್ನುವಂತೆ ಕಡಲಾಮೆಯೊಂದು ಹಗಲಿನಲ್ಲೇ ಮೊಟ್ಟೆ ಇಟ್ಟಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ.