Site icon Vistara News

Electricity bill: ಒಂದು ಹೊತ್ತಿನ ಊಟಕ್ಕೂ ಪರದಾಡುವ ಅಜ್ಜಿ ಮನೆಗೆ ಬಂತು ಒಂದು ಲಕ್ಷ ಕರೆಂಟ್‌ ಬಿಲ್!

Elecrtricity bill

#image_title

ಕೊಪ್ಪಳ:‌ ರಾಜ್ಯದಲ್ಲಿ ವಿದ್ಯುತ್‌ ಬಿಲ್‌ ಏರಿಕೆ (Electricity bill) ಅವಾಂತರ ಒಂದೆರಡಲ್ಲ. ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (KERC) ಇತ್ತೀಚೆಗೆ ವಿದ್ಯುತ್‌ ದರ ಏರಿಸಿದ ಬಳಿಕ ಬೇಕಾಬಿಟ್ಟಿ ಬಿಲ್‌ ಬರುತ್ತಿದೆ ಎಂಬ ಆಪಾದನೆ ಜೋರಾಗಿದೆ. ಕೆಲವರಿಗೆ 50% ಬಿಲ್‌ ಹೆಚ್ಚಳವಾಗಿದ್ದರೆ ಕೆಲವರ ಬಿಲ್‌ ಮೊತ್ತ ಡಬಲ್‌, ತ್ರಿಪಲ್‌ ಆಗಿದೆ ಎಂಬ ದೂರುಗಳು ವ್ಯಾಪಕವಾಗಿದೆ. ಆದರೆ, ಇಲ್ಲೊಬ್ಬ ಅಜ್ಜಿಗೆ ಬಂದಿರುವ ಬಿಲ್‌ ನೋಡಿದರೆ ನೀವು ಹೌಹಾರುತ್ತೀರಿ.

ಈ ಅಜ್ಜಿಗೆ ದಿನದ ಒಂದು ಹೊತ್ತು ಊಟಕ್ಕೂ ಕಷ್ಟವಿದೆ. ಆದರೆ, ಅವರಿಗೆ ಬಂದಿರುವ ವಿದ್ಯುತ್‌ ಬಿಲ್‌ ಮಾತ್ರ ಒಂದು ಲಕ್ಷ ರೂ. ಮೀರಿದೆ. ಸಾಮಾನ್ಯವಾಗಿ ಎಂಬತ್ತೋ ನೂರೋ ಬರುತ್ತಿದ್ದ ಬಿಲ್‌ ಒಮ್ಮಿಂದೊಮ್ಮೆಗೆ ಸಾವಿರ ಪಟ್ಟು ಹೆಚ್ಚಿದ್ದು ನೋಡಿ ಅಜ್ಜಿಗೆ ಶಾಕ್‌ ಆಗಿದೆ. ಒಂದು ಕಡೆ ಎಲ್ಲರಿಗೂ ಉಚಿತ ಕರೆಂಟ್‌, ಯಾರೂ ದುಡ್ಡು ಕಟ್ಟು ಹಾಗೇ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈ ಯೋಜನೆ ಜಾರಿಗೆ ಮೊದಲು ಬೇಕಾಬಿಟ್ಟಿ ಬಿಲ್‌ ಹಾಕಲಾಗಿದೆ!

ಅಂದ ಹಾಗೆ ಈ ಘಟನೆ ನಡೆದಿರುವುದು ಕೊಪ್ಪಳದ ಭಾಗ್ಯ ನಗರದಲ್ಲಿ. ಇಲ್ಲಿನ ಗಿರಿಜಮ್ಮ ಎಂಬವರಿಗೆ ಬಂದಿರುವ ವಿದ್ಯುತ್‌ ಬಿಲ್‌ ಮೊತ್ತ ಬರೋಬ್ಬರಿ 1,03,315 ರೂ!

ಭಾಗ್ಯಜ್ಯೋತಿ ಯೋಜನೆ ಕನೆಕ್ಷನ್‌ಗೂ ಲಕ್ಷ ಲಕ್ಷ ಬಿಲ್!‌

ಕೊಪ್ಪಳದ ಭಾಗ್ಯ ನಗರದಲ್ಲಿ ವಾಸವಾಗಿರುವ ಗಿರಿಜಮ್ಮಾ ಅವರದ್ದು ಸಣ್ಣ ತಗಡಿನ ಶೆಡ್. ಇರುವುದು ಎರಡೇ ಎರಡು ಲೈಟ್. ಮನೇಲಿ ಇರುವುದು 90 ವಯಸ್ಸಿನ ಒಬ್ಬರೇ ಅಜ್ಜಿ.. ಅವರಿಗೆ ನಿಶ್ಚಿತ ಆದಾಯದ ಮೂಲಗಳೇನೂ ಇಲ್ಲ. ಒಂದೊತ್ತಿನ ಊಟಕ್ಕೂ ಪರದಾಡೋ ಪರಿಸ್ಥಿತಿ.

ಇವರಿಗೆ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಇಲ್ಲಿನ ಜೆಸ್ಕಾಂ ಇವರಿಗೆ 70ರಿಂದ 80 ರೂ. ಬಿಲ್‌ ಕೊಡುತ್ತಿತ್ತು. ಆರು ತಿಂಗಳ ಹಿಂದೆ ಇವರ ಮನೆಗೆ ಜೆಸ್ಕಾಂ ಸಿಬ್ಬಂದಿ ಹೊಸ ಮೀಟರ್‌ ಅಳವಡಿಸಿದ್ದರು. ಇದೀಗ ಆರು ತಿಂಗಳಲ್ಲೇ ಕರೆಂಟ್‌ ಬಿಲ್‌ ಒಂದು ಲಕ್ಷ ರೂ.ಯನ್ನು ಮೀರಿ ನಿಂತಿದೆ.

ನನಗೇ ಹೊತ್ತಿನ ಊಟಕ್ಕೆ ಗತಿ ಇಲ್ಲ. ಹೇಗೋ ಒಂದೆರಡು ಬಲ್ಬ್‌ ಹಾಕಿಕೊಂಡು ಬದುಕಿಕೊಂಡಿದ್ದೇನೆ. ಈಗ ಇವರು ಈ ರೀತಿ ಲಕ್ಷಾಂತರ ರೂ. ಬಿಲ್‌ ತಂದು ಕೊಟ್ಟರೆ ನಾನೇನು ಮಾಡಲಿ ಎಂದು ವೃದ್ಧೆ ಗಿರಿಜಮ್ಮ ಕಣ್ಣೀರು ಹಾಕುತ್ತಿದ್ದಾರೆ. ಜೆಸ್ಕಾಂ ಅಧಿಕಾರಿಗಳ ಎಡವಟ್ಟಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ. ವ್ಯಕ್ತವಾಗಿದೆ.

ಇದನ್ನೂ ಓದಿ; Electricity Bill : ಉಚಿತ ವಿದ್ಯುತ್‌ ವಿಷಯ ಬಿಡಿ, ಇಲ್ಲೊಂದು ಮನೆಗೆ 7 ಲಕ್ಷ ರೂ. ಬಿಲ್‌ ಬಂದಿದೆ!

ಮೀಟರ್‌ ರೀಡರ್‌ ಎಡವಟ್ಟು?

ನಿಜವೆಂದರೆ ಇದು ವಿದ್ಯುತ್‌ ದರ ಏರಿಕೆಯ ಎಫೆಕ್ಟ್‌ ಅಲ್ಲ. ಬದಲಾಗಿ ಮೀಟರ್‌ ರೀಡರ್‌ ಮಾಡಿರುವ ಎಡವಟ್ಟು ಎನ್ನಲಾಗುತ್ತಿದೆ. ಮೀಟರ್‌ ರೀಡ್‌ ಮಾಡಿ ಅದನ್ನು ನಮೂದಿಸುವಾಗ ಮಾಡಿರುವ ಎಡವಟ್ಟಿನಿಂದ ಇಷ್ಟೊಂದು ಬಿಲ್‌ ಬಂದಿದೆ ಎನ್ನಲಾಗಿದೆ. ಅಧಿಕಾರಿಗಳು ಇದನ್ನು ಕೂಡಲೇ ಸರಿಪಡಿಸಿ ಮಹಿಳೆಯ ಕಣ್ಣೀರು ಒರೆಸಬೇಕಾಗಿದೆ.

ಇತ್ತೀಚೆಗೆ ಮಂಗಳೂರಿನಲ್ಲೂ ಹೀಗೇ ಆಗಿತ್ತು. ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಎಂಬವರಿಗೆ ಮೀಟರ್ ರೀಡರ್ ನೀಡಿರುವ ಬಿಲ್ ಗಮನಿಸಿದ ಮನೆಮಂದಿಗೆ ಒಮ್ಮೆಗೇ ಸಿಡಿಲು ಬಡಿದಂತಾಗಿತ್ತು.. ವಿದ್ಯುತ್ ಬಿಲ್ ರಶೀದಿಯಲ್ಲಿ ನೀವು 99,338 ಯೂನಿಟ್ ಖರ್ಚು ಮಾಡಿದ್ದೀರಿ ಎಂದು ತಿಳಿಸಲಾಗಿದೆ. 7,71,072 ರೂಪಾಯಿ ಬಿಲ್ ನಮೂದಿಸಲಾಗಿತ್ತು. ಬಳಿಕ ಪರಿಶೀಲಿಸಿದಾಗ ಇದು ಮೀಟರ್‌ ರೀಡರ್‌ ಎಡವಟ್ಟು ಎಂದು ಸ್ಪಷ್ಟವಾಯಿತು. ಕೊನೆಗೆ ತನಿಖೆ ನಡೆಸಿ 2800 ರೂ.ಗಳ ಹೊಸ ಬಿಲ್‌ ನೀಡಲಾಯಿತು.

ಇದನ್ನೂ ಓದಿ: Free Electricity: ಅಡೆತಡೆಗಳ ನಡುವೆಯೂ ಭರ್ಜರಿ ನೋಂದಣಿ; ನಾಲ್ಕೇ ದಿನದಲ್ಲಿ 12.51 ಲಕ್ಷ ಅರ್ಜಿ

Exit mobile version