ಹೊಸಪೇಟೆ: ಇಂದಿನ ಯುವಕರು ಮುಂದಿನ ಭವಿಷ್ಯವಾಗಿದ್ದು, ಗ್ರಾಮಕ್ಕೊಂದು (Each village) ಗರಡಿ ಮನೆ, ವಾರ್ಡಿಗೊಂದು ಜಿಮ್ (Gym) ನಿರ್ಮಿಸುವ ಆಲೋಚನೆ ಇದೆ ಎಂದು ವಿಜಯನಗರ ಕ್ಷೇತ್ರದ ಅಭ್ಯರ್ಥಿ ಸಿದ್ದಾರ್ಥಸಿಂಗ್ ಹೇಳಿದರು.
ನಗರದ 31ನೇ ವಾರ್ಡಿ ಬಿಟಿಆರ್ ನಗರದ ದೀಪಾಯನ ಶಾಲೆ ಬಳಿಯ ಮೈದಾನದಲ್ಲಿ ಭಾನುವಾರ ಮತಯಾಚನೆಯ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಯೋಗ, ವ್ಯಾಯಾಮ ರೂಢಿಸಿಕೊಳ್ಳಿ
ಆಧುನಿಕ ಯುಗದಲ್ಲಿ ಹಣಕ್ಕಿಂತ ಆರೋಗ್ಯ ಸಂಪತ್ತು ಬಹುಮುಖ್ಯ. ನಾವು ಆರೋಗ್ಯವಾಗಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬಹುದು. ನಮ್ಮ ಎಲ್ಲ ಚಟುವಟಿಕೆಗಳು ನಮ್ಮ ಸ್ವಾಸ್ಥ್ಯವನ್ನು ಅವಲಂಬಿಸಿವೆ. ಯುವಕರು ದುಶ್ಚಟಗಳಿಂದ ದೂರವಿರಬೇಕಿದೆ. ಅಲ್ಲದೇ ತಮ್ಮ ಬದುಕಿನಲ್ಲಿ ನಿಯಮಿತವಾಗಿ ಯೋಗ, ವ್ಯಾಯಾಮ ರೂಢಿಸಿಕೊಳ್ಳುವ ಅಗತ್ಯವಿದೆ. ಈ ಕಾರಣಕ್ಕಾಗಿ ಗರಡಿ ಮನೆ ಹಾಗೂ ಜಿಮ್ ವ್ಯವಸ್ಥೆ ಮಾಡಲಾಗುವುದು. ಯುವ ಶಕ್ತಿಯ ಸ್ವಾಸ್ಥ್ಯ ಕ್ಕಾಗಿ ಇನ್ನು ಹಲವಾರು ಯೋಚನೆಗಳು ನನ್ನಲ್ಲಿದ್ದು, ಯೋಚನೆಯನ್ನು ಯೋಜನೆಯ ರೂಪದಲ್ಲಿ ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಇದನ್ನೂ ಓದಿ: IPL 2023 : ಅರ್ಜೆಂಟಲ್ಲಿ ಉಲ್ಟಾ ಪ್ಯಾಂಟ್ ಹಾಕಿಕೊಂಡು ಬಂದ ವೃದ್ಧಿಮಾನ್ ಸಾಹ! ಏನಾಯಿತು ಮುಂದೆ?
ಯುವತಿಯರ ಶೈಕ್ಷಣಿಕ ಬೆಳವಣಿಗೆಗಾಗಿ ಅಮರಾವತಿಯಲ್ಲಿ ಬೃಹತ್ ಸರ್ಕಾರಿ ಕಟ್ಟಡ ನಿರ್ಮಿಸಿದ್ದು, ಸೌಲಭ್ಯಗಳಲ್ಲಿ ಖಾಸಗಿ ಶಾಲೆಯನ್ನೂ ಮೀರಿಸುವಂತಿದೆ. ಇಲ್ಲಿ ಹೈಸ್ಕೂಲ್, ಪಿಯು ಹಾಗೂ ಡಿಗ್ರಿವರೆಗೂ ಶಿಕ್ಷಣ ಪಡೆಯಬಹುದಾಗಿದೆ ಎಂದು ಸಲಹೆ ನೀಡಿದರು.
ನಗರಸಭೆ ಸದಸ್ಯ ತಾರಿಹಳ್ಳಿ ಜಂಬಯ್ಯ ಮಾತನಾಡಿ, ಸಿದ್ದಾಥ೯ ಸಿಂಗ್ ನಂತಹ ಯುವಕರು, ಕನಸುಗಾರರು ರಾಜಕೀಯ ಕ್ಷೇತ್ರದಲ್ಲಿದ್ದರೆ ಅಭಿವೃದ್ಧಿಗಳು ಇನ್ನಷ್ಟು ನಿರೀಕ್ಷಿಸಬಹುದು. ಯುವ ಶಕ್ತಿ ಮುಂದೆ ಬರಬೇಕು. ಏಳಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಕಸಾಟಿ ಉಮಾಪತಿ, ವಾಡ್೯ ಮುಖಂಡ ಕಾಕುಬಾಳು ರಾಜಣ್ಣ ಮಾತನಾಡಿದರು. ನಗರಸಭೆ ಸದಸ್ಯ ಜೀವರತ್ನಂ ಮುಖಂಡರಾದ ಗೊಗ್ಗ ವಿಶ್ವನಾಥ, ವೆಂಕಟೇಶ್, ಬಂಡೆ ರಂಗಪ್ಪ, ಬಸವರಾಜ, ಶ್ರೀಪಾದ, ಎ.ಎಂ.ಬಸವರಾಜ, ಸಂಗಮೇಶ್, ಪರಮೇಶ ತಾತ, ಬಿಜೆಪಿ ಮಂಡಲ ಉಪಾಧ್ಯಕ್ಷೆ ರೇಖಾರಾಣಿ, ಮಹಿಳಾ ಮೋರ್ಚಾ ಪ್ರಧಾನ ಕಾಯದರ್ಶಿ ರೇಣುಕಾ ಹಾಗೂ ವಾರ್ಡಿನ ನಿವಾಸಿಗಳು ಇದ್ದರು.
ಇದನ್ನೂ ಓದಿ: NEET Exam 2023: ಯಶಸ್ವಿಯಾಗಿ ಮುಗಿದ ನೀಟ್ ಪರೀಕ್ಷೆ; ಕೆಲವು ಪ್ರಶ್ನೆಗಳು ಸ್ವಲ್ಪ ಟಫ್ ಇತ್ತೆಂದ ವಿದ್ಯಾರ್ಥಿಗಳು
ನಿಮ್ಮ ಗೆಲುವು ನಿಶ್ಚಿತ
ನೆಹರು ಕಾಲನಿಯ ಮುಖಂಡ ಶರಣಪ್ಪ ಮಾತನಾಡಿ, ಸಚಿವ ಆನಂದ್ ಸಿಂಗ್ ತಮ್ಮ ಅಧಿಕಾರವಧಿಯಲ್ಲಿ ನಿರೀಕ್ಷೆಗೂ ಮೀರಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿದ್ದಾರೆ. ಅವರ ಪ್ರಗತಿಯ ಕಾರ್ಯಗಳು ನಿಮಗೆ ಶ್ರೀರಕ್ಷೆಯಾಗಿದ್ದು, ನಿಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೆಹರು ಕಾಲೋನಿಯ ನಿವಾಸಿಗಳು ಪಾರ್ಕಿನಲ್ಲಿ ಅಭ್ಯರ್ಥಿ ಸಿದ್ದಾರ್ಥಸಿಂಗ್ ರನ್ನು ಭಾನುವಾರ ಸನ್ಮಾನಿಸಿ ಮಾತನಾಡಿದರು. ನಿಮ್ಮಂತಹ ಯುವಕರನ್ನು ಗುರುತಿಸಿ ಮುನ್ನೆಲೆಗೆ ತರಬೇಕೆಂಬುದು ನರೇಂದ್ರ ಮೋದಿಜಿಯವರ ಕನಸು. ಇದಕ್ಕಾಗಿ ತಮಗೆ ವಿಜಯನಗರದ ಟಿಕೆಟ್ ನೀಡಿದ್ದಾರೆ. ಕ್ಷೇತ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಸಚಿವ ಆನಂದ್ ಸಿಂಗ್ ಪುತ್ರ ತಾವಾಗಿದ್ದು, ಅವರ ಅಭಿವೃದ್ಧಿ ಕಾರ್ಯಗಳು, ಮಾರ್ಗದರ್ಶನದಿಂದಾಗಿ ತಮ್ಮ ಗೆಲುವು ಖಚಿತ ಎಂದರು.ಕಾಲೋನಿಯ ಇತರರು ಮಾತನಾಡಿ ಸಿದ್ಧಾರ್ಥ ಸಿಂಗ್ ರಿಗೆ ಬೆಂಬಲ ವ್ಯಕ್ತಪಡಿಸಿದರು.
ಉದ್ಯೋಗಕ್ಕಾಗಿ ಅರ್ಜಿ ಹಾಕಲು ಸಿದ್ಧರಾಗಿ
ಕಬ್ಬು ಬೆಳೆಗಾರರ ಬದುಕನ್ನು ಕಟ್ಟಿಕೊಡಲು ಚುನಾವಣೆ ಬಳಿಕ ಹಂಪಿ ಶುಗರ್ಸ್ ಗೆ ಅಡಿಗಲ್ಲು ಹಾಕಲಾಗುತ್ತಿದ್ದು, ಕಾರ್ಖಾನೆ ನಿರ್ಮಾಣದಿಂದ ಇಲ್ಲಿನ ಎರಡು ಸಾವಿರ ಯುವಕ, ಯುವತಿಯರಿಗೆ ಉದ್ಯೋಗ ಅವಕಾಶ ಲಭಿಸಲಿದೆ ಎಂದು ಸಿದ್ದಾರ್ಥಸಿಂಗ್ ಹೇಳಿದರು.
ಇದನ್ನೂ ಓದಿ: ಮತ್ತೆ ‘ಕಾಶ್ಮೀರ’ದಲ್ಲಿ ಮೂಗು ತೂರಿಸಿದ ಚೀನಾ; ಪಾಕ್ ನೆಲದಲ್ಲಿ ನಿಂತು ಭಾರತಕ್ಕೆ ಬಿಟ್ಟಿ ಸಲಹೆ!
ಫೈಯರ್ ಆಫೀಸ್ ಹಿಂಭಾಗ ಮಾತನಾಡಿದ ಅವರು, ಹಂಪಿ ಶುಗರ್ಸ್ ಇಲ್ಲಿನ ಕಬ್ಬು ಬೆಳೆಗಾರರ ಭರವಸೆಯ ಬೆಳಕಾದರೆ, ಇಲ್ಲಿನ ರೈತರ ಹಾಗೂ ಇತರೆ ಪಾಲಕರ ಎರಡು ಸಾವಿರ ಮಕ್ಕಳಿಗೆ ಉದ್ಯೋಗ ಸಿಗಲಿದ್ದು, ಅರ್ಹರು ಅರ್ಜಿ ಹಾಕಲು ಈಗಿನಿಂದಲೇ ಸಿದ್ಧರಿರಬೇಕು ಎಂದು ಸಿದ್ದಾರ್ಥಸಿಂಗ್ ಯುವ ಸಮೂಹಕ್ಕೆ ಸಲಹೆ ನೀಡಿದರು.
ಈ ವೇಳೆ ನಗರಸಭೆ ಸದಸ್ಯರಾದ ತಾರಿಹಳ್ಳಿ ಜಂಬಯ್ಯ, ಜೀವರತ್ನಂ, ಮುಖಂಡ ಶಿವುಕುಮಾರ , ಮಂಜುನಾಥ ಇದ್ದರು.